ಮಿಶ್ರ ತರಕಾರಿಗಳ ಅಕ್ಕಿ ರೊಟ್ಟಿ

ಬೆಂಗಳೂರು, ಸೋಮವಾರ, 15 ಅಕ್ಟೋಬರ್ 2018 (18:26 IST)


ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 1 ಕಪ್ ಅಕ್ಕಿ ಹಿಟ್ಟು
* ಮೆಂತ್ಯ ಸೊಪ್ಪು
* ಸಬ್ಬಸಿಗೆ ಸೊಪ್ಪು
* ಪಾಲಾಕ್ ಸೊಪ್ಪು
* ಕ್ಯಾರೆಟ್
* ಈರುಳ್ಳಿ
* ಮೂಲಂಗಿ
* ಸೌತೆಕಾಯಿ
* ಕರಿಬೇವು
* ಜೀರಿಗೆ
* ಎಳ್ಳು
* ಹಸಿಮೆಣಸಿನ ಕಾಯಿ
* ಹುರಿದು ಪುಡಿ ಮಾಡಿಕೊಂಡ ಶೇಂಗಾ
* ಅರಿಶಿನ
* ಕೊತ್ತಂಬರಿ
* ಕಾಯಿತುರಿ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
  ಮೊದಲು ಕ್ಯಾರೆಟ್, ಸೌತೆಕಾಯಿ, ಮೂಲಂಗಿಯನ್ನು ತುರಿದಿಟ್ಟುಕೊಂಡು ಈರುಳ್ಳಿ, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ಮತ್ತು ಪಾಲಾಕ್ ಸೊಪ್ಪನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ನಂತರ ಹಸಿಮೆಣಸಿನಕಾಯಿ, ಕಾಯಿತುರಿ, ಉಪ್ಪು, ಅರಿಶಿನ, ಕರಿಬೇವು, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ನಂತರ ಅಕ್ಕಿಹಿಟ್ಟಿಗೆ ಈ ಎಲ್ಲಾ ರುಬ್ಬಿರುವ ಮಿಶ್ರಣ, ತುರುದುಕೊಂಡ ತರಕಾರಿ, ಸೊಪ್ಪುಗಳು, ಶೇಂಗಾ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲೆಸಬೇಕು. (ಅವಶ್ಯವಿದ್ದರೆ ಮಾತ್ರ ನೀರನ್ನು ಹಾಕಬೇಕು) ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ತವಾದ ಮೇಲೆ ತೆಳ್ಳಗೆ ರೊಟ್ಟಿಯನ್ನು ತಟ್ಟಿ ಬೇಯಿಸಬೇಕು. ಈ ಬಿಸಿ ಬಿಸಿಯಾದ ರೊಟ್ಟಿಯನ್ನು ತುಪ್ಪದ ಜೊತೆ ಸವಿಯಲು ರುಚಿಕರವಾಗಿರುತ್ತದೆ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಾಜ್ ಮಹಲ್‌ಗೆ ಭೇಟಿ ನೀಡಿದ ವಿಲ್ ಸ್ಮಿತ್..

ಹಾಲಿವುಡ್ ನಟ ವಿಲ್ ಸ್ಮಿತ್ ಭಾರತದ ಪ್ರವಾಸದಲ್ಲಿದ್ದು ನಿನ್ನೆ ಬುಧವಾರ, ಅಕ್ಟೋಬರ್ 10 ರಂದು ...

news

ತಯಾರಿಸಿ ನೋಡಿ ಆರೋಗ್ಯಕರ ಪಾಲಕ್ ದೋಸಾ

ಒಂದು ಬೌಲ್‌ನಲ್ಲಿ ಹುರಿದ ರವಾ, ಸ್ವಚ್ಛಗೊಳಿಸಿ ಹೆಚ್ಚಿದ ಪಾಲಕ್ ಸೊಪ್ಪು, ತೆಂಗಿನ ತುರಿ, ಮೊಸರು, ಉಪ್ಪು, ...

news

ಓಟ್ಸ್ ಕಿಚಡಿ

ಮೊದಲು ಕುಕ್ಕರಿನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ಜೀರಿಗೆ ಮತ್ತು ಇಂಗನ್ನು ಹಾಕಿ. ...

news

ನವರಾತ್ರಿಗೆ ವಿಶೇಷವಾದ ದಿಢೀರ್ ಸಿಹಿ ತಿಂಡಿಗಳು..!!

ನವರಾತ್ರಿ ಹಬ್ಬ ಪ್ರಾರಂಭವಾದರೆ ಸಿಹಿ ತಿಂಡಿಗಳದೇ ಹಾವಳಿಯಿರುತ್ತದೆ. ದಿನಾ ಒಂದೊಂದು ಬಗೆಯ ಸಿಹಿ ...