ತರಕಾರಿ ಬೋಂಡಾ

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (15:09 IST)


ಬೇಕಾಗುವ ಸಾಮಗ್ರಿ:
ಆಲೂಗಡ್ಡೆ 4 
ಬೀಟ್‌ರೋಟ್ - 1/2 ಕಪ್ 
ಸಣ್ಣದಾಗಿ ಹೆಚ್ಚಿದ ಬೀನ್ಸ್ - 2 ಕಪ್ 
ಕ್ಯಾರೇಟ್ - 2 ಕಪ್ 
ಬಟಾಣಿ - 2 ಕಪ್‌ಗಳು 
ಹಸಿಮೆಣಸು - 2 
ಮಧ್ಯಮ ಗಾತ್ರದ ಈರುಳ್ಳಿ - 1/2 
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ 
ಮೆಣಸಿನ ಪುಡಿ - 1 ಚಮಚ 
ಅರಶಿನ ಪುಡಿ - ಸ್ವಲ್ಪ 
ಇಂಗಿನ ಪುಡಿ - ಸ್ವಲ್ಪ 
ಜೀರಿಗೆ ಪುಡಿ - 1/2 ಚಮಚ 
ಗರಮ್ ಮಸಾಲಾ - 1/2 ಚಮಚ 
ತಾಜಾ ಲಿಂಬೆ ರಸ - ಇತರ ಸಾಮಾಗ್ರಿಗಳು 
ಕಡಲೆ ಪುಡಿ - 3 ಕಪ್‌ಗಳು 
ಅಕ್ಕಿ ಪುಡಿ - 1/4 ಕಪ್ 
ಇಂಗಿನ ಪುಡಿ - 1/4 ಚಮಚ 
ಮೆಣಸಿನ ಪುಡಿ - 2 ಚಮಚ 
ಬೇಕಿಂಗ್ ಸೋಡಾ - ಸ್ವಲ್ಪ 
ಎಣ್ಣೆ - ಕರಿಯಲು 
 
ಮಾಡುವ ವಿಧಾನ:
 
ಮೊದಲಿಗೆ ಬಟಾಣಿಯನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ 2-3 ಬಾರಿ ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ. ಕ್ಯಾರೇಟ್ ಬೀನ್ಸ್, ಬೀಟ್‌ರೂಟ್‌ಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ ತದನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಹಸಿಮೆಣಸನ್ನು ಕೂಡ ಸಣ್ಣಗೆ ಹೆಚ್ಚಿಕೊಳ್ಳಿ. ಆಲೂಗಡ್ಡೆ, ನೆನೆಸಿದ ಬಟಾಣಿ, ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಕುಕ್ಕರ್‌ನಲ್ಲಿ ಸಾಕಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. (3 ವಿಶಲ್ ಸಾಕು) ಕುಕ್ಕರ್ ತಣಿದ ಒಡನೆ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬಸಿದುಕೊಂಡು ಒಂದು ಪಾತ್ರೆಗೆ ಹಾಕಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆಲೂಗಡ್ಡೆಯ ಹೊರಭಾಗದ ಸಿಪ್ಪೆಯನ್ನು ತೆಗೆದು ಅದನ್ನು ಚೆನ್ನಾಗಿ ಹಿಸುಕಿಕೊಳ್ಳಿ ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೊದಲಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹುರಿದುಕೊಳ್ಳಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನೆಲೆ, ಇಂಗು, ಅರಶಿನ, ಹಸಿಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ. 
 
ನಂತರ ಗರಮ್ ಮಸಾಲಾವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಈಗ ಮುಂಚಿತವಾಗಿ ಹಿಸುಕಿಕೊಂಡಿರುವ ತರಕಾರಿಗಳು, ಆಲೂಗಡ್ಡೆ, ಬಟಾಣಿ, ಉಪ್ಪು,ಲಿಂಬೆ ರಸ, ಮೆಣಸಿನ ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು 1-2 ನಿಮಿಷಗಳ ಕಾಲ ಹುರಿಯಿರಿ. ತದನಂತರ ಒಂದು ಪಾತ್ರೆಗೆ ಕಡಲೆ ಪುಡಿ, ಇಂಗು, ಮೆಣಸಿನ ಪುಡಿ, ಅಕ್ಕಿ ಪುಡಿ, ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ಬೇಕಾದಷ್ಟು ನೀರನ್ನು ಹಾಕಿಕೊಂಡು ಸ್ವಲ್ಪ ದಪ್ಪನೆಯ ಹಿಟ್ಟನ್ನಾಗಿ ತಯಾರಿಸಿಕೊಳ್ಳಿ. ಇನ್ನು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ನಂತರ ಈ ತರಕಾರಿ ಮಿಶ್ರಣವನ್ನು ಉಂಡೆ ಮಾಡಿಕೊಂಡು ಕಡಲೆ ಹಿಟ್ಟಿಗೆ ಮುಳುಗಿಸಿ ಮತ್ತು ಕರಿಯುವ ಎಣ್ಣೆಗೆ ಇದನ್ನು ಹಾಕಿ. ಬೋಂಡಾದ ಎರಡೂ ಬದಿಗಳನ್ನು ಚೆನ್ನಾಗಿ ಕರಿದುಕೊಳ್ಳಿ. ತರಕಾರಿ ಬೋಂಡಾ ಸವಿಯಲು ಸಿದ್ಧವಾಗಿದೆ. 
ಕೆಚಪ್ ಅಥವಾ ಚಟ್ನಿ ಕಾಂಬಿನೇಶನ್ ಇದಕ್ಕೆ ಉತ್ತಮವಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಡ್ರೈ ಫ್ರೂಟ್ ಕರ್ಜಿಕಾಯಿ

ಮೊದಲು ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಬೆರೆಸಬೇಕು. ನಂತರ ಅದಕ್ಕೆ 2 ಚಮಚ ತುಪ್ಪ, ಉಪ್ಪು ಮತ್ತು ...

news

ವ್ಯಾಸಲೀನ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ಚಳಿಗಾಲದಲ್ಲಿ ಹೇರಳವಾಗಿ ಬಳಕೆಯಾಗುವ ವಸ್ತು ಎಂದರೆ ವ್ಯಾಸಲೀನ್. ಅದರಿಂದ ತ್ವಚೆಗೆ ಮಾತ್ರ ಪ್ರಯೋಜನವಿದೆ ...

news

ಅನಾನಸ್ ಕೊಬ್ಬರಿ ಮಿಠಾಯಿ

ಒಂದು ದಪ್ಪ ತಳದ ಪಾತ್ರೆಯಲ್ಲಿ ಅನಾನಸ್ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ...

news

ಸವಿಯಾದ ಬಾಳೆಹಣ್ಣಿನ ಹಲ್ವಾ

ಬಾಳೆಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಮತ್ತು ...

Widgets Magazine