ಕುಂಬ್ಳೆಗೆ ವಿಶ್ ಮಾಡಿ ಅಭಿಮಾನಿಗಳಿಂದ ಉಗಿಸಿಕೊಂಡ ಬಿಸಿಸಿಐ..!?

ನವದೆಹಲಿ, ಮಂಗಳವಾರ, 17 ಅಕ್ಟೋಬರ್ 2017 (19:37 IST)

ನವದೆಹಲಿ: ಇಂದು ಟೀಂ ಇಂಡಿಯಾ ಅನಿಲ್ ಕುಂಬ್ಳೆ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸೇರಿದಂತೆ ಎಲ್ಲಾ ಗಣ್ಯರು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.


ಆದ್ರೆ ಕುಂಬ್ಳೆಗೆ ವಿಶ್ ಮಾಡೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದು,  ಟ್ಟಿಟ್ಟಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್‌ ಮೂಲಕ ಶುಭಾಶಯ ಕೋರಿರುವು ಬಿಸಿಸಿಐ, 'ಟೀಂ ಇಂಡಿಯಾ ಮಾಜಿ ಬೌಲರ್‌ ಅನಿಲ್‌ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯ' ಎಂದು ಟ್ವೀಟ್ ಮಾಡಿದೆ. ಇದನ್ನು ಕಂಡ ಕ್ರಿಕೆಟ್‌ ಅಭಿಮಾನಿಗಳು ಟ್ವಿಟರ್‌ನಲ್ಲಿಯೇ ಬಿಸಿಸಿಐಗೆ ತರಾಟೆ ತೆಗೆದುಕೊಂಡಿದ್ದಾರೆ.

'ಕೇವಲ ಬೌಲರ್‌ ಅಲ್ಲ ಅವರೊಬ್ಬ ನಾಯಕ, ಕೋಚ್‌ ಮತ್ತು ಅತಿ ಹೆಚ್ಚು ವಿಕೆಟ್‌ ಪಡೆದವರು' ಎಂದು ಜರ್ನಲಿಸ್ಟ್‌ ಮತ್ತು ಲೇಖಕ ದಿಗ್ವಿಜಯ್‌ ಸಿಂಗ್‌ ಡಿಯೋ ಟ್ವಿಟರ್‌ನಲ್ಲಿ ಬಿಸಿಸಿಐಗೆ ಬಿಸಿ ಮುಟ್ಟಿಸಿದ್ದಾರೆ. 'ಗೌರವ ಕೊಟ್ಟು, ಗೌರವ ತಗೊಳ್ಳಿ' ಎಂದು ಅಭಿಮಾನಿಯೋರ್ವ ಬಿಸಿಸಿಐಗೆ ಸೂಚಿಸಿದ್ದಾರೆ.

ಸದ್ಯ ಹೊಸದಾಗಿ ಟ್ವೀಟ್‌ ಮಾಡಿರುವ ಬಿಸಿಸಿಐ, 'ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಹಾಕಿದ್ದಾರೆ. ಜತೆಗೆ ಲೆಜೆಂಡ್‌ ಎಂಬ ಹ್ಯಾಶ್‌ಟ್ಯಾಗ್‌ ಕೂಡ ಹಾಕಿದೆ.

ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗಿನ ವೈಮನಸ್ಸಿನಿಂದ ಕುಂಬ್ಳೆ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಭಾರತದ ಪರ 17 ವರ್ಷ ಕ್ರಿಕೆಟ್‌ ಆಡಿರುವ ಕುಂಬ್ಳೆ, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ (619) ಪಡೆದ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬರ್ತ್ ಡೇ ಬಾಯ್ ಅನಿಲ್ ಕುಂಬ್ಳೆಯನ್ನು ಹೊಗಳಿ ಅಟ್ಟಕ್ಕೇರಿಸಿದ ಸೆಹ್ವಾಗ್

ನವದೆಹಲಿ: ಖ್ಯಾತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಇಂದು 47 ನೇ ಹುಟ್ಟು ಹಬ್ಬದ ಸಂಭ್ರಮ. ಮಾಜಿ ನಾಯಕ ...

news

ಅಪ್ಪ ಧೋನಿಗೇ ನೀರು ಕುಡಿಸಿದ ಮಗಳು ಜೀವಾ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಪುತ್ರಿ ಜೀವಾ ಇದೀಗ ಭಾರೀ ಫೇಮಸ್ಸಾಗಿದ್ದಾಳೆ. ಇತ್ತೀಚೆಗೆ ನಾಯಕ ...

news

ವಿರಾಟ್ ಕೊಹ್ಲಿಯ ಇನ್ನೊಂದು ದಾಖಲೆಗೆ ಕನ್ನ ಹಾಕಿದ ಹಶೀಮ್ ಆಮ್ಲಾ

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯದಲ್ಲಿ 26 ನೇ ಶತಕ ದಾಖಲಿಸಿದ ದ. ಆಫ್ರಿಕಾದ ಬ್ಯಾಟಿಂಗ್ ಕಲಿ ...

news

ವಿರಾಟ್ ಕೊಹ್ಲಿಗೆ ಹೆಚ್ಚು ಕಾಟ ಕೊಟ್ಟ ಆ ಬೌಲರ್ ಯಾರು ಗೊತ್ತಾ?

ಮುಂಬೈ: ವಿಶ್ವವನ್ನೇ ನಡುಗಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆಸ್ಟ್ ಬೌಲಿಂಗ್ ಮಾಡಿದ ಬೌಲರ್ ...

Widgets Magazine
Widgets Magazine