ಜೈಲಿನಲ್ಲೂ ಸೆಕ್ಸ್`ಗಾಗಿ ಹಪಾಹಪಿಸುತ್ತಿರುವ ರಾಮ್ ರಹೀಮ್..!

ರೋಹ್ಟಕ್, ಬುಧವಾರ, 13 ಸೆಪ್ಟಂಬರ್ 2017 (15:36 IST)

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಒಂದೊಂದೇ ಅಕ್ರಮಗಳು ಬಯಲಾಗುತ್ತಿವೆ. ಆಶ್ರಮ ಶೋಧಿಸಿದ ಪೊಲೀಸರು ಸಹ ಬೆಚ್ಚಿ ಬೀಳುವ ಸಂಗತಿಗಳನ್ನ ಪತ್ತೆ ಹಚ್ಚಿದ್ದಾರೆ. ಇದೀಗ, ಕಾವಿ ವೇಷದಲ್ಲಿದ್ದ ಗುರ್ಮೀತ್ ಕಾಮ ಪಿಶಾಚಿ ಎಂಬ ಶಾಕಿಂಗ್ ನ್ಯೂಸ್ ಬಯಲಾಗಿದೆ.   


ಹೌದು, ಅರಮನೆಯಂತಹ ಆಶ್ರಮದಲ್ಲಿ ಜಗತ್ತಿನ ಎಲ್ಲ ಸುಖಗಳನ್ನ ಅನುಭವಿಸುತ್ತಿದ್ದ ಗುಂಬರ್ಮೀತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿ 2 ವಾರ ಕಳೆದಿವೆ. ರಾಮ್ ರಹೀಮ್ ಜೈಲಿನಲ್ಲಿ ಏನೋ ಕಳೆದುಕೊಂಡ ರೀತಿ ಒದ್ದಾಡುತ್ತಿದ್ದಾನೆ. ಸುಸ್ತು, ಅಸಹಜವಾಗಿ ವರ್ತನೆಯಿಂದ ಚಡಪಡಿಸುತ್ತಿದ್ದಾನೆ. ಈ ಸಂಬಂಧ ಪರೀಕ್ಷೆ ನಡೆಸಿದ ವೈದ್ಯರಿಗೆ ಶಾಕ್ ಆಗಿದೆ. ಸ್ವಾಮೀಜಿ ಒಬ್ಬ ಲೈಂಗಿಕ ವ್ಯಸನಿ ಎಂಬ ವಿಷಯ ಬೆಳಕಿಗೆ ಬಂದಿದೆ. ಸೆಕ್ಸ್ ವ್ಯಸನಿಯಾಗಿರುವ ಗುರ್ಮೀತ್`ಗೆ ಜೈಲಿನಲ್ಲಿ ಸೆಕ್ಸ್ ಸಂಪರ್ಕ ಸಿಗದೇ ಈ ರೀತಿ ಆಡುತ್ತಿದ್ದಾನೆ. ಕೂಡಲೇ ಇದಕ್ಕೆ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಗಂಭೀರ ಸಮಸ್ಯೆ ಎದುರಾಗಲಿವೆ ಎಂದು ವೈದ್ಯರು ಸೂಚಿಸಿದ್ದಾರೆ.

ಡೇರಾ ಬಾಬಾ ಮಾದಕ ವಸ್ತು ವ್ಯಸನಿಯೇ ಎಂಬ ಬಗ್ಗೆ ಸ್ಪಷ್ಟ ುತ್ತರ ಸಿಕ್ಕಿಲ್ಲ. ಆದರೆ, ನಿತ್ಯ ಮದ್ಯಸೇವಿಸುತ್ತಿದ್ದ ಬಾಬಾ ಈಗ ಮದ್ಯ ಸಿಗದೇ ಕಂಗಾಲಾಗಿದ್ದಾನೆ. ಗುರ್ಮೀತ್ ನಿತ್ಯ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡ ವಿಶೇಷ ಎನರ್ಜಿ ಡ್ರಿಂಕ್ ಮತ್ತು ಸೆಕ್ಸ್ ಟಾನಿಕ್ ಸೇವಿಸುತ್ತಿದ್ದ ಎಂದು ಡೇರಾ ಸದಸ್ಯನಾಗಿದ್ದ ಗುರುದಾಸ್ ಸಿಂಗ್ ತೋರ್ ಹೇಳಿದ್ದಾನೆ. ಜೈಲಿನಲ್ಲಿ ತನ್ನ ಜೊತೆ ಸ್ವಂತ ಮಕ್ಕಳು ಅಥವಾ ಪತ್ನಿ ಇರಬೇಕೆಂದು ಮನವಿ ಮಾಡುವುದನ್ನ ಬಿಟ್ಟು ಫಿಸಿಯೋ ಥೆರಪಿಸ್ಟ್ ಎಂಬ ಕಾರಣ ನೀಡಿ ಹನಿಪ್ರೀತ್ ಸಿಂಗ್`ಳನ್ನ ಜೊತೆಗೆ ಇರಿಸಿಕೊಳ್ಳಲು ಕೇಳಿದ್ದ ಗುರ್ಮೀತನ ವರ್ತನೆ ನೋಡಿದರೆ ಅವನ ಅಸಲಿ ರೂಪದ ದರ್ಶನವಾಗುತ್ತೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗುರ್ಮೀತ್ ರಾಮ್ ರಹೀಮ್ ಸೆಕ್ಸ್ ಡೇರಾ ಸಚ್ಚಾ ಸೌಧ Sex Dera Sachcha Soudha Gurmeeth Ram Rahim

ಸುದ್ದಿಗಳು

news

ಪ್ರಿಯಕರನಿಂದಲೇ ಹತ್ಯೆಯಾದ 17 ವರ್ಷದ ವಿದ್ಯಾರ್ಥಿನಿ

ಹೈದ್ರಾಬಾದ್: ನಗರದ ಹೊರವಲಯದಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು ಆಕೆಯ ...

news

ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಸಿದ್ದಗಂಗಾ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂದು ಹೇಳಿದ್ದಾರೆಂದು ಹೇಳಿದ್ದ ಜಲಸಂಪನ್ಮೂಲ ಸಚಿವ ...

news

ಹುಬ್ಬಳ್ಳಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

ಹುಬ್ಬಳ್ಳಿ: ಹಳ್ಳದಲ್ಲಿಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ಸ್ಥಳೀಯರೇ ರಕ್ಷಿಸಿರುವ ಘಟನೆ ನವಲಗುಂದ ...

news

ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ: ಡಿ.ಕೆ. ಶಿವಕುಮಾರ್

ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕರೆ ...

Widgets Magazine