ರೈಲು ದುರಂತ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ, ಶನಿವಾರ, 30 ಸೆಪ್ಟಂಬರ್ 2017 (15:44 IST)

ಪದೇ ಪದೇ ಸಂಭವಿಸುತ್ತಿರುವ ರೈಲು ದುರಂತದ ಬಗ್ಗೆ ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ದುರಂತ ಸಂಭವಿಸಿದ ಕೂಡಲೇ ಸಚಿವರನ್ನು ಬದಲಾಯಿಸುವುದು ಸರಿಯಲ್ಲಿ ಇಲಾಖೆಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ. ರೈಲ್ವೆ ಇಲಾಖೆಗೆ ಮೂಲಭೂತ ಸೌಕರ್ಯ ಒದಗಿಸುವುದು ಅಗತ್ಯವಾಗಿದೆ ಎಂದು ತಿರುಗೇಟು ನೀಡಿದೆ.
 
ರೈಲ್ವೆ ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವುದು ಅಗತ್ಯವಾಗಿದೆ. ದೇಶದಲ್ಲಿ ರೈಲ್ವೆ ಇಲಾಖೆ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದರೂ ಕೇಂದ್ರ ಸರಕಾರ ಬುಲೆಟ್ ರೈಲು ತರುವ ಬಗ್ಗೆ ಚಿಂತನೆ ನಡೆಸಿದೆ ಎಂದು ಕಾಂಗ್ರೆಸ್ ಸಂಸದೆ ,ಸುಶ್ಮಿತಾ ದೇವಿ ಕಿಡಿಕಾರಿದ್ದಾರೆ.
 
ಸರಣಿ ರೈಲ್ವೆ ಅಪಘಾತಗಳು ನಡೆದರೂ ಕ್ಯಾರೆ ಎನ್ನದ ಪ್ರಧಾನಿ ಕೇವಲ ಸಚಿವ ಸುರೇಶ್ ಪ್ರಭು ಅವರನ್ನು ಎತ್ತಂಗಡಿ ಮಾಡಿ ಪಿಯೂಷ್ ಗೋಯಲ್‌ಗೆ ರೈಲ್ವೆ ಸಚಿವರಾಗಿ ನೇಮಕ ಮಾಡಿದರು. ಆದರೆ, ನಿರಂತರವಾಗಿ ಅಪಘಾತಗಳು ಮುಂದುವರಿದಿವೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
 
ಟಿಕೆಟ್ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರಕಾರ ರೈಲ್ವೆ ಪ್ರಯಾಣಿಕರಿಗೆ ಸುರಕ್ಷತೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮವೋ ಸಂಭ್ರಮ

ಮೈಸೂರು: ನಗರದಾದ್ಯಂತ ದಸರಾ ಹಬ್ಬದ ಸಂಭ್ರಮವೋ ಸಂಭ್ರಮ. ಮೈಸೂರು ಅರಮನೆ ವಿಜೃಂಭಣೆಯಿಂದ ಜಗಮಗಿಸುತ್ತಿದ್ದು, ...

news

ಮುಂದಿನ ಬಾರಿಯು ನಾನೇ ದಸರಾಗೆ ಚಾಲನೆ ನೀಡ್ತೇನೆ: ಸಿಎಂ

ಮೈಸೂರು: ಅರಮನೆಯ ಬಲರಾಮ ದ್ವಾರದ ಬಳಿ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ...

news

ಕನ್ನಡಿಗರ ನಿವಾಸ ನೆಲಸಮ: ಗೋವಾ ಸಿಎಂಗೆ ಪತ್ರ ಬರೆದ ಜಗದೀಶ್ ಶೆಟ್ಟರ್

ಬೆಂಗಳೂರು: ಗೋವಾದ ಬೈನಾ ಬೀಚ್ ಬಳಿಯ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ...

news

ಮುಂಬೈ ಕಾಲ್ತುಳಿತದಲ್ಲಿ ದ.ಕನ್ನಡ ಜಿಲ್ಲೆಯ ಇಬ್ಬರ ಸಾವು

ಮುಂಬೈ: ಮುಂಬೈಯ ಪರೇಲ್ ಎಲ್ಫಿಲ್ಟನ್ ರೈಲ್ವೇ ನಿಲ್ದಾಣದ ಮೇಲ್ಸೇತುವೆಯಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ...

Widgets Magazine
Widgets Magazine