ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಲು ಶೋಭಾ ಕರಂದ್ಲಾಜೆ ಒತ್ತಾಯ

ನವದೆಹಲಿ, ಗುರುವಾರ, 4 ಜನವರಿ 2018 (14:54 IST)

ಕರಾವಳಿಯಲ್ಲಿ ಹಿಂದೂಗಳ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ಹಿಂದೆ ಪಿಎಫ್‍ಐ, ಎಸ್‍ಡಿಪಿಐ ಹೆಸರುಗಳು ಕೇಳಿಬರುತ್ತಿವೆ. ಆದ್ದರಿಂದ ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆ ಪ್ರಕರಣ ಖಂಡನೀಯವಾಗಿದೆ. ಹಿಂದೂಗಳ ರಕ್ಷಣೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ. ಮುಸ್ಲಿಮರ ಕೊಲೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಳಜಿ ವಹಿಸುತ್ತಾರೆ ಎಂದು ಟೀಕೆ ಮಾಡಿದರು.
 
ಶಾಂತಿಯುತವಾಗಿ ಶವದ ಮೆರವಣಿಗೆ ನಡೆಸಲು ಅವಕಾಶ ಕೂಡ ನೀಡಲಿಲ್ಲ ಎಂದ ಅವರು ಸರ್ಕಾರದ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಆದ್ದರಿಂದ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ರಾಜ್ಯ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೀಪಕ್ ಕೊಲೆಯಲ್ಲಿ ರಮಾನಾಥ್ ರೈ ಕೈವಾಡ– ಬಿಎಸ್‌ವೈ

ಮಂಗಳೂರಿನಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ...

news

ಬಿಜೆಪಿಯಿಂದ ಹುಳಿ ಹಿಂಡುವ ಕೆಲಸ– ಸಿದ್ದರಾಮಯ್ಯ

ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ...

news

ದೀಪಕ್ ಕೊಲೆ ಪ್ರಕರಣ ಸಿಬಿಐ ವಹಿಸಲು ಒತ್ತಾಯಿಸಿ ದೆಹಲಿಯಲ್ಲಿ ಸಂಸದರ ಪ್ರತಿಭಟನೆ

ಹಿಂದೂ ಕಾರ್ಯಕರ್ತ ದೀಪಕ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯ ಬಿಜೆಪಿ ...

news

ಕರುಣೆ ಇಲ್ಲದೇ ಹಿಂದೂಗಳ ಕೊಲೆ; ಬೃಹತ್ ಪ್ರತಿಭಟನೆಗೆ ಸಜ್ಜಾದ ಬಿಜೆಪಿ

ಬೆಂಗಳೂರು : : ಮಂಗಳೂರು ಹಿಂದುಪರ ಸಂಘಟನೆಯ ಕಾರ್ಯಕರ್ತ ಕಾಟಿಪಳ್ಳಿ ದೀಪಕ್ ರಾವ್ ಅವರ ಕೊಲೆ ಪ್ರಕರಣಕ್ಕೆ ...

Widgets Magazine
Widgets Magazine