‘ರಾಹುಲ್ ಗಾಂಧಿ ವಿದೇಶಕ್ಕೆ ರಹಸ್ಯವಾಗಿ ಹೋಗುವುದೇಕೆ?’

NewDelhi, ಬುಧವಾರ, 9 ಆಗಸ್ಟ್ 2017 (08:21 IST)

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವಾಗ ಯಾಕೆ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾಲೆಳೆದಿದ್ದಾರೆ.


 
ಇತ್ತೀಚೆಗೆ ಗುಜರಾತ್ ನಲ್ಲಿ ಕಾಂಗ್ರೆಸ್ ಯುವರಾಜನ ಬೆಂಗಾವಲು ಪಡೆ ಕಾರಿನ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣವನ್ನು ಉಲ್ಲೇಖಿಸಿ ರಾಜನಾಥ್ ಈ ರೀತಿ ಹೇಳಿದ್ದಾರೆ.
 
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ‘ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರು ಉಗ್ರರು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಉಗ್ರರು ಎಲ್ಲಿಂದ ಬಂದರು?’ ಎಂದರು.
 
ಇದಕ್ಕೆ ಪ್ರತಿಕ್ರಿಯಿಸುತ್ತಾ ರಾಜನಾಥ್ ಸಿಂಗ್ ರಾಹುಲ್ ಗಾಂಧಿ ವಿದೇಶ ಪ್ರವಾಸಗಳಿಗೆ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯುವುದಿಲ್ಲ. ಹಾಗಿದ್ದರೆ ಅಷ್ಟೊಂದು ಮುಚ್ಚುಮರೆ ಮಾಡುವಂತಹದ್ದು ಏನಿದೆ ಅಲ್ಲಿ? ಎಂದು ತಿರುಗೇಟು ನೀಡಿದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ರಾಜನಾಥ್ ಸಿಂಗ್ ಸಂಸತ್ತು ರಾಷ್ಟ್ರೀಯ ಸುದ್ದಿಗಳು Rahul Gandhi Rajnath Singh Parliament National News

ಸುದ್ದಿಗಳು

news

ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ: ಅಮಿತ್ ಶಾಗೆ ಮುಖಭಂಗ

ನಿನ್ನೆ ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ...

news

ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ಏನ್‌ ಮಾಡ್ತೀರಾ?: ಪ್ರಧಾನಿ ಮೋದಿಗೆ ಚೀನಾ ನೇರ ಎಚ್ಚರಿಕೆ

ಬೀಜಿಂಗ್: ಡೊಕ್ಲಾಮ್‌ನಲ್ಲಿ ಎರಡು ಸೇನಾಪಡೆಗಳು ಒಂದೇ ಬಾರಿಗೆ ಹಿಂಪಡೆಯಬೇಕು ಎನ್ನುವ ಭಾರತದ ಮನವಿಯನ್ನು ...

news

ಎಐಸಿಸಿ ಕಚೇರಿಯಲ್ಲಿ ಸೋನಿಯಾ ನೇತೃತ್ವದಲ್ಲಿ ತುರ್ತುಸಭೆ

ನವದೆಹಲಿ: ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ತುರ್ತುಸಭೆ ...

news

ಇದು ಜಗತ್ತನ್ನೇ ಬೆಚ್ಚಿ ಬೀಳಿಸುವ ಸುದ್ದಿ ಸ್ಫೋಟ..!

ಜೆನಿಟಿಕಲ್ ವ್ಯತ್ಯಾಸದಿಂದ ಹುಟ್ಟುತ್ತಿರುವ ಮಕ್ಕಳಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಲಿಂಗ ...

Widgets Magazine