ಪ್ರಧಾನಿ ಮೋದಿ ಜನವಿರೋಧಿ ನೀತಿಗೆ ಬೇಸತ್ತು ಬಿಜೆಪಿ ಸಂಸದ ರಾಜೀನಾಮೆ

ನವದೆಹಲಿ, ಶುಕ್ರವಾರ, 8 ಡಿಸೆಂಬರ್ 2017 (15:33 IST)

ಮಹಾರಾಷ್ಟ್ರದ ಗೊಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾ ಪಾಟೋಳೆ ರಾಜೀನಾಮೆ ಬಿಜೆಪಿಯಲ್ಲಿನ ಅಂತರಿಕ ಬಂಡಾಯ ಬಹಿರಂಗವಾಗಿದೆ. 
ಪ್ರಧಾನಿ ಮೋದಿ ಸರಕಾರದ ರೈತ ವಿರೋಧಿ ನೀತಿ, ನೋಟು ನಿಷೇಧ ಮತ್ತು ಜಿಎಸ್‌ಟಿ ವಿಫಲತೆ ಸೇರಿದಂತೆ ತಮ್ಮ ರಾಜೀನಾಮೆಗೆ 14 ಕಾರಣಗಳನ್ನು ನೀಡಿದ್ದಾರೆ. ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
 
ರೈತರ ಸಂಕಷ್ಟಗಳನ್ನು ಪರಿಹರಿಸುವಂತಹ ಯಾವುದೇ ಯೋಜನೆ ಕೇಂದ್ರ ಸರಕಾರದಲ್ಲಿಲ್ಲ. ಪ್ರಧಾನಿ ಮೋದಿ ಬಳಿ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದೆ. ಆದರೆ.ಅವರೂ ನಿರ್ಲಕ್ಷ ತೋರಿದರು ಎಂದು ಕಿಡಿಕಾರಿದ್ದಾರೆ.
 
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಪಾಟೋಳ್, ಚುನಾವಣೆಯಲ್ಲಿ ಎನ್‌ಸಿಪಿ ಪಕ್ಷದ ಪ್ರಭಾವಿ ನಾಯಕ ಪ್ರಫುಲ್ ಪಟೇಲ್ ಅವರನ್ನು ಸೋಲಿಸಿದ್ದರು.
 
"ನಾನು ಬಿಜೆಪಿ ಪಕ್ಷಕ್ಕೆ ಸೇರಿಕೊಂಡ ಉದ್ದೇಶಗಳು ಸುಳ್ಳಾಗಿವೆ, ಆದರೆ ಈಗ ರಾಜೀನಾಮೆ ನೀಡಿದ್ದರಿಂದ ಮನಸ್ಸು ಹಗುರವಾಗಿದೆ. ಮುಂದೆ ಯಾವ ಪಕ್ಷ ಸೇರುತ್ತೇನೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
 
ಪ್ರಧಾನಿ ಮೋದಿ ಯಾರೂ ಪ್ರಶ್ನಿಸುವುದನ್ನು, ಟೀಕಿಸುವುದನ್ನು ಸಹಿಸುವುದಿಲ್ಲ. ಕೇಂದ್ರ ಸಚಿವರು ಸದಾ ಆತಂಕವನ್ನು ಎದುರಿಸುತ್ತಿದ್ದಾರೆ. ನನ್ನ ಹೆಸರು ಕೂಡಾ ಮೋದಿಯ ಹಿಟ್ ಲಿಸ್ಟ್‌ನಲ್ಲಿತ್ತು. ಆದರೆ, ನಾನು ಯಾರಿಗೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುನಿಲ್ ಹೆಗ್ಗರವಳ್ಳಿ ಬೆಳಗೆರೆ ಬಗ್ಗೆ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಖ್ಯಾತ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ...

news

ಮಗಳ ಮೇಲೆ ಅತ್ಯಾಚಾರ ನಡೆಸಿದ ತಂದೆ 43ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

14 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ತಂದೆಗೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಮಹಿಳಾ ಕೋರ್ಟ್ 43 ...

news

ಮರಣಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವತಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮರಣಪತ್ರ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ...

news

ಪತ್ರಕರ್ತ ರವಿಬೆಳಗರೆಯಿಂದ ಸಹೋದ್ಯೋಗಿ ಹತ್ಯೆಗೆ ಸುಪಾರಿ ಸಿಸಿಬಿ ವಶದಲ್ಲಿ ರವಿಬೆಳಗೆರೆ

ಬೆಂಗಳೂರು: ಖ್ಯಾತ ಪತ್ರಕರ್ತನಿಂದ ಮತ್ತೊಬ್ಬ ಪ್ರತಕರ್ತನ ಕೊಲೆಗೆ ಸುಪಾರಿ ಕೊಟ್ಟ ಪ್ರಕರಣವೊಂದು ನಡೆದಿದೆ. ...

Widgets Magazine
Widgets Magazine