ಮೂರು ವರ್ಷದ ಮಗನಿಗೆ ಪಾಪಿ ಮಲತಂದೆ ಮಾಡಿದ್ದಾದರೂ ಏನು ಗೊತ್ತಾ...?

ಮಧ್ಯಪ್ರದೇಶ, ಬುಧವಾರ, 24 ಜನವರಿ 2018 (15:48 IST)

: ಮೂರು ವರ್ಷದ ಮಗನಿಗೆ ಲೆಕ್ಕ ಎಣಿಸಲು ಬರಲಿಲ್ಲವೆಂದು ಮಲತಂದೆಯೊಬ್ಬ ನೇತುಹಾಕಿ ರಕ್ತಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್ ನಲ್ಲಿ ನಡೆದಿದೆ.


ಬಾಲಕನಿಗೆ 10 ರವರೆಗೆ ಸಂಖ್ಯೆ ಎಣಿಸಲು ಬರಲಿಲ್ಲವೆಂದು ಪಾಪಿ ತಂದೆ ಈ ಕೃತ್ಯವೆಸಗಿದ್ದಾನೆ. ಮಗುವನ್ನು ತಲೆಕೆಳಗಾಗಿ ನೇತುಹಾಕಿ ಚಪ್ಪಲಿ, ಬೆಲ್ಟ್ ನಿಂದ ಮನಬಂದಂತೆ ಹೊಡೆದಿದ್ದಾನೆ. ತಾಯಿ ಅದನ್ನು ತಡೆಯಲು ಬಂದಾಗ ಆಕೆಯನ್ನು ಹೊಡೆದಿದ್ದಾನೆ. ನೆರೆಹೊರೆಯವರು ಕೂಡ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಸ್ಥಳೀಯರು ಕೂಡಲೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪಾಪಿ ತಂದೆ ಪರಾರಿಯಾಗಿದ್ದಾನೆ. ನಂತರ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಲೆ, ಕಣ್ಣು, ತುಟಿ ಹಾಗು ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತವರು ನಾಡಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ!

ಮೈಸೂರು : ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯವತಿ ಅವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ...

news

ಓವೈಸಿ ಮೇಲೆ ಅಪರಿಚಿರಿಂದ ಬೂಟು ಎಸೆತ; ಇದಕ್ಕೆ ಓವೈಸಿ ಹೇಳಿದ್ದೇನು ಗೊತ್ತಾ...?

ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ...

news

ಮೋದಿ ಮತ್ತು ಆದಿತ್ಯನಾಥ್ ಅವರಿಗೆ ಯಾಕೆ ಈ ಹುಡುಗಿ ರಕ್ತದಲ್ಲಿ ಪತ್ರ ಬರೆದಿದ್ದು...?

ರಾಯಬರೇಲಿ : ಪ್ರಧಾನಿ ಮೋದಿ ಹಾಗು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಅತ್ಯಾಚಾರಕ್ಕೊಳಗಾದ ...

news

ಮ್ಯಾಟ್ರಿಮೋನಿಯಲ್ಲಿ ಯುವತಿಯಿಂದ ವಂಚನೆ, 3.45 ಲಕ್ಷ ಕಳೆದುಕೊಂಡು ಖಾಸಗಿ ಉದ್ಯೋಗಿ

ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಪರಿಚಯವಾಗಿದ್ದ ಯುವತಿ ಖಾಸಗಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 3.45 ...

Widgets Magazine
Widgets Magazine