ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಕಾಗದದ ಹುಲಿ' ಎಂದು ಟೀಕಿಸಲು ಕಾರಣವೇನು?

ನವದೆಹಲಿ, ಶುಕ್ರವಾರ, 13 ಜುಲೈ 2018 (14:10 IST)

ನವದೆಹಲಿ : ಕಳೆದ ಜೂನ್ ತಿಂಗಳಿನಿಂದ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ. ಈ ಬಗ್ಗೆ ಇದೀಗ ಕಿಡಿಕಾರಿದ ಕಾಂಗ್ರೆಸ್ 'ನರೇಂದ್ರ ಮೋದಿ ಕಾಗದದ ಹುಲಿ' ಎಂದು ಟೀಕಿಸಿದೆ.


ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರು,’ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿರುವುದು ಮೋದಿಯವರ ಗೊಂದಲಮಯ ವಿದೇಶಿ ನೀತಿಗೆ ಒಂದು ಅತ್ಯುತ್ತಮ ಉದಾಹರಣೆ. ಅಮೆರಿಕದ ಒತ್ತಡಕ್ಕೆ ಮಣಿದು, ಭಾರತ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ.


ಇದರಿಂದಾಗಿ ಇಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ಒಳಿತಿಗಾಗಿ ಮೋದಿ, ಭಾರತೀಯರ ಹಿತವನ್ನು ಬಲಿ ಕೊಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ಹಾಗೇ 'ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಮೋದಿಯವರಿಗೆ ತಿಳಿದಿರಬೇಕಿತ್ತು. ಅಮೆರಿಕಕ್ಕೆ ಆದ್ಯತೆ ನೀಡಿ ಭಾರತೀಯರ ಮೇಲೆ ತೈಲ ಬೆಲೆಯ ಹೊರೆ ಹೊರುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟಿ ಪ್ರಿಯಾಂಕ ಚೋಪ್ರಾ ಗೆ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್ ಪಕ್ಷ

ಮುಂಬೈ : ರಾಜಕೀಯ ನಾಯಕರು ಭಾಷಣ ಮಾಡುವ ಭರದಿಂದ ಎಡವಿ ಅಪಹಾಸ್ಯಕ್ಕೆ ಗುರಿಯಾಗಿರುವುದನ್ನು ನಾವು ಹಲವು ಬಾರಿ ...

news

ಕಾಲೇಜ್ ಆಡಳಿತದ ತರಬೇತಿಯಲ್ಲಿ ಜೀವ ಕಳೆದುಕೊಂಡ ತಮಿಳುನಾಡಿನ ಹುಡುಗಿ

ಕೊಯಮತ್ತೂರಿನ ಖಾಸಗಿ ಕಾಲೇಜಿ ಒಂದರಲ್ಲಿ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿ ನಡೆಸಿದ ಡ್ರಿಲ್ ತರಬೇತಿಯಲ್ಲಿ ...

news

ಕಾಡಾನೆ ದಾಳಿ; ಗಂಭೀರ ಗಾಯ

ಒಂದೆಡೆ ಮಳೆ ಮುಂದುವರೆದು ಜನ ಜೀವನ ತತ್ತರಗೊಳ್ಳುವಂತೆ ಮಾಡಿದ್ದರೆ ಮತ್ತೊಂದೆಡೆ, ಕಾಡಾನೆ ಹಾವಳಿ ಜನರ ...

news

ಗೋಲಿ ಆಡಲು ಬಾರದ ಗೆಳೆಯನನ್ನು ಕೊಲೆ ಮಾಡಿದ ಆರೋಪಿಗಳು ಅರೆಸ್ಟ್!

ಆತ ತನ್ನ ಪಾಡಿಗೆ ತಾನಿದ್ದ. ಗೆಳೆಯರು ಗೋಲಿ ಆಡೋಣ ಬಾ ಕಣೋ ಎಂದು ಕರೆದಿದ್ದಾರೆ. ಆದರೆ ಆತ ಊಹೂಂ... ನಾನು ...

Widgets Magazine
Widgets Magazine