ಗಂಡ ಹಾಗೂ ಅತ್ತೆ ಬಲವಂತವಾಗಿ ಇದನ್ನು ತಿನ್ನಿಸಿದ್ದಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ

ಅಹಮದಾಬಾದ್, ಶನಿವಾರ, 14 ಜುಲೈ 2018 (14:29 IST)

ಅಹಮದಾಬಾದ್ : ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ  ಉದಾಹರಣೆಗಳು ಸಾಕಷ್ಟು ಇವೆ. ಆದರೆ ಇಲ್ಲೊಬ್ಬ ಮಹಿಳೆ ಗಂಡ ಹಾಗೂ ಅತ್ತೆ ಸೇರಿಕೊಂಡು ನನಗೆ ಬಲವಂತವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಿಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಮೆಹ್ಸಾನಾದಲ್ಲಿ ನಡೆದಿದೆ.


25 ವರ್ಷದ ಮಹಿಳೆಯೊಬ್ಬಳು,’ ನಾನು ಪಟೇಲ್ ಸಮುದಾಯಕ್ಕೆ ಸೇರಿದ್ದು, ಸ್ವಾಮಿ ನಾರಾಯಣ ಪಂಥದ ಅನುಯಾಯಿಯಾಗಿದ್ದೇನೆ. ಆದ್ದರಿಂದ ನಾವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಆದರೆ ಅತ್ತೆ ಮತ್ತು ಪತಿ ಜತೆ ಸೇರಿ ಈರುಳ್ಳಿ, ಬೆಳ್ಳುಳ್ಳಿ ಮಿಶ್ರಿತ ಆಹಾರವನ್ನು ಬಲವಂತವಾಗಿ ತಿನ್ನಿಸಿದ್ದಾರೆ. ನಾನು ತಿನ್ನಲು ನಿರಾಕರಿಸಿದಾಗ ಅವರಿಬ್ಬರು ಸೇರಿ ನನಗೆ ಥಳಿಸಿದ್ದಾರೆ ಎಂದು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.


ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್ ನ ಮುಖಂಡ !

ಭೋಪಾಲ್ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಕಾಂಗ್ರೆಸ್ ಮುಖಂಡರೊಬ್ಬರು ...

news

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಹೆಚ್ಚು ಅಕ್ಕಿ ಕೊಡಿಸಲಿ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಡಿತ ಮಾಡಿರುವ ಅನ್ನಭಾಗ್ಯ ...

news

ವಿಜಯ್ ಮಲ್ಯ ಥರಾ ಸ್ಮಾರ್ಟ್ ಆಗಿರಿ! ಹೀಗಂತ ಸಲಹೆ ಕೊಟ್ಟ ಕೇಂದ್ರ ಸಚಿವ!

ನವದೆಹಲಿ: ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ತುಂಬಾ ಜಾಣ. ಅವರ ಹಾಗೆ ಸ್ಮಾರ್ಟ್ ...

news

ವಿಧಾನ ಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗೆ ಭರ್ಜರಿ ಸ್ವಾಗತ..!

ಅವರು ವಿಧಾನ ಸಭೆ ಚುನಾವಣೆ ಬಳಿಕ ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇರಲಿಲ್ಲ. ಅಂತಹ ಪರಾಜಿತ ...

Widgets Magazine
Widgets Magazine