ಇಂದಿನಿಂದ ಲೇ ಪಂಗಾ ಎನ್ನಿ..!

ಹೈದರಾಬಾದ್, ಶುಕ್ರವಾರ, 28 ಜುಲೈ 2017 (09:24 IST)

ಹೈದರಾಬಾದ್: ಮತ್ತೊಂದು ಪ್ರೊ ಕಬಡ್ಡಿ ಚಾಂಪಿಯನ್ ಶಿಪ್ ಗೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತದ ದೇಶೀಯ ಕ್ರೀಡೆಯ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿರುವ ಪ್ರೊ ಕಬಡ್ಡಿ ಕೂಟ ಇಂದು ಹೈದರಾಬಾದ್ ನಲ್ಲಿ ಆರಂಭವಾಗಲಿದೆ.


 
ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಮತ್ತು ತಮಿಳ್ ತಲೈವಾಸ್ ನಡುವೆ ನಡೆಯಲಿದೆ. ಇದಕ್ಕೂ ಮೊದಲು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್, ಟಾಲಿವುಡ್, ಸೇರಿದಂತೆ ಸಿನಿ ಕಲಾವಿದರ ದಂಡೇ ಆಗಮಿಸಲಿದೆ. ವರ್ಣ ರಂಜಿತ ಕಾರ್ಯಮ ನಡೆಯಲಿದೆ.
 
ಈ ಬಾರಿ ಮತ್ತೆ ಹೊಸದಾಗಿ ನಾಲ್ಕು ತಂಡಗಳ ಸೇರ್ಪಡೆಯಾಗಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು, ಬಂಗಾಳ, ತೆಲುಗು, ಯು ಮುಂಬಾ, ದಬಾಂಗ್ ಡೆಲ್ಲಿ, ಪುನೇರಿ ಪಲ್ಟಾನ್ಸ್ , ಪಾಟ್ನಾ, ಮತ್ತು ಜೈಪುರ್ ತಂಡಗಳು ಸೆಣಸಿದ್ದವು. ಈ ಬಾರಿ ತಮಿಳು, ಉತ್ತರ ಪ್ರದೇಶ, ಹರ್ಯಾಣ ಮತ್ತು ಗುಜರಾತ್ ತಂಡಗಳು ಸೇರ್ಪಡೆಯಾಗಿವೆ.
 
ಒಟ್ಟು 13 ವಾರ 138 ಪಂದ್ಯಗಳು ನಡೆಯಲಿವೆ. ಹೊಸದಾಗಿ ನಾಲ್ಕು ತಂಡ ಸೇರಿರುವುದರಿಂದ ಕೂಟ ಸ್ವಲ್ಪ ಸುದೀರ್ಘವಾಗಿದೆ. ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ತಂಡ ಲಿಗ್ ಹಂತದಲ್ಲಿ 22 ಪಂದ್ಯಗಳನ್ನಾಡಲಿದೆ. ನಂತರ ಪ್ಲೇ ಆಪ್ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳನ್ನು ರಾತ್ರಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
 
ಇದನ್ನೂ ಓದಿ..  ಕ್ರಿಕೆಟಿಗ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ!

ಗಾಲೆ: ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಅಪೂರ್ವ ಅವಕಾಶ ಸಿಕ್ಕರೂ ಬಳಸಿಕೊಳ್ಳದ ಟೀಂ ...

news

ಬಿಗ್ ಶಾಕ್! ವಿರಾಟ್ ಕೊಹ್ಲಿ ಮತ್ತು ಉದ್ಯೋಗ ಬಿಡಲು ಆದೇಶಿಸಿದ ಬಿಸಿಸಿಐ!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾದ ಇತರ ಕೆಲವು ಆಟಗಾರರಿಗೆ ಬಿಸಿಸಿಐ ಸಾರ್ವಜನಿಕ ಸಂಸ್ಥೆಗಳಲ್ಲಿ ...

news

ಶುರುವಾಯ್ತು ಮಹಿಳಾ ಕ್ರಿಕೆಟಿಗರ ಶುಕ್ರದೆಸೆ!

ನವದೆಹಲಿ: ವಿಶ್ವಕಪ್ ಫೈನಲ್ ವರೆಗೆ ಹೋಗಿ ಬಂದ ಭಾರತ ಮಹಿಳಾ ಕ್ರಿಕೆಟ್ ತಂಡದ ಶುಭ ದಿನಗಳು ಬಂದಿದೆ ಎಂತಲೇ ...

news

ರವಿಶಾಸ್ತ್ರಿ ಕೋಚ್ ಆದ ಹಿಂದಿನ ರಹಸ್ಯ ಬಿಚ್ಚಿಟ್ಟ ಗಂಗೂಲಿ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಮಾಡುವಾಗ ಹಲವು ಗೊಂದಲಗಳು ಉಂಟಾಗಿದ್ದವು. ಅಂತೂ ...

Widgets Magazine