ಸಂತಾಪ ಸೂಚನೆ ಬಳಿಕ ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ, ಸೋಮವಾರ, 17 ಜುಲೈ 2017 (13:31 IST)

ನವದೆಹಲಿ:ಇಂದಿನಿಂದ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೊದಲ ದಿನದ  ಕಲಾಪ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಮೃತ ಗಣ್ಯರು ಹಾಗೂ ಇತ್ತೀಚೆಗೆ  ಉಗ್ರರ ದಾಳಿ ಮೃತಪಟ್ಟ ಅಮರ್‌ನಾಥ್‌ ಯಾತ್ರಿಗಳಿಗೆ ಸಂತಾಪ ಸೂಚಿಸಲಾಯಿತು.
 
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಮರನಾಥ್ ಯಾತ್ರೆ ಮೇಲಿನ ದಾಳಿಯನ್ನು ಒಕ್ಕೋರಲಿನಿಂದ ಖಂಡಿಸಲಾಗಿದ್ದು, ಅಂತೆಯೇ ದಾಳಿ ವೇಳೆ ಮೃತಪಟ್ಟ ಯಾತ್ರಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಅಂತೆಯೇ ಇತ್ತೀಚೆಗೆ ಅಗಲಿದ ಸಂಸತ್ ನ ಮಾಜಿ ಸದಸ್ಯರಿಗೂ ಗೌರವ ಸಲ್ಲಿಕೆ ಮಾಡಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.
 
ಆಗಸ್ಟ್ 11ರವರೆಗೂ ಸಂಸತ್ ನ ಉಭಯ ಕಲಾಪಗಳು ನಡೆಯಲಿದ್ದು, ಕಾಶ್ಮೀರ ಹಿಂಸಾಚಾರ, ಡೊಕ್ಲಾಮ್ ವಿವಾದ, ಅಮರನಾಥ್ ಯಾತ್ರೆ ಮೇಲಿನ ದಾಳಿ, ಜಿಎಸ್ ಟಿ ಗೊಂದಲ, ಡಾರ್ಜಲಿಂಗ್ ಹಿಂಸಾಚಾರ ಸೇರಿದಂತೆ ವಿವಿಧ  ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿವೆ. ಇನ್ನು ಕೇಂದ್ರ ಸರ್ಕಾರ ಗ್ರಾಹಕ ರಕ್ಷಣಾ ಮಸೂದೆ, ಜಮ್ಮುಮತ್ತು ಕಾಶ್ಮೀರದಲ್ಲಿ ಜಿಎಸ್ ಟಿ ಜಾರಿ ಕುರಿತ ಮಸೂದೆ  ಸೇರಿದಂತೆ ಒಟ್ಟು 16 ಹೊಸ ಮಸೂದೆಗಳಿಗೆ ಅನುಮೋದನೆ ಪಡೆಯಲು ಕಾರ್ಯತಂತ್ರ ರೂಪಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಸಂಸತ್ ಮುಂಗಾರು ಅಧಿವೇಶನ ರಾಜ್ಯ ಸಭೆ ಲೋಕಸಭೆ ಕಲಾಪ ಮುಂದೂಡಿಕೆ Parliament Monsoon Session Lok Sabha Adjourned For Day

ಸುದ್ದಿಗಳು

news

ಯಡಿಯೂರಪ್ಪ ಪಿಎ ಸಂತೋಷ್ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಬಿಜೆಪಿ ಮುಖಂಡ ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಯಡಿಯೂರಪ್ಪ ...

news

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ: ಜಿಎಸ್ ಟಿಯ ಹೊಸ ಉತ್ಸಾಹದೊಂದಿಗೆ ಅಧಿವೇಶನ ನಡೆಯಲಿದೆ: ಪ್ರಧಾನಿ

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ...

news

ಬಿಎಸ್‌ವೈ ನಿವಾಸದಲ್ಲಿ ಮಧ್ಯರಾತ್ರಿ ತಲಾಶ್ ಸರಿಯಲ್ಲ: ಶೆಟ್ಟರ್ ಕಿಡಿ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಕುರಿತಂತೆ ಆರೋಪಿ ...

news

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಡಿಐಜಿ ರೂಪಾ ಎರಡನೇ ವರದಿ ನೀಡಿದ ಬೆನ್ನಲ್ಲೇ ಅವರ ...

Widgets Magazine