ಮಟ್ಟುಗುಳ್ಳ ಪೋಡಿ ಮಾಡುವ ಸಿಂಪಲ್ ರೆಸಿಪಿ

ಬೆಂಗಳೂರು, ಮಂಗಳವಾರ, 19 ಸೆಪ್ಟಂಬರ್ 2017 (20:54 IST)

Widgets Magazine

ಮಟ್ಟುಗುಳ್ಳ, ಗುಳ್ಳ ಬದನೆ, ವಾದಿರಾಜ ಗುಳ್ಳ. ಇದು ಉಡುಪಿಯ `ಮಟ್ಟು’ ಗ್ರಾಮದಲ್ಲಿ ಬೆಳೆಯುವ, ವಿಶಿಷ್ಟ ರುಚಿಯಿರುವ ಬದನೆಯ ಒಂದು ಪ್ರಭೇದ.


ತುಳುನಾಡಿನಲ್ಲಿ ಮಾಮೂಲಿ ಬದನೆಗಿಂತ ಜನ ಹೆಚ್ಚು ಇಷ್ಟಪಡುವ ಬದನೆ ಇದು. ಹೀಗಾಗಿ ತುಳುವರು ಇದನ್ನು ಗುಳ್ಳಬದನೆ ಎಂದೇ ಕರೆಯುತ್ತಾರೆ. ಗುಳ್ಳ ಬದನೆಯ ಪೋಡಿ ಮಳೆಗಾಲದ ಚಳಿಗೆ ತುಂಬಾ ರುಚಿ ನೀಡುತ್ತೆ. ಹಾಗಿದ್ರೆ ಮಟ್ಟು ಗುಳ್ಳ ಪೋಡಿ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ…

ಪೋಡಿ
 
ಬೇಕಾಗುವ ಪದಾರ್ಥಗಳು:

ಮಟ್ಟುಗುಳ್ಳ ಬದನೆ – 2
ಚಿಲ್ಲಿ ಪೌಡರ್ – 3 ಚಮಚ
ಅರಿಶಿನ – ½ ಚಮಚ
ಹಿಂಗು - ½ ಚಮಚ
ಉಪ್ಪು – 1 ½ ಚಮಚ
ಅಕ್ಕಿ ಹಿಟ್ಟು - 2 ಚಮಚ
ರವೆ – ಸ್ವಲ್ಪ

ಮಾಡುವ ವಿಧಾನ: ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ಕಟ್ ಮಾಡಿಕೊಳ್ಳಬೇಕು. ಪಾತ್ರೆಗೆ ಕಟ್ ಮಾಡಿಕೊಂಡ ಬದನೆ, ಚಿಲ್ಲಿ ಪೌಡರ್, ಅರಿಶಿನ, ಹಿಂಗು, ಉಪ್ಪು ಹಾಕಿ ಮಿಕ್ಸ್ ಮಾಡಿ 5 ನಿಮಿಷ ನೆನೆಯಲು ಬಿಡಬೇಕು. ಅಕ್ಕಿ ಹಿಟ್ಟು ಮತ್ತು ರವೆಯನ್ನು ಮಿಕ್ಸ್ ಮಾಡಿ ಮತ್ತೊಂದು ಪ್ಲೇಟ್ ನಲ್ಲಿಟ್ಟುಕೊಳ್ಳಬೇಕು. ನಂತರ ತವಾ ಮೇಲೆ ಎಣ್ಣೆ ಹಾಕಿ ಕಾದ ಬಳಿಕ ಕಲಸಿಟ್ಟುಕೊಂಡ ಬದನೆಯನ್ನು ಅಕ್ಕಿಹಿಟ್ಟು ಮತ್ತು ರವೆಯಲ್ಲಿ ಕಲಸಿ ತವಾ ಮೇಲೆ ಇಡಬೇಕು. ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಬೇಕು. ಮಳೆಯಲ್ಲಿ ಬಿಸಿಬಿಸಿಯಲ್ಲಿ ತಿನ್ನಲು ಮಟ್ಟುಗುಳ್ಳ ಪೋಡಿ ರೆಡಿ. ಇದನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಕರಿದರೆ ರುಚಿ ದುಪ್ಪಟ್ಟು.  Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಹೃದಯಾಘಾತ ತಡೆಯಬೇಕಾದರೆ ನೀವು ಹೀಗೆ ಮಾಡಲೇಬೇಕು!

ಬೆಂಗಳೂರು: ಆಧುನಿಕ ಜೀವನದ ಶೈಲಿಯ ಪ್ರಭಾವವೋ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ...

news

ರುಚಿ ರುಚಿಯಾದ ಕ್ಯಾರೆಟ್ ಹಲ್ವಾ ಮಾಡೋದ್ ಹೀಗೆ…

ಹಲ್ವಾಗಳಲ್ಲಿ ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ. ಇದು ಮಾಡುವುದಕ್ಕೂ ತುಂಬಾ ಈಸಿ. ಹಾಗೆ ಸಖತ್ ಟೇಸ್ಟಿ ...

news

ತುಪ್ಪ ತಿಂದರೆ ದಪ್ಪಗಾಗುವುದು ನಿಜಾನಾ?!

ಬೆಂಗಳೂರು: ತುಪ್ಪ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ತಿಂದರೆ ದಪ್ಪಗಾಗುತ್ತೀವಿ ಎಂಬ ಭಯ ಕೆಲವರಿಗೆ. ...

news

ಸ್ಪೈಸಿ.. ಟೇಸ್ಟಿ ಟೇಸ್ಟಿ ಚೀಸ್ ಚಿಕನ್ ಕಬಾಬ್ ರೆಸಿಪಿ…

ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಒಂದು ರೀತಿ ಹಬ್ಬ. ಮಟನ್ ಗಿಂತಲೂ ಹೆಚ್ಚು ಮಂದಿ ಚಿಕನ್ ಲೈಕ್ ...

Widgets Magazine