ಚಾಕುವಿನಿಂದ ಬೆದರಿಸಿ 20 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್

ಚೆನ್ನೈ, ಶುಕ್ರವಾರ, 13 ಅಕ್ಟೋಬರ್ 2017 (15:48 IST)

ಬಾಯ್‌ಫ್ರೆಂಡ್‌ನೊಂದಿಗೆ ನಿರ್ಜನ ಪ್ರದೇಶದಲ್ಲಿರುವಾಗ ನಾಲ್ವರು ಕಾಮುಕರು ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿ 20 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಘಟನೆ ಕಾಂಚೀಪುರಂ ಜಿಲ್ಲೆಯ ಚೆಯ್ಯೂರ್ ಬಳಿಯಿರುವ ನೆಡುಮಾರನ್‌ ಪಟ್ಟಣದಲ್ಲಿ ನಡೆದಿದೆ.
ಚೆನ್ನೈನಿಂದ 80 ಕಿ.ಮೀ ದೂರದ ಇಸಿಆರ್‌ ರಸ್ತೆಯಲ್ಲಿರುವ ಕೂವತ್ತೂರ್‌ನ ಜವಳಿ ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಮತ್ತು ಆಕೆಯ ಬಾಯ್‌ಫ್ರೆಂಡ್ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಶಂಕಿತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. 
 
ಘಟನೆ ನಡೆದ ಸ್ಥಳದಲ್ಲಿ ನೆರೆಹೊರೆಯವರನ್ನು ವಿಚಾರಣೆ ನಡೆಸಿದಾಗ ಕೆಲ ಯುವಕರು ಅವಸರದಲ್ಲಿ ತಮ್ಮ ಬೈಕ್‌ಗಳೊಂದಿಗೆ ತೆರಳಿರುವ ಮಾಹಿತಿ ಲಭಿಸಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಚೆಯ್ಯೂರ್‌ನಲ್ಲಿರುವ ಯುವತಿ, ತಾನು ನಿರ್ವಹಿಸುತ್ತಿದ್ದ ಅಂಗಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಯುವಕನೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದಳು. ಹಲವಾರು ಬಾರಿ ಇಬ್ಬರು ನಿರ್ಜನ ಪ್ರದೇಶದಲ್ಲಿ ಕೆಲ ಕಾಲ ಸಮಯ ಕಳೆಯುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
 
ಸೋಮುವಾರದಂದು ರಾತ್ರಿ ಅಂಗಡಿ ಮುಚ್ಚಿದ ನಂತರ ಇಬ್ಬರು ನೆಡುಮಾರನ್‌ ಬಳಿಯಿರುವ ನಿರ್ಜನ ಪ್ರದೇಶದಲ್ಲಿ ಮರದ ಕೆಳಗೆ ಕುಳಿತಿದ್ದಾಗ ಆರೋಪಿಗಳು ನೋಡಿ ಅತ್ಯಾಚಾರದ ತಂತ್ರ ರೂಪಿಸಿದ್ದರು. ಒಬ್ಬನು ಬಾಯ್‌ಫ್ರೆಂಡ್‌ಗೆ ಚಾಕುವಿನಿಂದ ಬೆದರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರೆ, ಇತರ ಮೂವರು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
 
ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ನೆಡುಮಾರನ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

Instagramನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್: ಇನ್ ಸ್ಟಾಗ್ರಾಮ್ ನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ...

news

ಕಾಂಗ್ರೆಸ್ ಶಾಸಕರಿಂದಲೇ ನೂತನ ಸಿಎಂ ಆಯ್ಕೆ: ಸಿಎಂ ಸ್ಪಷ್ಟನೆ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ನನ್ನ ನೇತೃತ್ವದಲ್ಲಿಯೇ ನಡೆಯಲಿದೆ. ಆದರೆ, ಹೊಸದಾಗಿ ಆಯ್ಕೆಯಾದ ...

news

ಅತ್ಯಾಚಾರಕ್ಕೆ ವಿರೋಧ: ಮಹಿಳೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿದ ದುರುಳರು

ಪಾಟ್ನಾ: 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ವಿಫಲಗೊಂಡಿದ್ದರಿಂದ ಆಕ್ರೋಶಗೊಂಡ ದುರುಳರು ಆಕೆಯ ...

news

ಪಟಾಕಿ ನಿಷೇಧ ಕುರಿತ ತೀರ್ಪನ್ನು ರಾಜಕೀಯಗೊಳಿಸಬೇಡಿ: ಸುಪ್ರೀಂಕೋರ್ಟ್

ನವದೆಹಲಿ: ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ನಿಷೇಧ ಮಾಡಿರುವಂತೆ ...

Widgets Magazine
Widgets Magazine