‘ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ’

NewDelhi, ಗುರುವಾರ, 10 ಆಗಸ್ಟ್ 2017 (09:19 IST)

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸದುದ್ದೇಶಕ್ಕೆ ಬಳಕೆಯಾಗಬೇಕಿದ್ದ ವೇದಿಕೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದ್ದು ಮಾತ್ರ ವಿಪರ್ಯಾಸವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸಂಸತ್ತಿನಲ್ಲೇ ಪರೋಕ್ಷವಾಗಿ ಟಾಂಗ್ ಕೊಟ್ಟುಕೊಂಡಿದೆ.


 
ಮೊದಲು ಮಾತನಾಡಿದ ಪ್ರಧಾನಿ ಮೋದಿ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಮಾತನಾಡುವಾಗ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕೈ ಬಿಟ್ಟಿದ್ದರು. ಆ ಬಳಿಕ ಮಾತನಾಡಿದ ಸೋನಿಯಾ ಗಾಂಧಿ ಕೆಲವು ಕೋಮುವಾದಿ ಸಂಘಟನೆಗಳು ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿತ್ತು ಎನ್ನುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
 
ಪ.ಬಂಗಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಇನ್ನು ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಲಿದೆ ಎನ್ನುವ ಮೂಲಕ ಬಿಜೆಪಿ ವಿರೋಧಿ ಘೋಷಣೆ ಮೊಳಗಿಸಿದರು. ಇತ್ತ ರಾಜ್ಯದಲ್ಲೂ ಸಿಎಂ ಸಿದ್ಧರಾಮಯ್ಯ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ನಡೆದ ಜಾಥಾ ಕಾರ್ಯಕ್ರಮದಲ್ಲಿ ರಾಜ್ಯದಿಂದಲೇ ಬಿಜೆಪಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಲಿದೆ ಎಂದು ಹೂಂಕರಿಸಿದರು. ಈ ಮೂಲಕ ದೇಶಭಕ್ತಿಯನ್ನು ನೆನಪಿಸುವ ಕಾರ್ಯಕ್ರಮಕ್ಕೆ ರಾಜಕೀಯಕ್ಕೆ ಮೀಸಲಾಗಿದ್ದು ವಿಪರ್ಯಾಸ.
 
ಇದನ್ನೂ ಓದಿ… ಚೀನಾಗೆ ತಕ್ಕ ಎದಿರೇಟು ಕೊಟ್ಟ ಅರುಣ್ ಜೇಟ್ಲಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚೀನಾಗೆ ತಕ್ಕ ಎದಿರೇಟು ಕೊಟ್ಟ ಅರುಣ್ ಜೇಟ್ಲಿ

ನವದೆಹಲಿ: ಢೋಕ್ಲಾಂ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ವಿದೇಶಾಂಗ ಸಚಿವ ...

news

ಸಚಿವ ರಮಾನಾಥ್ ರೈ ವಾಟ್ಸಪ್‌ಗ್ರೂಪ್‌ಗೆ ಅಶ್ಲೀಲ ಫೋಟೋ ಲಿಂಕ್

ಬೆಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅಭಿಮಾನಿ ಬಳಗದ ವಾಟ್ಸ್‌ಪ್ ಗ್ರೂಪ್‌ಗೆ ಅಶ್ಲೀಲ ವೆಬ್‌ಸೈಟ್ ...

news

ಗುಜರಾತ್‌ನಲ್ಲಿ 14 ರೆಬೆಲ್ ಕಾಂಗ್ರೆಸ್ ಶಾಸಕರ ಉಚ್ಚಾಟನೆ

ಗಾಂಧಿನಗರ: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 14 ರೆಬೆಲ್ ಶಾಸಕರನ್ನು ಕಾಂಗ್ರೆಸ್ ...

news

ಭಾರತ- ಚೀನಾ ಯುದ್ಧದ ಕೌಂಟ್‌ಡೌನ್ ಆರಂಭ: ಚೀನಾ ಡೈಲಿ

ಬೀಜಿಂಗ್: ಸಿಕ್ಕಿಂ ರಾಜ್ಯದ ಡೊಕ್ಲಾಮ್ ನಿಲುವಿನ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ...

Widgets Magazine