ಹೆಲ್ಮೆಟ್ ಹಾಕಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು! ಕಾರಣವೇನು ಗೊತ್ತಾ?!

Patna, ಸೋಮವಾರ, 17 ಜುಲೈ 2017 (10:58 IST)

Widgets Magazine

ಪಾಟ್ನಾ: ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಅಪಘಾತವಾದರೆ ತಲೆಗೆ ಏಟಾಗದಿರಲಿ ಎಂಬ ಕಾರಣಕ್ಕೆಹೆಲ್ಮೆಟ್ ಹಾಕಿಕೊಳ್ಳುವುದು ಸಾಮಾನ್ಯ. ಆದರೆ ಬಿಹಾರದ ಸರ್ಕಾರಿ ಕಚೇರಿಯೊಂದರಲ್ಲಿ ಅಧಿಕಾರಿಗಳು ಕಚೇರಿಯೊಳಗೆ ಕೆಲಸ ಮಾಡುವಾಗಲೂ ಹೆಲ್ಮೆಟ್ ಹಾಕಿಕೊಂಡು ಕೆಲಸ ಮಾಡುತ್ತಾರೆ. ಕಾರಣ ತುಂಬಾ ವಿಚಿತ್ರವಾಗಿದೆ!


 
ಇವರೆಲ್ಲರಿಗೂ ದ್ವಿಚಕ್ರ ವಾಹನವಿರುವುದೇನೋ ಸರಿ. ಆದರೆ ಕಚೇರಿಯೊಳಗೆ ಹೆಲ್ಮೆಟ್ ಯಾಕೆ ಎಂದು ಕೆದಕುತ್ತಾ ಹೋದರೆ ಇಂಟರೆಸ್ಟಿಂಗ್ ಉತ್ತರ ದೊರಕುತ್ತದೆ. ಅಲ್ಲದೆ ನಮ್ಮ ಭಾರತದ ಸರ್ಕಾರಿ ಕಚೇರಿಗಳ ದುರವಸ್ಥೆಯ ವಾಸ್ತವಾಂಶ ಬಿಚ್ಚಿಡುತ್ತದೆ.
 
ಇಲ್ಲಿ ಅಧಿಕಾರಿಗಳು ತಮ್ಮ ತಲೆಯನ್ನು ರಕ್ಷಿಸಿಕೊಳ್ಳುವುದಕ್ಕೇ ಹೆಲ್ಮೆಟ್ ಹಾಕುತ್ತಾರೆ. ಅದೂ ತಮ್ಮ ಕಚೇರಿಯ ಸೂರಿನಿಂದ ನೀರು ತೊಟ್ಟಿಕ್ಕುತ್ತಿರುತ್ತದಂತೆ. ಅಲ್ಲದೆ, ಅದು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಯಾವಾಗ ತಮ್ಮ ತಲೆಗೆ ಬಿದ್ದು ಗಾಯ ಮಾಡುತ್ತದೋ ಎಂಬ ಭೀತಿಯಲ್ಲಿ ಅಧಿಕಾರಿಗಳಿದ್ದಾರೆ.
 
ಇದೇ ಕಾರಣಕ್ಕೆ ಅಂತಹ ಏನೇ ಅನಾಹುತವಾದರೂ, ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಈ ಅಧಿಕಾರಿಗಳು ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಾರಂತೆ! ಈ ಸರ್ಕಾರಿ ಕಚೇರಿಯ ಕಟ್ಟಡ ತುಂಬಾ ಹಳೆಯದಾಗಿದೆ. ಯಾವಾಗ ಬೀಳುತ್ತದೋ ಎನ್ನುವಂತಿದೆ. ಹಾಗಿದ್ದರೂ ನಮ್ಮ ಕರ್ತವ್ಯ ತಪ್ಪಿಸುವಂತಿಲ್ಲವಲ್ಲ? ಅದಕ್ಕೇ ಹೆಲ್ಮೆಟ್ ಹಾಕಿಕೊಂಡು ಕೆಲಸ ಮಾಡುತ್ತೇವೆ ಎಂದಿದ್ದಾರೆ ಅಧಿಕಾರಿಯೊಬ್ಬರು! ಎಲ್ಲಿಗೆ ಬಂತು ನೋಡಿ ನಮ್ಮ ಪರಿಸ್ಥಿತಿ?
 
ಇದನ್ನೂ ಓದಿ.. ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಇಂದು ಘೋಷಣೆ

ರಾಷ್ಟ್ರಪತಿ ಚುನಾವಣೆ ಆರಂಭವಾಗಿರುವಂತೆಯೇ ಇತ್ತ ಎನ್ ಡಿಎ ಮೈತ್ರಿಕೂಟದಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ...

news

ಭಾರತವನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿರುವ ಚೀನಾ

ಬೀಜಿಂಗ್: ಗಡಿಯಲ್ಲಿ ತಗಾದೆ ತೆಗೆಯುತ್ತಿದ್ದ ಚೀನಾ ಭಾರತದ ನೀತಿ ನೋಡಿ ಬೆಚ್ಚಿದೆ. ಗಡಿ ಭಾಗದಲ್ಲಿ ಮಿಲಿಟರಿ ...

news

ನೇತಾಜಿ ಸಾವಿಗೆ ಹೊಸ ಟ್ವಿಸ್ಟ್?

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ಮತ್ತು ಯಾವಾಗ ಮೃತಪಟ್ಟರು ಎನ್ನುವುದು ಇನ್ನೂ ನಿಗೂಢವಾಗಿಯೇ ...

news

ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

ನವದೆಹಲಿ: ನಾವು ನೀವು ರಿಕ್ಷಾದಲ್ಲಿ ಓಡಾಡುವಾಗ ರಿಕ್ಷಾ ಡ್ರೈವರ್ ಜತೆ ಬಾಡಿಗೆಗಾಗಿ ಕಿತ್ತಾಡಿದ ಘಟನೆಗಳು ...

Widgets Magazine