ದೇಶಕ್ಕಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ: ಮನಮೋಹನ್ ಸಿಂಗ್

ನವದೆಹಲಿ, ಶನಿವಾರ, 17 ಮೇ 2014 (17:11 IST)

ದೇಶದ ಜನತೆಯನ್ನು ಉದ್ದೇಶಿಸಿ ತಮ್ಮ ಕೊನೆಯ ಭಾಷಣ ಮಾಡಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, "ದೇಶಕ್ಕೆ ಸೇವೆ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ, ನನ್ನ ಜೀವನ ಮತ್ತು ಅಧಿಕಾರಾವಧಿ ತೆರೆದ ಪುಸ್ತಕ ಎಂದು" ಹೇಳಿದ್ದಾರೆ. 
 
ಹಿಂದಿ  ಭಾಷೆಯಲ್ಲಿ ಮಾತನಾಡಿದ ತರುವಾಯ ಇಂಗ್ಲೀಷ್‌ನಲ್ಲಿ ಮಾತನಾಡಿದ ಸಿಂಗ್ ಜನರು ಕೊಟ್ಟ ತೀರ್ಪಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಹೇಳಿದರು. 
 
"ನಾನು ಯಾವಾಗಲೂ ಈ ಮಹಾನ್ ದೇಶಕ್ಕಾಗಿ ಸೇವೆ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ. ಕಳೆದ 10 ವರ್ಷಗಳಲ್ಲಿ ಭಾರತ ಅನೇಕ ಯಶಸ್ಸನ್ನು ಮತ್ತು ಸಾಧನೆಯನ್ನು ಕಂಡಿದೆ. ಅದಕ್ಕಾಗಿ ನಾವು ಹೆಮ್ಮೆ ಪಟ್ಟುಕೊಳ್ಳ ಬೇಕು "ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
 
ರಾಷ್ಟ್ರಪತಿಯನ್ನು ಭೇಟಿಯಾಗಿ ರಾಜೀನಾಮೆಯನ್ನು ನೀಡುವ ಮೊದಲು ಅವರು ತಮ್ಮ ಕೊನೆಯ ಕ್ಯಾಬಿನೆಟ್ ಸಭೆಯನ್ನು ನಡೆಸಿ, 15ನೇ ಲೋಕಸಭೆಯನ್ನು ವಿಸರ್ಜಿಸುವ ನಿರ್ಣಯ ಮಂಡಿಸಿದರು 
 
ಸ್ಥಾನ ತ್ಯಜಿಸಿ ಹೊರಹೋಗುತ್ತಿರುವ ಪ್ರಧಾನಿ ಮತ್ತು ಮಂತ್ರಿ ಮಂಡಲಕ್ಕೆ ಇಂದು ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾತ್ರಿ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಪ್ರತಾಪ್ ಸಿಂಹ ಅವರಿಗೆ ಸಿಕ್ಕಿರುವುದು ಜೆಡಿಎಸ್ ಮತಗಳು: ವಿಶ್ವನಾಥ್

ಮೈಸೂರು: ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಸಿಕ್ಕಿರುವುದು ಜೆಡಿಎಸ್‌ಗೆ ...

ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ಯಡ್ಡಿಗೆ ಡಿವಿಎಸ್ ಟಾಂಗ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ನಾನೂ ಕೂಡಾ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ ...

news

1952 ರ ನಂತರ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಸಂಸದರ ಆಯ್ಕೆ

ಭಾರತದ ಲೋಕಸಭಾ ಚುನಾವಣಾ ಇತಿಹಾಸದ ಪ್ರಥಮ ಚುನಾವಣೆ 1952ರ ಬಳಿಕ ಪ್ರಥಮ ಬಾರಿಗೆ ಅತಿ ಕಡಿಮೆ ಸಂಖ್ಯೆಯ ...

news

ಇದು ಅಪ್ಪಟ ಬಿಜೆಪಿಯ ಜಯ, ಮೋದಿಯ ಜಯವಲ್ಲ: ಸುಷ್ಮಾ ಸ್ವರಾಜ್

ಬಿಜೆಪಿ ಪಕ್ಷ ನಿಚ್ಚಳ ಬಹುಮತ ಸಾಧಿಸಿ ಗೆದ್ದಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತ ಇದು ಅಪ್ಪಟ ಬಿಜೆಪಿಯ ಜಯ ...

Widgets Magazine