ಈ ರಸ್ತೆಯಲ್ಲಿ ಉಗುಳಿದ್ರೆ ಜೋಕೆ! ಶಿಕ್ಷೆಯೇನು ಗೊತ್ತಾ?!

ಪುಣೆ, ಸೋಮವಾರ, 12 ನವೆಂಬರ್ 2018 (09:04 IST)

ಪುಣೆ: ರಸ್ತೆಯಲ್ಲಿ ಸಿಕ್ಕ ಸಿಕ್ಕಲ್ಲಿ ಉಗುಳುವುದು ನಮ್ಮ ದೇಶದಲ್ಲಿ ಹೊಸತೇನಲ್ಲ. ಆದರೆ ಪುಣೆಯಲ್ಲಿ ಇಂತಹ ಉಗುಳುಕೋರರಿಗೆ ನಗರ ಪಾಲಿಕೆ ತಕ್ಕ ದಂಡನೆಯನ್ನೇ ಕಾದಿರಿಸಿದೆ!
 
ಅದೇನು ಗೊತ್ತಾ? ಪುಣೆಯನ್ನು ಕ್ಲೀನ್ ಸಿಟಿ ಮಾಡಲು ಪಣ ತೊಟ್ಟಿರುವ ನಗರ ಪಾಲಿಕೆ ಇಲ್ಲಿನ ರಸ್ತೆಯಲ್ಲಿ ಉಗುಳಿದರೆ ಉಗುಳಿದವರ ಕೈಯಲ್ಲೇ ಕ್ಲೀನ್ ಮಾಡಿಸಿ ದೊಡ್ಡ ಪ್ರಮಾಣದ ದಂಡ ವಿಧಿಸಲು ಕಾನೂನೊಂದನ್ನು ರೂಪಿಸಿದೆ.
 
ಕಳೆದ ಒಂದು ವಾರದಲ್ಲಿ ಈ ರೀತಿ ಉಗುಳಿದ ಸುಮಾರು 150 ಮಂದಿಗೆ ಈ ಶಿಕ್ಷೆಯನ್ನು ನೀಡಲಾಗಿದೆಯಂತೆ. ಉಗುಳಿದ್ದನ್ನು ಶುಚಿಗೊಳಿಸಿದ್ದಲ್ಲದೆ, 150 ರೂ. ದಂಡವನ್ನೂ ತೆರಬೇಕಾಯಿತಂತೆ. ಹೀಗಾಗಿ ಪುಣೆಯ ರಸ್ತೆಯಲ್ಲಿ ಓಡಾಡುವ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು. ಈ ನಿಯಮ ನಮ್ಮಲ್ಲೂ ಜಾರಿಗೆ ಬಂದರೆ ಒಳ್ಳೆಯದೇ ಬಿಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೋದರ ಸೊಸೆ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಥಳಿಸಿ ಕೊಂದ ಗ್ರಾಮಸ್ಥರು

ಜಾರ್ಖಂಡ್ : 9 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ 21 ವರ್ಷದ ಯುವಕನೊಬ್ಬನನ್ನು ಗ್ರಾಮಸ್ಥರು ...

news

ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎದುರು ಟಾಪ್ ಲೆಸ್ ಆಗಿ ಪ್ರತಿಭಟನೆ ನಡೆಸಿದ ಮಹಿಳೆ

ಪ್ಯಾರಿಸ್ : ಮಹಿಳಾ ಪ್ರತಿಭಟನಾಗಾರ್ತಿಯೊಬ್ಬಳು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ...

news

ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ

ಬೆಂಗಳೂರು : ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್​ ಅವರು ಸೋಮವಾರ (ಇಂದು) ಬೆಳಗ್ಗೆ ...

news

ತಂದೆಯಿಂದಲ್ಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ

ಥಾಣೆ : 16 ವರ್ಷದ ಅಪ್ರಾಪ್ತ ಮಗಳಿಗೆ ರಕ್ಷಣೆ ನೀಡಬೇಕಾಗಿರುವ ತಂದೆಯೇ ಭಕ್ಷಕನಂತೆ ಆಕೆಯ ಮೇಲೆ ಅತ್ಯಾಚಾರ ...

Widgets Magazine