ಸಂಸತ್ ಅಧಿವೇಶನ: ಐವರು ಕಾಂಗ್ರೆಸ್ ಸದಸ್ಯರು ಅಮಾನತು

ನವದೆಹಲಿ, ಸೋಮವಾರ, 24 ಜುಲೈ 2017 (15:14 IST)

ಸಂಸತ್ ಅಧಿವೇಶನದಲ್ಲಿ ಕೋಲಾಹಲ ಗದ್ದಲಕ್ಕೆ ಕಾರಣವಾದ ಐವರು ಕಾಂಗ್ರೆಸ್ ಪಕ್ಷದ ಸಂಸದರನ್ನು ಸಭಾಪತಿ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದ್ದಾರೆ.
ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತು ಅಡಳಿತ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ಉಂಟಾಗಿದೆ.
 
ಪ್ರತಿಪಕ್ಷಗಳು ಗೋರಕ್ಷಕರ ಹಿಂಸಾಚಾರ ಕುರಿತಂತೆ ಚರ್ಚೆ ನಡೆಯಲಿ ಎಂದು ಒತ್ತಾಯಿಸಿದ್ದರೆ, ಅಡಳಿತ ಪಕ್ಷದ  ಸದಸ್ಯರು ಭೋಫೋರ್ಸ್ ಹಗರಣ ಬಗ್ಗೆ ಚರ್ಚೆಯಾಗಲಿ ಎಂದು ಪಟ್ಟು ಹಿಡಿದರು.
 
ಅಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಗದ್ದಲ ಕೋಲಾಹಲ ಆರಂಭವಾಯಿತು. ಕೆಲ ಸದಸ್ಯರು ಸಭಾಪತಿಯರ ಆಸನದತ್ತ ಕಾಗದ ಪತ್ರ ಎಸೆದು ಆಕ್ರೋಶ ವ್ಯಕ್ತಪಡಿಸಿದರು. 
 
ಕಾಂಗ್ರೆಸ್ ಸಂಸದರ ವರ್ತನೆಯಿಂದ ಬೇಸರಗೊಂಡ ಸಭಾಪತಿ ಮಹಾಜನ್ ಐವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ನಕಾರ

1989-90 ರ ಅವಧಿಯಲ್ಲಿ ಕಾಶ್ಮೀರದಲ್ಲಿ ನಡೆದ 700 ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದ 215 ಪ್ರಕರಣಗಳ ...

news

ಕಿಡ್ನ್ಯಾಪ್ ಮಾಡಿ ವ್ಯಾಟ್ಸಪ್ ನಲ್ಲಿ 100 ಕೋಟಿಗೆ ಬೇಡಿಕೆಯಿಟ್ಟರು!

ನವದೆಹಲಿ: ಉದ್ಯಮಿಯೊಬ್ಬರನ್ನು ಅಪಹರಿಸಿ ವ್ಯಾಟ್ಸಪ್ ನಲ್ಲಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ...

news

ಪ್ರತ್ಯೇಕ ಸ್ವತಂತ್ರ ಧರ್ಮ: ಸಿಎಂ ಬಳಿಗೆ ನಿಯೋಗ

ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ಸ್ಥಾಪಿಸಲು ನೆರವಾಗುವಂತೆ ಮಠಾಧೀಶರು ಸಿಎಂ ಸಿದ್ದರಾಮಯ್ಯರನ್ನು ...

news

ಪಾಸ್ ಪೋರ್ಟ್ ಪಡೆಯಲು ಜನನ ಪ್ರಮಾಣ ಪತ್ರದ ಅಗತ್ಯವಿಲ್ಲ

ಇನ್ನುಮುಂದೆ ಪಾಸ್ ಪೋರ್ಟ್ ಪಡೆಯುವುದಕ್ಕೆ ಜನನ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ...

Widgets Magazine