ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ - ಜ| ಬಿಪಿನ್‌ ರಾವತ್‌

ನವದೆಹಲಿ, ಶುಕ್ರವಾರ, 11 ಜನವರಿ 2019 (11:44 IST)

ನವದೆಹಲಿ : ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದರೂ ಕೂಡ ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ ಎಂದು ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹೇಳಿದ್ದಾರೆ.


ಸೇನಾ ಮುಖ್ಯಾಲಯದಲ್ಲಿ ವಾರ್ಷಿಕ ಸುದ್ದಿಗೋಷ್ಠಿಯ ವೇಳೆ ಪತ್ರಕರ್ತರು ‘ಸೆಕ್ಷನ್‌ 377ನ್ನು ಸುಪ್ರೀಂ ಕೋರ್ಟ್‌ ಸಕ್ರಮಗೊಳಿಸಿದ್ದು, ಸೇನೆಯಲ್ಲಿ ಸಲಿಂಗಿಗಳ ನಿಯೋಜನೆ ಸಾಧ್ಯವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜ| ಬಿಪಿನ್‌ ರಾವತ್‌ ಅವರು,’ ಸೇನೆಯಲ್ಲಿ ಇದರ ಪಾಲನೆಗೆ ನಾವು ಬಿಡುವುದಿಲ್ಲ. ಹಾಗಂತ ನಾವೇನೂ ಕಾನೂನಿಗಿಂತ ಮಿಗಿಲಲ್ಲ. ಆದರೆ, ಬಾಹ್ಯ ಜಗತ್ತಿನಲ್ಲಿ ಅನುಭವಿಸುವ ಕೆಲವು ಸ್ವಾತಂತ್ರ್ಯಗಳು ಸೇನೆಯನ್ನು ಸೇರಿದಾಗ ಲಭಿಸುವುದಿಲ್ಲ. ಹೀಗಾಗಿ ಹೊರಜಗತ್ತಿನ ನಿಯಮಗಳಿಗೂ ಸೇನೆಯಲ್ಲಿನ ನಿಯಮಗಳಿಗೂ ವ್ಯತ್ಯಾಸವಿದೆ’ ಎಂದು ತಿಳಿಸಿದ್ದಾರೆ.


ಸೇನೆಯು ಸಂಪ್ರದಾಯವಾದಿಯಾಗಿದೆ. ಅದನ್ನು (ಸಲಿಂಗಕಾಮವನ್ನು) ಸೇನೆಯಲ್ಲಿ ನಡೆಸಲು ಬಿಡುವುದಿಲ್ಲ. ಸೇನೆಗೆ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕಾನೂನುಗಳಿವೆ’ ಎಂದೂ ಅವರು ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ: ಹೈ.ಕ.ಮಂಡಳಿ ಕಾರ್ಯದರ್ಶಿ ಮಾಡಿದ್ದೇನು ಗೊತ್ತಾ?

ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಹಮ್ಮಿಕೊಂಡಿರುವ ತೀವ್ರ ನಿಗಾ ಕಲಿಕಾ ತರಗತಿಗಳಿಗೆ ಹೈದ್ರಾಬಾದ್ ...

news

ಸಿಬಿಐ ಮುಖ್ಯಸ್ಥ ಹುದ್ದೆಯಿಂದ ಅಲೋಕ್‌ ವರ್ಮಾ ವಜಾ

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಮೋದಿ ನೇತೃತ್ವದ ಆಯ್ಕೆ ...

news

ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಪತಿ ಮಾಡಿದ್ದೇನು ಗೊತ್ತಾ?

ಮುಂಬೈ : ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿದ ಪ್ರಕರಣವೊಂದು ಇತ್ತೀಚೆಗೆ ...

news

ಪಾಕಿಸ್ತಾನದ ಟಿವಿ ಚಾನೆಲ್ ಗಳಿಗೆ ಹೊಸ ರೂಲ್ಸ್ ನ್ನು ವಿಧಿಸಿದ ಪಿಇಎಂಆರ್‌ಎ. ಏನದು ಗೊತ್ತಾ?

ಇಸ್ಲಾಮಾಬಾದ್ : ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನುಮುಂದೆ ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ...

Widgets Magazine