ಸುಷ್ಮಾ ಸ್ವರಾಜ್`ಗೆ ಥ್ಯಾಂಕ್ಸ್ ಹೇಳಿದ ರಾಹುಲ್ ಗಾಂಧಿ

ನವದೆಹಲಿ, ಭಾನುವಾರ, 24 ಸೆಪ್ಟಂಬರ್ 2017 (16:13 IST)

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಫಲವಾಗಿ ಆರಂಭವಾದ ಐಐಎಂ, ಐಐಟಿ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
 


ಸುಷ್ಮಾ ಜೀ ಥ್ಯಾಂಕ್ಯೂ ಭಾರತದ ಸಾಧನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬಣ್ಣಿಸುವ ಸಂದರ್ಭ ಐಐಟಿ ಮತ್ತ ಐಐಎಂ ಸ್ಥಾಪನೆ ಬಗ್ಗೆ ಪ್ರಸ್ತಾಪಿಸುವ ಮೂಲಕ ಕೊನೆಗೂ  ಕಾಂಗ್ರೆಸ್ ಸರ್ಕಾರದ ಉತ್ತಮ ದೃಷ್ಟಿಕೋನ ಮತ್ತು ಪರಂಪರೆಯನ್ನ ಗುರುತಿಸಿದ್ದೀರಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
 
ವಿಶ್ವಸಂಸ್ಥೆಯಲ್ಲಿ ನಿನ್ನೆ ಭಾರತದ ಸಾಧನೆ ಬಗ್ಗೆ ಪ್ರಸ್ತಾಪಿಸಿದ್ದ ಸುಷ್ಮಾ ಸ್ವರಾಜ್, ಸ್ವಾತಂತ್ರ್ಯಾನಂತರ ಭಾರತದ ಸಾಧನೆಗಳಲ್ಲಿ ಐಐಎಂ ಮತ್ತು ಐಐಟಿ ಸ್ಥಾಪನೆಗಳೂ ಪ್ರಮುಖವಾಗಿವೆ. ಪಾಕಿಸ್ತಾನ ಉಗ್ರರನ್ನ ಸೃಷ್ಟಿಸುವುದರಲ್ಲಿ ಮಾತ್ರ ಸಾಧನೆ ಕಂಡಿದೆ ಎಂದು ವಾಗ್ದಾಳಿ ನಡೆಸಿದ್ದರು. ಭಾರತ ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನದ ಸೂಪರ್ ಪವರ್ ಆಗಿ ಬೆಳೆದಿದೆ. ಪಾಕಿಸ್ತಾನ ಉಗ್ರರನ್ನ ರಫ್ತು ಮಾಡುವ ಕಾರ್ಖಾನೆಯಾಗಿ ಗುರುತಿಸಿಕೊಂಡಿದೆ ಎಂದು ಕಿಡಿ ಕಾರಿದ್ದರು.  

ನಾವು ವಿಶ್ವಕ್ಕೆ ವಿಜ್ಞಾನಿಗಳು, ಸ್ಕಾಲರ್`ಗಳು, ವೈದ್ಯರು, ಎಂಜಿನಿಯರ್`ಗಳು ಪೂರೈಸುತ್ತಿದ್ದೇವೆ. ಐಐಟಿ, ಐಐಎಂ. ಏಮ್ಸ್ ಸ್ಥಾಪಿಸಿದ್ದೇವೆ. ಪಾಕಿಸ್ತಾನ ಉಗ್ರರನ್ನ ಉತ್ಪಾದಿಸುತ್ತಿದೆ. ಉಗ್ರರ ನೆಲೆ ಸೃಷ್ಟಿಸಿದೆ. ಲಷ್ಕರ್ ಇ ತಯಿಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಹಕ್ಕಾನಿ ಜಾಲ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ: ಕೆ.ಎನ್. ರಾಜಣ್ಣ

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ಕಾಂಗ್ರೆಸ್ ಶಾಸಕ ಕೆ.ಎನ್, ...

news

ಮಹದಾಯಿ ವಿವಾದದ ಬಗ್ಗೆ ಗೋವಾ ಸಿಎಂ ಜೊತೆ ಚರ್ಚಿಸಿದ್ದೇನೆ: ಶೆಟ್ಟರ್

ಮಹದಾಯಿ ನದಿ ನೀರು ವಿವಾದದ ಬಗ್ಗೆ ದೂರವಾಣಿ ಮೂಲಕ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೊತೆ ಮಾತುಕತೆ ...

news

ಕಾಂಗ್ರೆಸ್`ಗೆ ಬಿಬಿಎಂಪಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ: ದೇವೇಗೌಡ

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯಲಿದ್ದು, ಕಾಂಗ್ರೆಸ್`ಗೆ ಮೇಯರ್ ಸ್ಥಾನ ...

news

`ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ಸ್ಪರ್ಧಿಸುತ್ತೇನೆ’

ಮಾಜಿ ಸಿಎಂ ಯಡಿಯೂರಪ್ಪ ಉತ್ತರ ಕರ್ನಾಟಕದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರ ವಿರುದ್ಧ ಸ್ಪರ್ಧಿಸಲು ...

Widgets Magazine