ರಾಷ್ಟ್ರಪತಿ ಭವನದ ‘ನಾಥ’ ಯಾರಾಗ್ತಾರೆ? ಹೇಗೆ ನಡೆಯುತ್ತೆ ಮತ ಎಣಿಕೆ?

NewDelhi, ಗುರುವಾರ, 20 ಜುಲೈ 2017 (09:16 IST)

Widgets Magazine

 ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಪ್ರತಿಷ್ಠಿತ ರಾಷ್ಟ್ರಪತಿ ಭವನಕ್ಕೆ ಮುಂದಿನ ಐದು ವರ್ಷಗಳಿಗೆ ಯಾರು ಒಡೆಯರಾಗಿರುತ್ತಾರೆ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ದೊರಕಲಿದೆ.


 
ಎನ್ ಡಿ ಎ ಅಭ್ಯರ್ಥಿ ರಮಾನಾಥ್ ಕೋವಿಂದ್ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಪೈಪೋಟಿ ನಡೆದಿತ್ತು. ಬಹುತೇಕ ಎನ್ ಡಿಎ ಅಭ್ಯರ್ಥಿ ರಮಾನಾಥ್ ಗೆಲುವು ಪಕ್ಕಾ ಆಗಿದೆ. ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆದಿತ್ತು.
 
ಇಂದು ಬೆಳಿಗ್ಗೆ 11 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಸಂಜೆ 5 ಗಂಟೆ ವೇಳೆಗೆ ಅಧಿಕೃತವಾಗಿ ಗೆದ್ದವರು ಯಾರೆಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಮೊದಲು ಸಂಸತ್ ಭವನದಲ್ಲಿ ನಡೆದ ಮತದಾನದ ಮತ ಎಣಿಕೆ ನಡೆಯಲಿದೆ. ನಂತರ ವಿವಿಧ ರಾಜ್ಯಗಳಿಂದ ಬಂದ ಮತಪತ್ರಗಳ ಎಣಿಕೆ ನಡೆಯುತ್ತದೆ.
 
ಮತ ಎಣಿಕೆ ಸಂದರ್ಭ ರಾಷ್ಟ್ರಪತಿ ಅಭ್ಯರ್ಥಿಗಳಾದ ಮೀರಾ ಕುಮಾರ್ ಮತ್ತು ರಮಾನಾಥ್ ಉಪಸ್ಥಿತರಿರುತ್ತಾರೆ. ಅಲ್ಲದೆ, ಚುನಾವಣಾ ಆಯೋಗದ ಪ್ರತಿನಿಧಿಗಳ ಕಣ್ಗಾವಲಿನಲ್ಲಿ ಮತಎಣಿಕೆ ನಡೆಯುತ್ತದೆ.
 
ಇದನ್ನೂ ಓದಿ..  ಹೆಂಡತಿ ಬಗ್ಗೆ ಕಾಮೆಂಟ್ ಮಾಡಿದವರ ಬಾಯ್ಮುಚ್ಚಿಸಿದ ಇರ್ಫಾನ್ ಪಠಾಣ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಮಾನಾಥ್ ಕೋವಿಂದ್ ಮೀರಾ ಕುಮಾರ್ ರಾಷ್ಟ್ರಪತಿ ಚುನಾವಣೆ ರಾಷ್ಟ್ರೀಯ ಸುದ್ದಿಗಳು Ramanath Kovind Meira Kumar President Election National News

Widgets Magazine

ಸುದ್ದಿಗಳು

news

ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು, ಮೋದಿಯದ್ದಲ್ಲ: ಸಿಎಂ

ಬೆಂಗಳೂರು: ನಿಜವಾದ ಅರ್ಥದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು ಪ್ರಧಾನಿ ಮೋದಿಯದ್ದಲ್ಲ ಎಂದು ಸಿಎಂ ...

news

ಕೆರೆ ಡಿನೋಟಿಫೈ, ಇದೊಂದು ನಾಚಿಕೆಗೇಡಿನ ಸರಕಾರ: ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಒಣಗಿದ ಕೆರೆಗಳನ್ನು ಡಿನೋಟಿಫೈ ಮಾಡುವ ಸರಕಾರದ ನಿರ್ಧಾರ ನಾಚಿಕೆಗೇಡು ಎಂದು ಮಾಜಿ ...

news

ಪರಪ್ಪನ ಅಗ್ರಹಾರ ಗೋಲ್‌ಮಾಲ್‌ನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ: ಶೆಟ್ಟರ್

ಹುಬ್ಬಳ್ಳಿ: ಪರಪ್ಪನ ಅಗ್ರಹಾರ ಗೋಲ್‌ಮಾಲ್‌ನ್ನು ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆಯ ...

news

ಬಿಎಸ್‌ವೈ ನನ್ನನ್ನು ಸಂಪರ್ಕಿಸಿಲ್ಲ: ಹೇಮಂತ್ ನಿಂಬಾಳ್ಕರ್

ಬೆಂಗಳೂರು: ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಕೇಸ್‌ನಲ್ಲಿ ಸಂತೋಷ್ ಪಾತ್ರವಿಲ್ಲವೆಂದು ಬಿಜೆಪಿ ...

Widgets Magazine