ದಿನಕರನ್ ಮತ್ತು 18 ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಕೇಸ್ ದಾಖಲು

ಚೆನ್ನೈ, ಸೋಮವಾರ, 2 ಅಕ್ಟೋಬರ್ 2017 (19:45 IST)

Widgets Magazine

ಅಣ್ಣಾಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ್ರೋಹ ಆರೋಪದಡಿ ಟಿಟಿವಿ ದಿನಕರನ್ ವಿರುದ್ಧ ಕೇಸ್ ದಾಖಲಾಗಿದೆ.


ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನೇತೃತ್ವದ ಸರ್ಕಾರ ಕಿಲ್ಲರ್ ಸರ್ಕಾರವೆಂದು ಟಿಟಿವಿದಿನಕರನ್ ಬೆಂಬಲಿಗರು ಕರ ಪತ್ರ ಮುದ್ರಿಸಿ ಹಂಚಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಿನಕರನ್ ಸೇರಿ ಶಶಿಕಲಾ ಬಣದ 10 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 124(ಎ)ರಡಿ ಕೇಸ್ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಸೇಲಂನ ಅನ್ನದಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಕೆ.ಆರ್.ಎಸ್. ಸರವಣನ್ ಎಂಬಾತ ದೂರು ದಾಖಲಿಸಿದ್ದ. ಸೆಪ್ಟೆಂಬರ್ 29ರಂದು ದಿನಕರನ್ ಬೆಂಬಲಿಗರು ಸರ್ಕಾರದ ವಿರುದ್ಧ ಪಾಂಪ್ಲೇಟ್ ಹಂಚಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನೀಟ್ ಬಗ್ಗೆ ತಪ್ಪು ಮಾಹಿತಿ ಮುದ್ರಿಸಿ ಸರ್ಕಾರದ ವಿರುದ್ಧ ಜನರನ್ನ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆಂದೂ ದೂರಿನಲ್ಲಿ ಆರೋಪಿಸಲಾಗಿತ್ತು.ಇತ್ತೀಚೆಗೆ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡಿದ್ದ 18 ಶಾಸಕರು ಸಹ ೀ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಘೋರಿ ಸಾಧುಗಳನ್ನು ಭೇಟಿ ಮಾಡಿದ ಬಿಎಸ್‌ವೈ

ಬೆಂಗಳೂರು: ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸ್ವಗೃಹದಲ್ಲಿ ಉತ್ತರ ಭಾರತದ ಅಘೋರಿಗಳನ್ನು ಬಿಜೆಪಿ ...

news

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಕೆ.ಎನ್.ರಾಜಣ್ಣ

ತುಮಕೂರು: ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ...

news

ಆರೆಸ್ಸೆಸ್ ದೇಶದಲ್ಲಿ ಗೋಮುಗಲಭೆ ಹರಡುತ್ತಿದೆ: ಕೇರಳ ಸಿಎಂ

ಕೊಚ್ಚಿ: ಆರೆಸ್ಸೆಸ್ ಸಂಘಟನೆ ದೇಶದಲ್ಲಿ ಕೋಮುಗಲಭೆ ಹರಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ...

news

ಪೊಲೀಸ್ ವಿಚಾರಣೆಗೆ ಹಾಜರಾದ ಪ್ರಣವ್ ದೇವರಾಜ್ ಹೇಳಿದ್ದಿಷ್ಟು..

ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣವ್ ದೇವರಾಜ್ ಪೊಲೀಸ್ ವಿಚಾರಣೆಗೆ ...

Widgets Magazine