Widgets Magazine

ಗುರುವಾಯೂರಿನಲ್ಲಿ ತಾವರೆ ಹೂಗಳಿಂದ ತುಲಾಭಾರ ನಡೆಸಿದ ಪ್ರಧಾನಿ ಮೋದಿ

ತಿರುವನಂತರಪುರಂ| Krishnaveni K| Last Modified ಶನಿವಾರ, 8 ಜೂನ್ 2019 (10:58 IST)
ತಿರುವನಂತರಪುರಂ: ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇರಳದ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ವಿವಿಧ ಸೇವೆಗಳನ್ನು ನೆರವೇರಿಸಿದ್ದಾರೆ.

 
ಗುರುವಾಯೂರು ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿನ ಪ್ರಖ್ಯಾತ ಸೇವೆಗಳಲ್ಲೊಂದಾದ ತುಲಾಭಾರ ಸೇವೆ ನಡೆಸಿದ್ದಾರೆ. ಅದರಲ್ಲೂ ಕೃಷ್ಣನಿಗೆ ಪ್ರಿಯವಾದ ತಾವರೆ ಹೂಗಳಿಂದ ತುಲಾಭಾರ ನಡೆಸಿದ್ದು ವಿಶೇಷವಾಗಿತ್ತು.
 
ಎಂದಿನಂತೆ ಪೈಜಾಮ, ಪ್ಯಾಂಟ್ ಧರಿಸದೇ ದೇವಾಲಯಗಳ ನಿಯಮದ ಪ್ರಕಾರ ಪಂಚೆ ವಸ್ತ್ರ ಧರಿಸಿ ಮೋದಿ ದೇವಾಲಯಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಭೇಟಿ ನಿಮಿತ್ತ ದೇವಾಲಯದಲ್ಲಿ ಒಂದು ಗಂಟೆ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :