ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ಯುವಕನ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ, ಮಂಗಳವಾರ, 2 ಜನವರಿ 2018 (11:28 IST)

ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯ ಕಡೆಯವರು ಯುವಕನ ಕುಟುಂಬದವರನ್ನು ಅಪಹರಿಸಿ, ಆತನ ತಾಯಿ ಮೇಲೆ ಸಾಮೂಹಿಕ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
 
ಸಂತ್ರಸ್ತ ಮಹಿಳೆ ಭೋಪುರಾ ಗ್ರಾಮದ ನಿವಾಸಿಯಾಗಿದ್ದು ನೋಜಲ್ ಗ್ರಾಮಕ್ಕೆ ಕರೆದೊಯ್ದಿದ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಂತ್ರಸ್ತೆಯ 26 ವರ್ಷದ ಮಗ ಘಾಜಿಯಾಬಾದ್‍ನಲ್ಲಿ ಓದುತ್ತಿದ್ದು, ತನ್ನ ಕ್ಲಾಸ್‍ಮೇಟ್ ಆಗಿದ್ದ 24 ವರ್ಷದ ಯುವತಿ ಜೊತೆ ನವೆಂಬರ್ 20ರಂದು ಓಡಿಹೋಗಿದ್ದರು. ಇವರಿಬ್ಬರು ಪ್ರೀತಿಸಿಕೊಂಡಿದ್ದರು.
 
ಡಿಸೆಂಬರ್ 19ರಂದು ಯುವತಿಯ ಮನೆಯವರು ಯುವಕನ ತಾಯಿ, ತಂದೆ, ಅಣ್ಣ ಹಾಗೂ ಮತ್ತೊಬ್ಬ ಸಹೋದರ ಸಂಬಂಧಿಯನ್ನು ಅಪಹರಿಸಿದ್ದಾರೆ. ಒಂದು ವಾರದ ವರೆಗೆ ಕಿರುಕುಳ ನೀಡಿದ್ದಾರೆ. ಡಿಸೆಂಬರ್ 25ರಂದು ಖಚಿತ ಮಾಹಿತಿ ಸಿಕ್ಕ ನಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ.

ನಂತರ ಸಂತ್ರಸ್ತೆ ನಡೆದ ಘಟನೆಯನ್ನ ವಿವರಿಸಿದ್ದು, ಯುವತಿಯ ತಂದೆ ಹಾಗೂ ಇಬ್ಬರು ಚಿಕ್ಕಪ್ಪಂದಿರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಘಟನೆಯ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೈನಿಕರು ಪ್ರತಿದಿನ ಸಾಯೋದು ಮಾಮೂಲು ಅಂದ ಬಿಜೆಪಿ ಸಂಸದ

ನವದೆಹಲಿ: ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಾ ದೇಶಗಳ ಸೈನಿಕರೂ ಹಾಗೇ. ಅದರಲ್ಲಿ ವಿಶೇಷವೇನೂ ಇಲ್ಲ ಎಂದು ...

news

ಸರ್ಜಿಕಲ್ ಸ್ಟ್ರೈಕ್ ಸೇನೆ ಮಾಡ್ತಿರೋ ನಾಟಕ ಸ್ವಾಮೀ.. ಎಂದ ಕಾಂಗ್ರೆಸ್ ನಾಯಕ!

ನವದೆಹಲಿ: ಭಾರತೀಯ ಸೇನೆ ಪಾಕ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಕಾಂಗ್ರೆಸ್ ನಾಯಕ ...

news

ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ರಮ್ಯಾ ನಡುವೆ ನಡೆದ ಒಪ್ಪಂದ ಏನು ಗೊತ್ತಾ?!

ಬೆಂಗಳೂರು: ನಟಿ ರಮ್ಯಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಯಶಸ್ಸು ಕಂಡ ಬಳಿಕ ರಾಜ್ಯ ...

news

ರಜನಿಕಾಂತ್ ಪಕ್ಷದ ಲೋಗೋ, ವೆಬ್ ಸೈಟ್ ಬಿಡುಗಡೆ ಮಾಡಿದ್ದು ಯಾಕೆ ಗೊತ್ತಾ?

ಚೆನ್ನೈ: ರಜನಿಕಾಂತ್ ಅವರು ತಮ್ಮ ಪಕ್ಷಕ್ಕೆ ಲೋಗೋ, ಆ್ಯಪ್ ಹಾಗು ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ.

Widgets Magazine