ನೀರವ್ ಮೋದಿಯ 9 ಐಶಾರಾಮಿ ಕಾರುಗಳ ಜಪ್ತಿ!

ಅತಿಥಾ 

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (17:52 IST)

Widgets Magazine

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ–ಮೆಹುಲ್‌ ಚೋಕ್ಸಿ ಒಡೆತನಕ್ಕೆ ಸೇರಿದ ಒಂಬತ್ತು ಐಷಾರಾಮಿ ಕಾರುಗಳನ್ನು ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳು ಜಪ್ತಿ ಮಾಡಿರುವ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಘೋಸ್ಚ್, ಫಾರ್ಷ್ ಪನಮೆರಾ, 2 ಮರ್ಸಿಡೀಸ್ ಬೆಂಜ್ ಜಿಎಲ್ 350 ಸಿಡಿಐ, ಮೂರು ಹೋಂಡಾ ಕಾರುಗಳು, ಟೋಯೋಟಾ ಫಾರ್ಚುನರ್ ಮತ್ತು ಟೋಯೊಟಾ ಇನ್ನೋವಾ ಕಾರುಗಳನ್ನು ಆಧಿಕಾರಿಗಳು ಜಪ್ತಿ ಮಾಡಿದ್ದಾರೆ.
 
ಮುಂಬೈ ಬಳಿಯ ಅಲಿಬಾಗ್‌ನಲ್ಲಿರುವ ನೀರವ್‌ ಮೋದಿಯ ₹32 ಕೋಟಿ ವೆಚ್ಚದ ಐಷಾರಾಮಿ ತೋಟದ ಮನೆಯನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಗಿಲಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅನಿಯತ್ ಶಿವರಾಮನ್ ಅವರ ನಿವಾಸವನ್ನು ಸಹ ಜಪ್ತಿ ಮಾಡಿದ್ದಾರೆ.
 
ಇದಲ್ಲದೆ ನೀರವ್ ಮೋದಿಗೆ ಸೇರಿದ ಸುಮಾರು 7.80 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ಸ್ ಮತ್ತು ಷೇರುಗಳು, ಮೆಹುಲ್ ಚೋಕ್ಸಿಯ ಸುಮಾರು 86.72 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಾದಾಯಿ ವಿವಾದದಲ್ಲೂ ರಾಜ್ಯಕ್ಕೆ ನ್ಯಾಯ– ಸಿದ್ದರಾಮಯ್ಯ ವಿಶ್ವಾಸ

ಕಾವೇರಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನದಿಯ ನೀರು ಯಾವ ರಾಜ್ಯದ ಸ್ವತ್ತೂ ಅಲ್ಲ ಎಂದಿದೆ, ಆದ್ದರಿಂದ ...

news

ಬೇನಾಮಿ ಆಸ್ತಿ ಮಾಡಿಕೊಂಡಿರುವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ– ಶೆಟ್ಟರ್

ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಆರೋಪ ಕೇಳಿಬಂದಿರುವ ...

news

ಸಿದ್ದರಾಮಯ್ಯ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ– ಯಡಿಯೂರಪ್ಪ

ಬಿಜೆಪಿಯನ್ನು ಹತ್ತಿಕ್ಕಲು ಕಾಂಗ್ರೆಸ್‌ ಗೂಂಡಾಗಳು ಹಲ್ಲೆಗೆ ನಡೆಸುತ್ತಿದ್ದಾರೆ, ಮುಖ್ಯಮಂತ್ರಿ ...

news

ಹಸಿವು ಮುಕ್ತ ರಾಜ್ಯ ಸಾಕಾರ– ಸಿದ್ದರಾಮಯ್ಯಗೆ ತೃಪ್ತಿ

ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವುದು ನಮ್ಮ ಕನಸಾಗಿತ್ತು. ಈಗ ಅದು ಸಾಧ್ಯವಾಗಿದ್ದು, ಇದಕ್ಕಿಂತ ...

Widgets Magazine