ಗುಜರಾತ್ ಚುನಾವಣೆಗೆ ಹೆದರಿದ ಪ್ರಧಾನಿ ಮೋದಿ, ಬಿಜೆಪಿ: ರಾಹುಲ್ ಗಾಂಧಿ

ನವದೆಹಲಿ:, ಸೋಮವಾರ, 4 ಸೆಪ್ಟಂಬರ್ 2017 (16:58 IST)

Widgets Magazine

ಗುಜರಾತ್ ಮಾದರಿಯ ಶೂನ್ಯತೆಯ ಬಗ್ಗೆ ರಾಜ್ಯದ ಜನತೆಗೆ ಅರಿವಾಗಿದ್ದರಿಂದ ಮುಂಬರುವ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಮತ್ತು ಅಡಳಿತರೂಢ ಬಿಜೆಪಿಗೆ ಹೆದರಿಕೆಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ   
ಅಹ್ಮದಾಬಾದ್‌ನ ಸಬರಮತಿ ನದಿಯ ದಂಡೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯವನ್ನು ಮರೆಮಾಚಲು ಸಾದ್ಯವಿಲ್ಲ. ಮೋದಿ ಸರಕಾರದಿಂದ ಯುವಕರು, ರೈ,ತರು ಮತ್ತು ಸಣ್ಣ ಉದ್ಯಮಿಗಳಿಗೆ ಯಾವುದೇ ಲಾಭವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಉದ್ಘಾಟಿಸಿದ ರಾಹುಲ್ , 22 ವರ್ಷಗಳ ಅಂತರದ ನಂತರ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲಿದೆ. ಕಾಂಗ್ರೆಸ್ ಪಕ್ಷ ಸರಕಾರ ರಚಿಸುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದರು.
 
ರಾಹುಲ್ ಗಾಂಧಿಯವರೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡರಾದ ಅಶೋಕ್ ಗೆಹ್ಲೋಟ್, ಅಹ್ಮದ್ ಪಟೇಲ್, ಮಧುಸೂಧನ್ ಮಿಸ್ತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಾರತ್‌ಸಿನ್ಹಾ ಸೋಳಂಕಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಾಬಾ ರಾಮ್ ರಹೀಮ್ ಆಶ್ರಮದಲ್ಲಿ ಶಸ್ತ್ರಾಸ್ತ್ರ ಭಂಡಾರ ಪತ್ತೆ

ಸಿರ್ಸಾ(ಹರಿಯಾಣಾ): ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ...

news

ಬಿಜೆಪಿಯಿಂದ ಶಾಂತಿ, ಸಾಮರಸ್ಯಕ್ಕೆ ಧಕ್ಕೆ: ಸಚಿವ ರೈ

ಬೆಂಗಳೂರು: ದಕ್ಷಿಣ ಕನ್ನಡ, ಮಂಗಳೂರು ಜಿಲ್ಲೆಯಲ್ಲಿ ಶಾಂತಿ ನೆಲೆಸಿದ ಸಂದರ್ಭದಲ್ಲಿ ಬಿಜೆಪಿ ಬೈಕ್ ರ್ಯಾಲಿ ...

news

ಮನೆಗಳಿಗೆ ನುಗ್ಗಿದ ಕೊಳಚೆ ನೀರು: ಜನರ ಆಕ್ರೋಶ ಎದುರಿಸಿದ ಜಾರ್ಜ್

ಬೆಂಗಳೂರು: ಧಾರಾಕಾರವಾಗಿ ಸುರಿದ ಮಳೆಗೆ ಮನೆಗೆ ಕೊಳಚೆ ನೀರು ನುಗ್ಗಿರುವುದು ವರದಿಯಾಗುತ್ತಿದ್ದಂತೆ ...

news

ಬಿಜೆಪಿಯವರು ಶಾಂತಿ ಕದಡಿದ್ರೆ ಕ್ರಮ ಕೈಗೊಳ್ಳಿ: ಗೃಹ ಸಚಿವರಿಗೆ ಸಿಎಂ ಸೂಚನೆ

ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಮಂಗಳೂರು ಚಲೋ ಕಾರ್ಯಕ್ರಮವನ್ನು ತಡೆಯುವುದು ಬೇಡ. ಶಾಂತಿ ಕದಡಿದ್ರೆ ...

Widgets Magazine