ಗುಡ್ ನ್ಯೂಸ್ ಕೊಟ್ಟ ಸೈನಾ ನೆಹ್ವಾಲ್!

ಹೈದರಾಬಾದ್, ಸೋಮವಾರ, 4 ಸೆಪ್ಟಂಬರ್ 2017 (09:41 IST)

Widgets Magazine

ಹೈದರಾಬಾದ್: ಸೈನಾ ನೆಹ್ವಾಲ್ ತಮ್ಮ ಮೊದಲ ಕೋಚ್ ಗೋಪಿಚಂದ್ ಜತೆಗೆ ಮುನಿಸಿಕೊಂಡು ವಿಮಲ್ ಕುಮಾರ್ ಬಳಿ ಹೋದ ಮೇಲೆ ಯಾಕೋ ಮಂಕಾಗಿದ್ದರು. ಸತತ ಗಾಯ, ಫಾರ್ಮ್ ವೈಫಲ್ಯದಿಂದಾಗಿ ಸೈನಾ ಶೈನ್ ಕಳೆದುಕೊಂಡಿದ್ದರು.


 
ಆದರೆ ಇದೀಗ ಪಿವಿ ಸಿಂಧು ಮಿಂಚುತ್ತಿರುವುದನ್ನು ನೋಡಿ ಸೈನಾಗೆ ಮತ್ತೆ ಮುನಿಸು ಮರೆಯುವ ಮನಸ್ಸಾಗಿರಬೇಕು. ಇದೀಗ ಮತ್ತೆ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಶುರು ಮಾಡಿಕೊಂಡಿದ್ದಾರೆ.
 
ಕಳೆದ ವಾರ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಫೈನಲ್ ಆಡುವಾಗ ಸಿಂಧು ಕೋಚ್ ಆಗಿರುವ ಗೋಪಿಚಂದ್ ಜತೆಗೆ ಸೈನಾ ಮಾತನಾಡಿದ್ದು ಸುದ್ದಿಯಾಗಿತ್ತು. ಅದು ಅವರಿಬ್ಬರ ನಡುವಿನ ಮುನಿಸು ಮರೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಕೊನೆಗೂ ಸೈನಾ ಮತ್ತೆ ಗೋಪಿಚಂದ್ ಅಕಾಡೆಮಿಗೆ ತರಬೇತಿಗೆ ಕಾಲಿಡುವುದರೊಂದಿಗೆ ಈ ಯಶಸ್ವೀ ಜೋಡಿ ಒಂದಾಗುತ್ತಿರುವ ಸೂಚನೆ ಸಿಕ್ಕಿದೆ.
 
ಇದು ಭಾರತದ ಪಾಲಿಗೆ ನಿಜಕ್ಕೂ ಡಬಲ್ ಧಮಾಕವೇ! ಈಗಾಗಲೇ ಗೋಪಿಚಂದ್ ಗರಡಿಯಲ್ಲಿ ಪಳಗಿರುವ ಸಿಂಧು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಒಂದೊಮ್ಮೆ ವಿಶ್ವ ನಂ.1 ಸ್ಥಾನಕ್ಕೇರಿದ್ದ ಸೈನಾ ಮತ್ತೆ ತಮ್ಮ ಹಳೆಯ ಕೋಚ್ ಗೋಪಿಚಂದ್ ಗರಡಿಗೆ ಬಂದಿರುವುದರಿಂದ ಭಾರತದ ಇಬ್ಬರು ಸ್ಟಾರ್ ಗಳು ವಿಶ್ವ ಮಟ್ಟದಲ್ಲಿ ಪ್ರಳಯಾಂತಕರಾಗುವ ಸೂಚನೆ ನೀಡಿದ್ದಾರೆ.
 
ಇದನ್ನೂ ಓದಿ.. ಪ್ರೇಮದಾಸ ಕ್ರೀಡಾಂಗಣದಲ್ಲಿ ಚಾಲಕನಾದ ಧೋನಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಪ್ರೇಮದಾಸ ಕ್ರೀಡಾಂಗಣದಲ್ಲಿ ಚಾಲಕನಾದ ಧೋನಿ

ಕೊಲೊಂಬೊ: ವಿಶ್ವದ ಅತೀ ಶ್ರೀಮಂತ ಕ್ರಿಕೆಟಿಗರ ಪೈಕಿ ಒಬ್ಬರಾದ ಧೋನಿ ಭಾನುವಾರ ಕೊಲೊಂಬೊದ ಪ್ರೇಮದಾಸ ...

news

ಕೊಹ್ಲಿ ಅವತಾರ ನೋಡಿ ಥರ ಥರ ನಡುಗಿತು ತರಂಗಾ ಪಡೆ

ಕೊಲೊಂಬೊ: ಶ್ರೀಲಂಕಾ ವಿರುದ್ಧ ಐದನೇ ಪಂದ್ಯವನ್ನೂ ಆರು ವಿಕೆಟ್ ಗಳಿಂದ ಟೀಂ ಇಂಡಿಯಾ ತನ್ನ ತೆಕ್ಕೆಗೆ ...

news

ಈ ಟೀಂ ಇಂಡಿಯಾ ಆಟಗಾರನಿಗೆ ಮತ್ತೆ ಧೋನಿಯೇ ನಾಯಕನಾಗಬೇಕಂತೆ!

ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಈಗಲೂ ಧೋನಿಯ ಮೇಲೆ ವಿಶೇಷ ಗೌರವ. ಅವರನ್ನು ಈಗಲೂ ನಾಯಕ ಎಂದೇ ...

news

ಟೀಂ ಇಂಡಿಯಾಗೆ ಆಯ್ಕೆಯಾಗಲು ಏನು ಮಾಡಬೇಕು ಗೊತ್ತೇ?! ಗವಾಸ್ಕರ್ ಹೇಳ್ತಾರೆ ಕೇಳಿ!

ಮುಂಬೈ: ಹಿರಿಯ ಬ್ಯಾಟಿಂಗ್ ಕಲಿ ಸುನಿಲ್ ಗವಾಸ್ಕರ್ ಮತ್ತೆ ಟೀಂ ಇಂಡಿಯಾ ವಿರುದ್ಧ ಅಸಮಾಧಾನ ಹೊರ ...

Widgets Magazine