Widgets Magazine
Widgets Magazine

ನರಿ ಬುದ್ಧಿ ತೋರಿಸಿದ ಪಾಕ್ ಮೇಲೆ ಹುಲಿಯಂತೆ ಎರಗಿದ ಭಾರತೀಯ ಸೇನೆ ಮಾಡಿದ್ದೇನು ಗೊತ್ತಾ?!

ನವದೆಹಲಿ, ಮಂಗಳವಾರ, 16 ಜನವರಿ 2018 (09:06 IST)

Widgets Magazine

ನವದೆಹಲಿ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ವಿನಾಕಾರಣ ಶೆಲ್ ದಾಳಿ ಮಾಡಿ ನರಿ ಬುದ್ಧಿ ತೋರಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.
 

ನಿನ್ನೆ ಗಡಿನಿಯಂತ್ರಣ ರೇಖೆ ಬಳಿ ಮೆಂಥಾರ್ ಎಂಬಲ್ಲಿ ಪಾಕ್ ಸೈನಿಕರ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ ಒಬ್ಬ ಮೇಜರ್ ಜನರಲ್ ಸೇರಿದಂತೆ 7 ಪಾಕ್ ಯೋಧರನ್ನು ಹತ್ಯೆ ಮಾಡಿದೆ. ಅಲ್ಲದೆ ಒಂದು ಪಾಕ್ ಸೇನಾ ಶಿಬಿರವನ್ನೂ ಧ್ವಂಸಗೊಳಿಸಿದೆ.
 
ಶನಿವಾರ ಪಾಕ್ ಪಡೆಗಳು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರಿಂದ ಓರ್ವ ಯೋಧ ಹುತಾತ್ಮನಾಗಿದ್ದ. ಪಾಕ್ ದಾಳಿಗೆ ಎಚ್ಚೆತ್ತ ಭಾರತೀಯ ಸೈನಿಕರು ಕೂಡಲೇ ಪ್ರತಿದಾಳಿ ನಡೆಸಿದ್ದರು. ಇದೀಗ ಭಾರತೀಯ ಸೇನೆ ಸರಿಯಾಗಿಯೇ ಸೇಡು ತೀರಿಸಿಕೊಂಡಿದೆ.
 
ಆದರೆ ಪಾಕ್ ಮಾತ್ರ ಎಂದಿನ ವರಸೆ ತೋರಿದ್ದು, ದಾಳಿಯಲ್ಲಿ ನಮ್ಮ ನಾಲ್ವರು ಯೋಧರು ಮಾತ್ರ ತೀರಿಕೊಂಡಿದ್ದಾರೆ. ಭಾರತೀಯ ಸೈನಿಕರನ್ನೂ ನಾವು ಹೊಡೆದುರುಳಿಸಿದ್ದೇವೆ ಎನ್ನುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಭಾರತೀಯ ಸೇನೆ ಪಾಕಿಸ್ತಾನ ಸೇನೆ ರಾಷ್ಟ್ರೀಯ ಸುದ್ದಿಗಳು ಭಾರತ-ಪಾಕ್ ಗಡಿ Indian Army Pakisthan Army India-pak Boarder National News

Widgets Magazine

ಸುದ್ದಿಗಳು

news

ಸಚಿವ ರೋಷನ್ ಬೇಗ್, ಮಕ್ಕಳಿಗೆ ಇಡಿಯಿಂದ ನೋಟಿಸ್ ಜಾರಿ

ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರಿಗೆ ಜಾರಿ ನಿರ್ದೇಶನಾಲಯದಿಂದ (ಇಡಿ)ನೋಟಿಸ್ ...

news

ಜೆಡಿಎಸ್ ಶಾಸಕ ಸುರೇಶ್ ಬಾಬು ಅವರಿಗೆ ಭೂಗತ ಪಾತಕಿಯೊಬ್ಬರಿಂದ ಬೆದರಿಕೆಯ ಕರೆ

ಬೆಂಗಳೂರು : ತುಮಕೂರು ಜಿಲ್ಲೇ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಅವರಿಗೆ ಭೂಗತ ಪಾತಕಿ ರವಿ ...

news

ಬಿಜೆಪಿಯಲ್ಲಿ ಯಡಿಯೂರಪ್ಪ ರಬ್ಬರ್‌ ಸ್ಟಾಂಪ್‌ ಎಂದ ಮಾಜಿ ಸಚಿವ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಪಕ್ಷದಲ್ಲಿ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ...

news

ಹನುಮಾನ್‌ ಮಂದಿರಕ್ಕೆ ಭೇಟಿಯ ಮೂಲಕ ರಾಹುಲ್‌ಗಾಂಧಿ ಪ್ರವಾಸ ಆರಂಭ

ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಯ್‌ಬರೇಲಿ ಪ್ರವಾಸ ...

Widgets Magazine Widgets Magazine Widgets Magazine