Widgets Magazine
Widgets Magazine

ಕೊನೆಗೂ ಅಬ್ದುಲ್ ಕಲಾಂ ಅಭಿಮಾನಿಗಳ ಕನಸು ನನಸಾಯ್ತು!

ರಾಮೇಶ್ವರಂ, ಗುರುವಾರ, 27 ಜುಲೈ 2017 (09:52 IST)

Widgets Magazine

ರಾಮೇಶ್ವರಂ: ದೇಶ ಕಂಡ ಮಹೋನ್ನತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎರಡನೇ ಪುಣ್ಯ ತಿಥಿ ಇಂದು. ಅವರ ಹುಟ್ಟೂರು ರಾಮೇಶ್ವರದ ಸಮಾಧಿ ಸ್ಥಳದಲ್ಲಿ ಪ್ರಧಾನಿ ಮೋದಿ ಇಂದು ಸ್ಮಾರಕ ಲೋಕಾರ್ಪಣೆ ಮಾಡಲಿದ್ದಾರೆ.


 
ಕೆಲವು ದಿನಗಳ ಹಿಂದೆ ಕಲಾಂ ಅವರ ಸಮಾಧಿ ಸ್ಥಳಕ್ಕೆ ಸರಿಯಾದ ವ್ಯವಸ್ಥೆಯಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರ  ಅಭಿಮಾನಿಗಳು ಫೋಟೋ ಶೇರ್ ಮಾಡುತ್ತಿದ್ದರು. ಇದೀಗ ಕೊನೆಗೂ ಅಭಿಮಾನಿಗಳ ಆಸೆ ನೆರವೇರಿದೆ.
 
ಡಿಆರ್ ಡಿಒ ವಿಶೇಷವಾಗಿ ವಿನ್ಯಾಸ ಮಾಡಿದ ರಾಷ್ಟ್ರೀಯ ಧ್ವಜ ಮತ್ತು ಕಲಾಂ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಅನಾವರಣಗೊಳಿಸಲಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ‘ಕಲಾಂ ಸೈನ್ಸ್ ವಿಷನ್ 2020’ ಎನ್ನುವ ಬಸ್ ಒಂದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
 
ಇದು ದೇಶದಾದ್ಯಂತ ಸಂಚರಿಸಿ ಕಲಾಂ ಅವರ ಕನಸುಗಳನ್ನು, ಸಾಧನೆಗಳನ್ನು ಪ್ರಚುರಪಡಿಸಿ ನಂತರ ಅವರ ಜನುಮದಿನವಾದ ಅಕ್ಟೋಬರ್ 15 ರಂದು ರಾಷ್ಟ್ರಪತಿ ಭವನ ತಲುಪಲಿದೆ.
 
ಇದನ್ನೂ ಓದಿ..  ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅಬ್ದುಲ್ ಕಲಾಂ ಪ್ರಧಾನಿ ಮೋದಿ ರಾಮೇಶ್ವರಂ ರಾಷ್ಟ್ರೀಯ ಸುದ್ದಿಗಳು Rameshwaram Pm Modi National News Apj Abdul Kalam

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?

ಪಾಟ್ನಾ: ಬಿಹಾರದಲ್ಲಿ ಇಂತಹದ್ದೊಂದು ರಾಜಕೀಯ ಬೆಳವಣಿಗೆಗೆ ಅದೆಷ್ಟೋ ದಿನದಿಂದ ಪೂರ್ವಭಾವಿ ಬೆಳವಣಿಗೆಗಳು ...

news

ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ: ಬೆಳಿಗ್ಗೆ 10ಕ್ಕೆ ಬಿಹಾರ ಸಿಎಂ ಆಗಿ ಪದಗ್ರಹಣ ಮಾಡಲಿರುವ ನಿತೀಶ್

ಆರ್‌ಜೆಡಿ, ಕಾಂಗ್ರೆಸ್ ಜತೆಗಿನ ಮಹಾಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ...

news

ಬಿಜೆಪಿಯವರು ಜಾತಿವಾದಿಗಳಾಗಿದ್ದರಿಂದ ಜಾತಿ ರಾಜಕಾರಣ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಬಿಜೆಪಿಯವರು ಜಾತಿವಾದಿಗಳಾಗಿದ್ದರಿಂದ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ...

news

ನಿತೀಶ್ ಕುಮಾರ್‌ಗೆ ಗಲ್ಲು ಶಿಕ್ಷೆಯಾಗಬಹುದು: ಲಾಲು ಯಾದವ್

ಪಾಟ್ನಾ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ 1991ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಹತ್ಯೆ ...

Widgets Magazine Widgets Magazine Widgets Magazine