ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿಗೆ 68 ಪೈಸೆ ಚೆಕ್ ಉಡುಗೊರೆ!

ನವದೆಹಲಿ, ಸೋಮವಾರ, 18 ಸೆಪ್ಟಂಬರ್ 2017 (10:36 IST)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ 67 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಹಲವರು ಅವರಿಗೆ ಶುಭ ಹಾರೈಸಿದ್ದಾರೆ. ಆದರೆ ಆಂಧ್ರಪ್ರದೇಶದ ರೈತರ ಗುಂಪೊಂದು 68 ಪೈಸೆ ಚೆಕ್ ನ್ನು ಉಡುಗೊರೆಯಾಗಿ ಕಳುಹಿಸಿದೆ.


 
ರಾಯಲ್ ಸೀಮಾ ಪ್ರದೇಶದ ಬರಪೀಡಿತ ರೈತರು ತಮ್ಮ ಸಮಸ್ಯೆಯನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಈ ರೀತಿ ಮಾಡಿದ್ದಾರೆ. ರಾಯಲ್ ಸೀಮಾ ಸಾಗುನೀತಿ ಸಾಧನಾ ಸಮಿತಿ ಎಂಬ ರೈತರ ಸಂಘ ತಮ್ಮ ಪ್ರದೇಶದ ಬರ ಸಮಸ್ಯೆಯನ್ನು ತಿಳಿಸಲು 68 ಪೈಸೆಯ ಸುಮಾರು 400 ಚೆಕ್ ಗಳನ್ನು ರವಾನಿಸಿದೆ.
 
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ವಿಪಕ್ಷ ನಾಯಕ ಜಗಮೋಹನ್ ರೆಡ್ಡಿ ಇದೇ ಪ್ರದೇಶದವರು. ಹಾಗಿದ್ದರೂ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಈ ಚೆಕ್ ಕಳುಹಿಸುವ ಮೂಲಕ ಪ್ರಧಾನಿಗೆ ನಮ್ಮ ಸಮಸ್ಯೆ ಮುಟ್ಟಲಿ ಎಂಬುದು ಈ ರೈತರ ಆಶಯವಂತೆ.
 
ಇದನ್ನೂ ಓದಿ… ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ

ಪಣಜಿ: ಗೋವಾ ಪ್ರವಾಸ ಮಾಡುವುದೇ ಎಣ್ಣೆ ಹೊಡೆಯೋಕೆ ಎನ್ನುವವರು ಇದ್ದಾರೆ. ಆದರೆ ಇನ್ನು ಮುಂದೆ ಗೋವಾದಲ್ಲಿ ...

news

ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟೀಕೆ

ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಸಭ್ಯ ಪದ ಬಳಸಿ ...

news

ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!

ಬೆಂಗಳೂರು: ಇದುವರೆಗೆ ಮಳೆಯಿಲ್ಲ.. ಬರ.. ಎಂದು ವರುಣ ದೇವನಿಗೆ ಹಿಡಿಶಾಪ ಹಾಕುತ್ತಿದ್ದ ಮಂದಿಗೆ ಇದೀಗ ...

news

ಲಂಚದ ವಿಡಿಯೋ ವೈರಲ್: ಸಂಚಾರಿ ಪೊಲೀಸರಿಗೆ ರಾಮಲಿಂಗಾರೆಡ್ಡಿ ತರಾಟೆ

ಬೆಂಗಳೂರು: ಸಂಚಾರಿ ಪೊಲೀಸರು ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗೃಹಸಚಿವ ...

Widgets Magazine
Widgets Magazine