ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!

ರಾಮೇಶ್ವರಂ, ಗುರುವಾರ, 27 ಜುಲೈ 2017 (11:18 IST)

ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಸ್ಮಾರಕ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ತಮಿಳುನಾಡು ರಾಜ್ಯಪಾಲ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಧುರೀಣರು ಹಿಡಿದು ನಿಂತಿದ್ದರು.


 
ಇತ್ತೀಚೆಗಷ್ಟೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸುವಾಗ ಹೂ ಬೊಕೆ ನೀಡುವುದರ ಬದಲು ಒಂದು ಪುಸ್ತಕ ಕೊಡಿ ಎಂದು ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಅದನ್ನು ತಮಿಳುನಾಡು ನಾಯಕರು ಚಾಚೂ ತಪ್ಪದೆ ಪಾಲಿಸಿದ್ದಾರೆ.
 
ಪ್ರಧಾನಿ ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಜ್ಯಪಾಲ ವಿದ್ಯಾಸಾಗರ ರಾವ್, ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಒಂದು ಗುಲಾಬಿ ಹೂ ಮತ್ತು ಒಂದು ಪುಸ್ತಕ ನೀಡಿ ಬರಮಾಡಿಕೊಂಡರು. ಪ್ರಧಾನಿ ಮೋದಿ ಕೂಡಾ ತಮಿಳುನಾಡು ನಾಯಕರ ನಡೆಯನ್ನು ಮೆಚ್ಚಿಕೊಂಡರು.
 
ಇದನ್ನೂ ಓದಿ..  ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಪುಸ್ತಕ ಅಬ್ದುಲ್ ಕಲಾಂ ತಮಿಳುನಾಡು ಸರ್ಕಾರ ರಾಷ್ಟ್ರೀಯ ಸುದ್ದಿಗಳು Book Tamilnadu Govt Pm Modi Abdul Kalam National News

ಸುದ್ದಿಗಳು

news

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!

ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ...

news

ಅರ್ಧ ದಿನ ಮಾಜಿ ಸಿಎಂ ಆಗಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್!

ಪಾಟ್ನಾ: ಆರ್ ಜೆಡಿ ಪಕ್ಷಕ್ಕೆ ಸಡ್ಡು ಹೊಡೆದು ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ...

news

ಕೊನೆಗೂ ಅಬ್ದುಲ್ ಕಲಾಂ ಅಭಿಮಾನಿಗಳ ಕನಸು ನನಸಾಯ್ತು!

ರಾಮೇಶ್ವರಂ: ದೇಶ ಕಂಡ ಮಹೋನ್ನತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎರಡನೇ ಪುಣ್ಯ ...

Widgets Magazine