ಪುಂಡಿ ಅಥವಾ ಅಕ್ಕಿ ತರಿಯ ಕಡುಬು...

ಬೆಂಗಳೂರು, ಗುರುವಾರ, 14 ಮಾರ್ಚ್ 2019 (15:46 IST)

ನೀವು ಮುಂಜಾನೆಯ ದಿಢೀರ್ ಉಪಹಾರಕ್ಕಾಗಿ ನೋಡುತ್ತಿದ್ದರೆ ಈ ಪುಂಡಿ ಅಥವಾ ಅಕ್ಕಿ ತರಿಯ ಕಡುಬು ಸರಿಯಾದುದಾಗಿದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದಾಗಿದೆ. ದಕ್ಷಿಣ ಕನ್ನಡದ ಕಡೆ ಇದು ಪುಂಡಿ ಎಂದು ಪ್ರಚಲಿತದಲ್ಲಿದ್ದು ಕರ್ನಾಟಕದ ಇತರೆಡೆ ಅಕ್ಕಿ ತರಿಯ ಕಡುಬು ಎನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ - ಸ್ವಲ್ಪ
ಸಾಸಿವೆ - 1/2 ಚಮಚ
ಉದ್ದಿನ ಬೇಳೆ - 1 ಚಮಚ
ಜೀರಿಗೆ - 1 ಚಮಚ
ಕಡಲೆ ಬೇಳೆ - 1 ಚಮಚ
ಹೆಚ್ಚಿದ ಕರಿಬೇವು - 2 ಚಮಚ
ಉಪ್ಪು - ರುಚಿಗೆ
ಕಾಯಿತುರಿ - 1/2 ಕಪ್
ಅಕ್ಕಿ ರವೆ - 1 ಕಪ್
 
ಮಾಡುವ ವಿಧಾನ:
 
ಒಂದು ಬಾಣಲೆಗೆ 2-3 ಚಮಚ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಕಡಲೆ ಬೇಳೆ ಮತ್ತು ಹೆಚ್ಚಿದ ಕರಿಬೇವನ್ನು ಹಾಕಿ ಬೇಳೆಗಳು ಕೆಂಪಾಗುವವರೆಗೆ ಹುರಿಯಿರಿ. ನಂತರ ಇದಕ್ಕೆ 2 ಕಪ್ ನೀರನ್ನು ಹಾಕಿ. ಸ್ವಲ್ಪ ಕುದಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಇದಕ್ಕೆ ಅಕ್ಕಿ ತರಿಯನ್ನು ಬೆರೆಸಿ ನೀರು ಆರುವವರೆಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ ಉಗಿಯಲ್ಲಿ ಬೇಯಿಸಿಕೊಂಡರೆ ಪುಂಡಿ ಅಥವಾ ಅಕ್ಕಿ ತರಿಯ ಕಡುಬು ಸವಿಯಲು ಸಿದ್ದವಾಗುತ್ತದೆ. ಇದು ಖಾರವಾದ ಚಟ್ನಿ ಮತ್ತು ಸಾಂಬಾರ್ ಜೊತೆ ರುಚಿಯಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇನ್‌ಸ್ಟಂಟ್ ಬೆಣ್ಣೆ ಚಕ್ಕುಲಿ

ಸಾಮಾನ್ಯವಾಗಿ ಚಕ್ಕುಲಿಗೆ ಉದ್ದನ್ನು ಹಾಕಿ ಮಾಡುವುದು ವಾಡಿಕೆ. ಆದರೆ ಉದ್ದನ್ನು ಹಾಕದೇ ಬೆಣ್ಣೆ ...

news

ಪಾಲಾಕ್ ಪಲಾವ್

ಘಮಘಮಿಸುವ ಪಲಾವ್ ಅನ್ನು ಪೋಷಕಾಂಶಗಳ ಗಣಿಯಾಗಿರುವ ಪಾಲಕ್ ಸೊಪ್ಪಿನಿಂದ ಮಾಡಿದರೆ ರುಚಿಗೆ ರುಚಿ, ಆರೋಗ್ಯವು ...

news

ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ...

ಸಾಮಾನ್ಯವಾಗಿ ಎಲ್ಲರೂ ಊಟದ ಜೊತೆಗೆ ಉಪ್ಪಿನಕಾಯಿಯನ್ನು ಬಳಸೇ ಬಳಸುತ್ತಾರೆ. ಉಪ್ಪಿನಕಾಯಿ ...

news

ನರಹುಲಿ (Warts) ಹೇಗೆ ಉಂಟಾಗುತ್ತದೆ? ನಿವಾರಣೆ ಹೇಗೆ?

ಚರ್ಮದ ಮೇಲೆ ನರಹುಲಿ ಅಥವಾ ಸಣ್ಣಗಂತಿಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇಂಗ್ಲೀಷ್‌ನಲ್ಲಿ ...

Widgets Magazine