ಕಾಂಗ್ರೆಸ್ 70 ವರ್ಷ ಸಂವಿಧಾನ ಸಂರಕ್ಷಿಸಿದ್ದಕ್ಕೇ ಮೋದಿಯಂತಹ ಚಾಯ್ ವಾಲಾ ಪ್ರಧಾನಿಯಾಗಿರೋದು: ಖರ್ಗೆ

ನವದೆಹಲಿ, ಸೋಮವಾರ, 9 ಜುಲೈ 2018 (10:08 IST)

ನವದೆಹಲಿ: ಕಾಂಗ್ರೆಸ್ ನ್ನು ಬೇಲ್ ಗಾಡಿ ಎಂದು ಟೀಕಿಸಿದ್ದ ಪ್ರಧಾನಿ ಮೋದಿಗೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
 

ರಾಜಸ್ಥಾನದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ನ್ನು ಬೇಲ್ ಗಾಡಿ ಎಂದು ಹಿಗ್ಗಾ ಮುಗ್ಗಾ ಹೀಯಾಳಿಸಿದ್ದರು. ಇದಕ್ಕೆ ಈಗ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
 
‘ಕಾಂಗ್ರೆಸ್ 70 ವರ್ಷ ಸಂವಿಧಾನವನ್ನು ಸಂರಕ್ಷಿಸಿಟ್ಟುಕೊಂಡು ಬಂದಿದ್ದಕ್ಕೇ ಮೋದಿಯಂತಹ ಚಾಯ್ ವಾಲಾ ಪ್ರಧಾನಿಯಾಗಲು ಸಾಧ್ಯವಾಯಿತು. ಆಗಾಗ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಮೋದಿ ಕಾಂಗ್ರೆಸ್ ನ್ನು ದೂಷಿಸುತ್ತಾರೆ. ತುರ್ತು ಪರಿಸ್ಥಿತಿ 43 ವರ್ಷಗಳ ಹಿಂದೆ ಹೇರಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಗೆ ಶಾಕ್ ನೀಡಿದ ದೇವೇಗೌಡರು!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡಲು ಹೊರಟಿದ್ದ ಕಾಂಗ್ರೆಸ್ ...

news

ಆಂಧ್ರ, ಮಹಾರಾಷ್ಟ್ರ ಸಿಎಂಗಳಿಗೆ ಸಿಎಂ ಕುಮಾರಸ್ವಾಮಿ ತುರ್ತು ದೂರವಾಣಿ ಕರೆ ಕೊಟ್ಟಿದ್ದೇಕೆ?

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಒಟ್ಟು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿತ್ತು. ...

news

ವಿರಾಟ್ ಕೊಹ್ಲಿ, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಟ್ವಿಟರ್ ಖಾತೆಗೆ ಬಂದಿದೆ ಕುತ್ತು!

ನವದೆಹಲಿ: ದೇಶದ ಅಗ್ರ ನಾಯಕರ ಪೈಕಿ ಟ್ವಿಟರ್ ನಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕ್ರಿಕೆಟಿಗ ...

news

ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲೆ ಅತ್ಯಾಚಾರ ತಡೆಯಲಾಗದಂತೆ!

ನವದೆಹಲಿ: ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಸಾಧ್ಯವಾಗದು ಎಂದು ಬಿಜೆಪಿ ಸಂಸದ ...

Widgets Magazine
Widgets Magazine