Widgets Magazine
Widgets Magazine

ಸಂಸದರ ಬಗ್ಗೆ ಶಾಕಿಂಗ್ ಸತ್ಯ ಹೊರತಂದ ಸಮೀಕ್ಷೆ

ನವದೆಹಲಿ, ಗುರುವಾರ, 31 ಆಗಸ್ಟ್ 2017 (09:44 IST)

Widgets Magazine

ನವದೆಹಲಿ: ನಮ್ಮ ದೇಶದ ಸಂಸದರಲ್ಲಿ ಹೆಚ್ಚಿನವರು ಅಪರಾಧ ಹಿನ್ನಲೆಯುಳ್ಳವರು ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಆದರೆ 51 ಸಂಸದರು ಮಹಿಳೆಯರ ವಿರುದ್ಧ ಒಂದಲ್ಲಾ ಒಂದು ರೀತಿ ದೌರ್ಜನ್ಯ ನಡೆಸಿದ ಕ್ರಿಮಿನಲ್ ಗಳೇ ಅಂತೆ!


 
ಹಾಗಂತ ಎಡಿಆರ್ ಎಂಬ ಸ್ವಯಂ ಸಂಘ ನಡೆಸಿದ ಸಮೀಕ್ಷೆ ಸತ್ಯ ಹೊರಹಾಕಿದೆ. ಪ್ರಸಕ್ತ ನಮ್ಮ ದೇಶದಲ್ಲಿ 774 ಸಂಸದರು ಮತ್ತು 4,078 ಶಾಸಕರಿದ್ದಾರೆ. ಇವರ ಪೈಕಿ 1581 ಮಂದಿ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡವರು.
 
ಇವರ ಪೈಕಿ 51 ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದವರು. ಅವರಲ್ಲಿ ನಾಲ್ವರ ಮೇಲೆ ಅತ್ಯಾಚಾರ ಆರೋಪವಿದೆ ಎಂದು ತಿಳಿದು ಬಂದಿದೆ. 334 ಮಂದಿ ಸಂಸದರು ಮತ್ತು ಶಾಸಕರಿಗೆ ತಮ್ಮ ತಮ್ಮ ರಾಜಕೀಯ ಪಕ್ಷಗಳು ಅಪರಾಧ ಹಿನ್ನಲೆಯಿದ್ದರೂ ಚುನಾವಣೆಗೆ ಟಿಕೆಟ್ ನೀಡಿದೆ ಎಂದೂ ತಿಳಿದುಬಂದಿದೆ.
 
ಬಿಜೆಪಿ ಪಕ್ಷದಲ್ಲಿ ಅತೀ ಹೆಚ್ಚು ಮಂದಿ ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದ ಆರೋಪ ಹೊಂದಿರುವ ಶಾಸಕರು ಮತ್ತು ಸಂಸದರಿದ್ದಾರೆ. ಬಿಜೆಪಿಯಲ್ಲಿ ಒಟ್ಟು 14 ಮಂದಿ ಇಂತಹ ರಾಜಕಾರಣಿಗಳಿದ್ದಾರೆ. ಇನ್ನು ದ್ವಿತೀಯ  ಸ್ಥಾನ ಶಿವಸೇನೆ (7), ತೃತೀಯ ಸ್ಥಾನ (6) ಕಾಂಗ್ರೆಸ್ ಗಿದೆ.
 
ಇದನ್ನೂ ಓದಿ.. ಮುಂಬೈ ಮಳೆ ಸಂತ್ರಸ್ತರ ನೆರವಿಗೆ ಸಚಿನ್ ತೆಂಡುಲ್ಕರ್ ರದ್ದು ಹೀಗೊಂದು ಸೇವೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇನ್ನು ಇಂದಿರಾ ಕ್ಯಾಂಟೀನ್ ಇಲ್ಲೂ ಲಭ್ಯ!

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ಮತ್ತಷ್ಟು ಕಡೆಗಳಲ್ಲಿ ...

news

ಸೂಟು ಬೂಟು ಹಾಕಿಕೊಂಡು ರಾಹುಲ್ ಗಾಂಧಿ ಫೋಟೋ ಹಾಕಿದ್ದೇ ತಪ್ಪಾಯ್ತು!

ನವದೆಹಲಿ: ನಾರ್ವೆ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿನ ಉದ್ಯಮಿಯೊಬ್ಬರೊಂದಿಗೆ ತೆಗೆಸಿಕೊಂಡ ...

news

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಬೇಡ: ಮಾಜಿ ಶಾಸಕ

ಮಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡುವುದು ಬೇಡ ಎಂದು ಮಾಜಿ ಶಾಸಕ ...

news

ಸೋನಿಯಾ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಎಫ್‌ಐಆರ್ ದಾಖಲು

ಜೈಪುರ್: ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಮತ್ತಷ್ಟು ಸಂಕಷ್ಟ ...

Widgets Magazine Widgets Magazine Widgets Magazine