ಬಾಲೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ತುಟಿಗಳನ್ನು ತಿಂದ ಕಾಮುಕ

ಪಾಣಿಪತ್, ಶನಿವಾರ, 30 ಸೆಪ್ಟಂಬರ್ 2017 (18:33 IST)

ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ, 4 ವರ್ಷ ವಯಸ್ಸಿನ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ಹತ್ಯೆಗೈದ ಘಟನೆ ಬೆಳಕಿಗೆ ಬಂದ ನಂತರ ಗ್ರಾಮಸ್ಥರು ಆರೋಪಿ ಸುಖರಾಜ್ ಸೈಕೋ ಕಿಲ್ಲರ್‌ನನ್ನು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಗ್ರಾಮಸ್ಥರು ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಆರೋಪಿ ಸುಖರಾಜ್ ಹೇಗೆ ವಿವಿಧ ತೊಂದರೆಗಳನ್ನು ಉಂಟುಮಾಡಿದ್ದಾನೆ ಎಂಬ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಖರಾಜ್ ತನ್ನ ಗ್ರಾಮದಲ್ಲಿಯೇ 8 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ ಎನ್ನಲಾಗಿದೆ.
 
ವರದಿಗಳ ಪ್ರಕಾರ, ಹಲವಾರು ಘಟನೆಗಳು ವರದಿಯಾದ ಬಳಿಕ ಗ್ರಾಮಸ್ಥರು ಸುಖರಾಜ್‌ನನ್ನು ಬಹಿಷ್ಕರಿಸಿದ್ದರು. ಬಹಿಷ್ಕಾರದ ಅವಧಿ ಮುಕ್ತಾಯದ ನಂತರ ಗ್ರಾಮಕ್ಕೆ ಹಿಂದುರಿಗಿದ ಸುಖರಾಜ್, ತಮ್ಮ ಗುಣಗಳಲ್ಲಿ ಯಾವುದೇ ಬದಲಾವಣೆ ತಾರದೇ ಬಾಲಕಿಯರ ಮೇಲೆ ಅತ್ಯಾಚಾರವೆಸಗುವುದನ್ನೇ ಕಾಯಕವಾಗಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಸುಖರಾಜ್ ಗ್ರಾಮದಲ್ಲಿನ 4 ವರ್ಷದ ಬಾಲಕಿಗೆ ಚಾಕೋಲೆಟ್ ಆಮಿಷ ತೋರಿಸಿ, ಬಾಲಕಿಯೊಂದಿಗೆ ಗೆಳೆತನ ಸಂಪಾದಿಸಿದ್ದ. ಒಂದು ದಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಹತ್ಯೆಗೈದಿದ್ದ. ಬಾಲಕಿಯ ತುಟಿಗಳನ್ನು ಕತ್ತರಿಸಿ ತಿಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿ ಸುಖರಾಜ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸೈಕೋ ಆರೋಪಿ ಬಾಲಕಿ ಅತ್ಯಾಚಾರ ಪೊಲೀಸ್ Rape Lips Animals Little Girl Sexual Act Psycho Man

ಸುದ್ದಿಗಳು

news

ಫೇಸ್‌ಬುಕ್ ಗೆಳೆಯನಿಂದ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿ

ಬೆಂಗಳೂರು: ಶಾಲೆಗೆ ತೆರಳುತ್ತಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿದ ಆಕೆಯ ಫೇಸ್‌ಬುಕ್ ಸ್ನೇಹಿತನೊಬ್ಬ ...

news

ವಿಶ್ವವಿಖ್ಯಾತ 407ನೇ ದಸರಾ ಜಂಬೂಸವಾರಿಗೆ ಚಾಲನೆ

ಮೈಸೂರು: ವಿಶ್ವವಿಖ್ಯಾತ 407ನೇ ಮೈಸೂರು ದಸರಾ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ...

news

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ರದ್ದುಗೊಳಿಸಿದ ಗೋಏರ್‌ ಸಂಸ್ಥೆ

ಬೆಂಗಳೂರು: ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ಗೋಏರ್‌ ವಿಮಾನಯಾನ ಸಂಸ್ಥೆ ಪ್ರಯಾಣದ ಟಿಕೆಟ್ ...

news

ಬಾಲ್ಯದ ಗೆಳೆಯನ ಜತೆ ಗೊಂಬೆ ನೇಹಾ ಗೌಡ ನಿಶ್ಚಿತಾರ್ಥ

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ನಿಶ್ಚಿತಾರ್ಥ ಅವರ ಬಾಲ್ಯದ ಗೆಳೆಯ ಚಂದನ್ ಜತೆ ...

Widgets Magazine
Widgets Magazine