ಉತ್ತರಪ್ರದೇಶ ರೈತರ ಸಾಲ ಮನ್ನಾಗೆ ನಾನೇ ಕಾರಣ: ರಾಹುಲ್ ಗಾಂಧಿ

ವಡೋದರಾ, ಬುಧವಾರ, 27 ಸೆಪ್ಟಂಬರ್ 2017 (13:03 IST)

ರೈತರ ಸಾಲ ಮನ್ನಾಗೆ ನಾನೇ ಕಾರಣ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ಎರಡು ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ರಾಹುಲ್, ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡಲು ಸಿದ್ದವಿಲ್ಲ. ಆದರೆ ಐವರು ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ದೇಶದಾದ್ಯಂತ ರೈತರು, ಸಣ್ಣ ವ್ಯಾಪಾರಿಗಳು, ಸಾಮಾನ್ಯ ಜನತೆ ಕಂಗಾಲಾಗಿದ್ದಾರೆ. ಆದರೆ, ಮೋದಿ ಸರಕಾರ ಕೇವಲ ಬೃಹತ್ ಉದ್ಯಮಿಗಳಿಗೆ ಅಚ್ಚೇ ದಿನ್ ತಂದಿದೆ ಎಂದು ಕಿಡಿಕಾರಿದರು.
 
ಸಾಮಾನ್ಯ ಜನತೆಗೆ ಗುಜರಾತ್ ಮಾಡೆಲ್ ಸಂಪೂರ್ಣ ವಿಫಲವಾಗಿದ್ದು, ಕೈಗಾರಿಕೋದ್ಯಮಿಗಳ ಪಾಲಿಗೆ ಸ್ವರ್ಗವಾಗಿದೆ. ಬಡವರು, ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ದೇವಮಾನವನ ಬಂಧನ

ಸೀತಾಪುರ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸ್ವಯಂಘೋಷಿತ ದೇವಮಾನವನನ್ನು ...

news

30 ಜನರನ್ನು ಹತ್ಯೆಗೈದು ಆಹಾರವಾಗಿ ಸೇವಿಸಿದ ದಂಪತಿಗಳು ಅರೆಸ್ಟ್

ಮಾಸ್ಕೋ: 30 ಅಮಾಯಕ ಜನರಿಗೆ ಡ್ರಗ್ಸ್ ನೀಡಿ ಹತ್ಯೆಗೈದಿದ್ದಲ್ಲದೇ ಅವರನ್ನು ದೇಹವನ್ನು ಬೇಯಿಸಿ ತಿಂದ ಹೃದಯ ...

news

ರಾಜ್ಯದಲ್ಲಿ ರಾತ್ರಿ ವರುಣನ ಅಬ್ಬರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಜನ ಜೀವನ ...

news

ಶಶಿಕಲಾ ನಟರಾಜನ್ ಪತಿ ಸ್ಥಿತಿ ಗಂಭೀರ

ಚೆನ್ನೈ : ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್ ಪತಿ ನಟರಾಜನ್ ಆರೋಗ್ಯ ಸ್ಥಿತಿ ...

Widgets Magazine