Widgets Magazine
Widgets Magazine

ರಾಜ್ಯಸಭೆ ಚುನಾವಣೆ ಬಿಜೆಪಿಗೆ ಅಪಾಯದ ಸೂಚನೆಯೇ?

ನವದೆಹಲಿ, ಬುಧವಾರ, 9 ಆಗಸ್ಟ್ 2017 (10:17 IST)

Widgets Magazine

ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನ ಮೂರೂ ಸೀಟ್ ಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬೇಕೆಂದು ಪ್ರಯತ್ನಿಸಿದ್ದ ಬಿಜೆಪಿಗೆ ಸೋಲಾಗಿದೆ.  ಇದು ಗುಜರಾತ್ ನ ಮುಂದಿನ ರಾಜಕೀಯ ಭವಿಷ್ಯದ ಸೂಚನೆಯೇ?


 
ಕೆಲವೇ ತಿಂಗಳುಗಳಲ್ಲಿ ಇಲ್ಲಿ ವಿಧಾನಸಭೆ ಚುನಾವಣೆಯಿದೆ. ಹಾಗಾಗಿ ಅಹಮ್ಮದ್ ಪಟೇಲ್ ರನ್ನು ಸೋಲಿಸಿ ತನ್ನ ಪ್ರಾಬಲ್ಯ ಇನ್ನೂ ರಾಜ್ಯದಲ್ಲಿ ಯಥಾರೀತಿಯಲ್ಲೇ ಇದೆ ಎಂದು ಸಾರಲು ಬಿಜೆಪಿ ಹೊರಟಿತ್ತು. ಅದೀಗ ಸುಳ್ಳಾಗಿದೆ.
 
ಹೀಗಾಗಿ ಮುಂಬರುವ ಚುನಾವಣೆಗೆ ಬಿಜೆಪಿ ಮತ್ತಷ್ಟು ಪ್ರಯತ್ನ ಪಡುವುದಂತೂ ನಿಜ. ಎಷ್ಟಾದರೂ ಇದು ರಾಜ್ಯಸಭೆ ಚುನಾವಣೆಯಲ್ಲವೇ? ಇದರಿಂದ ಜನರ ಮತ ಯಾರಿಗೆ ಎಂದು ತಿಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ಸಮಾಧಾನಪಟ್ಟುಕೊಳ್ಳಬಹುದು.
 
ಹಾಗಿದ್ದರೂ, ಸತತ ಸೋಲಿನಿಂದ ಕಂಗೆಟ್ಟಿಂದ ಕಾಂಗ್ರೆಸ್ ಗೆ ಈ ಒಂದು ಗೆಲುವು ನೂರಾನೆ ಬಲ ತಂದಿರುತ್ತದೆ. ಇಷ್ಟರವರೆಗೆ ಗುಜರಾತ್ ನಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ನಿರಾಯಾಸವಾಗಿ ಗೆಲ್ಲುತ್ತಿದ್ದ ಬಿಜೆಪಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಮೋದಿ ನಂತರ ಮುಖ್ಯಮಂತ್ರಿಯಾಗಿ ಬಂದ ಆನಂದಿ ಬೆನ್ ಮತ್ತು ವಿಜಯ್ ರೂಪಾನಿ ಅಷ್ಟೊಂದು ಪ್ರಭಾವ ಬೀರಿಲ್ಲ. ಇದೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ಗೆ ಈ ರಾಜ್ಯಸಭೆ ಚುನಾವಣಾ ಫಲಿತಾಂಶ ಟಾನಿಕ್ ಒದಗಿಸಲಿರುವುದಂತೂ ಖಂಡಿತಾ. ಇದು ಬಿಜೆಪಿ ಆತಂಕಪಡಲೇ ಬೇಕಾದ ವಿಚಾರವಾಗಲಿದೆ.
 
ಇದನ್ನೂ ಓದಿ.. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!

ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ ...

news

ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್

ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲ ಪ್ರಹಸನಗಳು ಮುಗಿದು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ...

news

ಹೈಕಮಾಂಡ್`ನಿಂದ ಡಿ.ಕೆ. ಶಿವಕುಮಾರ್`ಗೆ ಭರ್ಜರಿ ಗಿಫ್ಟ್..?

ರಾಜ್ಯಸಭೆ ಚುನಾವಣೆಯ ಕುದುರೆ ವ್ಯಾಪಾರದಿಂದ ಪಾರಾಗಲು ರಾಜ್ಯಕ್ಕೆ ಬಂದ ಗುಜರಾತ್`ನ 44 ಕಾಂಗ್ರೆಸ್ ...

news

‘ರಾಹುಲ್ ಗಾಂಧಿ ವಿದೇಶಕ್ಕೆ ರಹಸ್ಯವಾಗಿ ಹೋಗುವುದೇಕೆ?’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವಾಗ ಯಾಕೆ ಭದ್ರತಾ ಸಿಬ್ಬಂದಿಗಳನ್ನು ...

Widgets Magazine Widgets Magazine Widgets Magazine