ಆಪ್ ಮೂಲಕವೇ ಬಂಜೆತನಕ್ಕೆ ಚಿಕಿತ್ಸೆ ಪಡೆದವಳು ಇದೀಗ ಗರ್ಭಿಣಿ!

NewDelhi, ಶುಕ್ರವಾರ, 21 ಜುಲೈ 2017 (10:39 IST)

ನವದೆಹಲಿ: ತಾಂತ್ರಿಕವಾಗಿ ನಾವು ಇಂದು ಎಷ್ಟು ಮುಂದುವರಿದಿದ್ದೇವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ. ಮಕ್ಕಳಾಗದ ದಂಪತಿಗಳು ವೈದ್ಯರ ಬಳಿ ಚಿಕಿತ್ಸೆಗೆ ಬರುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಆಪ್ ಸಹಾಯದಿಂದ ಸಲಹೆ ಪಡೆದು ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


 
ಕಾಶ್ಮೀರದ ಮಹಿಳೆಯೊಬ್ಬರು ಆಪ್ ಮೂಲಕ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ಸಲಹೆ ಪಡೆದಿದ್ದಾರೆ. ಕಳೆದ ಏಳು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ಈ ಮಹಿಳೆ ಇದೀಗ ಗರ್ಭಿಣಿಯಾಗಿದ್ದಾರೆ.
 
ಐವಿಎಫ್ ಚಿಕಿತ್ಸೆಗೊಳಗಾದ ಬಳಿಕವೂ ಈ ಮಹಿಳೆಗೆ ದೆಹಲಿಗೆ ಬೇಕಾದಾಗಲೆಲ್ಲಾ ಬಂದು ವೈದ್ಯರನ್ನು ಭೇಟಿಯಾಗಲು ಆಗುತ್ತಿರಲಿಲ್ಲ. ಆ ಕಾರಣಕ್ಕೆ ವೈದ್ಯರು ಆಕೆಗೆ ‘ಮೈ ಫಾಲೋ ಅಪ್ ಆಪ್’ ಮೂಲಕ ಸ್ಮಾರ್ಟ್ ಫೋನ್ ನಿಂದೇ ಸಲಹೆ ಸೂಚನೆ ನೀಡಿದ್ದರು.ಇದೀಗ ಈ ರೀತಿ ಆಪ್ ಮೂಲಕ ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಖುಷಿಯಿಂದ ಹೇಳಿಕೊಂಡಿದ್ದಾರೆ. ಹೀಗೊಂದು ಆಪ್ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್ ಗಳಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
 
ಇದನ್ನೂ ಓದಿ..  ಮೈದಾನದಲ್ಲೇ ಸಹ ಆಟಗಾರ್ತಿಗೆ ಕಣ್ಣೀರು ತರಿಸಿದ ಹರ್ಮನ್ ಪ್ರೀತ್ ಕೌರ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮೊಬೈಲ್ ಆಪ್ ಗರ್ಭಿಣಿ ಆಸ್ಪತ್ರೆ ವೈದ್ಯರು Pregnant Hospital Doctors Mobile App

ಸುದ್ದಿಗಳು

news

ಕುಣಿಕೆಯೊಳಗೆ ಬಾಲ್ ಹಾಕಲಾಗದೇ ಒದ್ದಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಕಂಠೀರವ ಸ್ಟೇಡಿಯಂನಲ್ಲಿ ಮೇಲ್ದರ್ಜೆಗೇರಿಸಿದ್ದ ಒಳಾಂಗಣ ...

news

ಮತ್ತೊಂದು ನೋಟ್ ಬ್ಯಾನ್ ಮಾಡ್ತಾರಾ ಮೋದಿ..? 2000 ರೂ. ನೋಟು ತೆರೆಮರೆಗೆ ಸರಿಯುತ್ತಾ..?

ನೋಟ್ ಬ್ಯಾನ್ ಬಳಿಕ ಹಣ ಬದಲಾವಣೆಗೆ ಪರದಾಡಿದ್ದನ್ನ ದೇಶದ ಜನ ಇನ್ನೂ ಮರೆತಿಲ್ಲ. ಅದಾಗಲೇ ಮತ್ತೊಂದು ನೋಟ್ ...

news

ಭಾರತದ ಹಿಂದೂ ರಾಷ್ಟ್ರೀಯವಾದಕ್ಕೆ ನಮ್ಮ ಜತೆ ಯುದ್ಧ ಬೇಕು ಎಂದ ಚೀನಾ

ಬೀಜಿಂಗ್: ಭಾರತದಲ್ಲಿರುವ ಹಿಂದೂ ರಾಷ್ಟ್ರೀಯವಾದಿಗಳಿಗೆ ನಮ್ಮೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಸಿಕ್ಕಿಂ ...

news

ಬೆಂಗಳೂರಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಐವರ ಬಂಧನ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ನಾಗರಿಕ ಸಮಾಜ ತಲೆತಗ್ಗಿಸುವಂತಾ ಘಟನೆ ನಡೆದಿದೆ. 11 ವರ್ಷದ ...

Widgets Magazine