ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರ ನಡುವೆ ಚಿನ್ನಕ್ಕಾಗಿ ಕಿತ್ತಾಟ!

ನವದೆಹಲಿ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಎರಡು ಬ್ಯಾಡ್ಮಿಂಟನ್ ಕಲಿಗಳು ಪಿವಿ ಸಿಂದು, ಸೈನಾ ನೆಹ್ವಾಲ್. ಇವರಿಬ್ಬರೂ ಕಾಮನ್ ವೆಲ್ತ್ ಗೇಮ್ಸ್ ಎಂಬ ಜಾಗತಿಕ ವೇದಿಕೆಯಲ್ಲಿ ಚಿನ್ನದ ಪದಕಕ್ಕಾಗಿ ಮುಖಾ ಮುಖಿಯಾಗಿದ್ದು ಹಿರಿಯ ತಾರೆ ಸೈನಾ ಮೇಲುಗೈ ಸಾಧಿಸಿದ್ದಾರೆ.
ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ನಡುವಿನ ರೋಚಕ ಪಂದ್ಯದಲ್ಲಿ ಸೈನಾ ಸಿಂಧುರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಜತೆಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ತಂದುಕೊಟ್ಟರು.
ಇದು ಸೈನಾ ಅವರ ಎರಡನೇ ಕಾಮನ್ ವೆಲ್ತ್ ಗೇಮ್ಸ್ ಪದಕವಾಗಿದೆ. ಸಿಂಧು ವಿರುದ್ಧ ಜಿದ್ದಾ ಜಿದ್ದಿನ ಹೋರಾಟದಲ್ಲಿ ಅವರು 21-18, 23-21 ಅಂತರದಿಂದ ಗೆದ್ದು ಬೀಗಿದರು. ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
|
|
ಇದರಲ್ಲಿ ಇನ್ನಷ್ಟು ಓದಿ :
ಸಂಬಂಧಿಸಿದ ಸುದ್ದಿ
- ಕಾಮನ್ ವೆಲ್ತ್ ಗೇಮ್ಸ್: ಮಹಿಳೆಯರ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಮೇರಿ ಕೋಮ್
- ಕಾಮನ್ ವೆಲ್ತ್ ಗೇಮ್ಸ್: ಉದ್ದೀಪನಾ ಔಷಧ ಸೇವಿಸಿದ ಆರೋಪಕ್ಕೆ ಗುರಿಯಾದ ಭಾರತೀಯ ಕ್ರೀಡಾಳುಗಳು
- ತಕ್ಕ ಸಮಯಕ್ಕೆ ಮಾಡಬೇಕಾದ್ದನ್ನೇ ಮಾಡಿದರು ಸೈನಾ ನೆಹ್ವಾಲ್!
- ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಬರೆದ ಭಾರತೀಯ ಮಹಿಳೆಯರು
- ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ಚಾನು, ಬೆಳ್ಳಿ ಗೆದ್ದ ಕನ್ನಡಿಗ