ಒಲಿಂಪಿಕ್ ವಿಜೇತೆ ಸಾಕ್ಷಿ ಮಲಿಕ್ ಗೆ ಹರ್ಯಾಣ ಸರ್ಕಾರ ಮಾಡಿದ ಮರ್ಯಾದೆ ಇದು!

NewDelhi, ಭಾನುವಾರ, 5 ಮಾರ್ಚ್ 2017 (09:25 IST)

ನವದೆಹಲಿ:  ಒಲಿಂಪಿಕ್ಸ್ ಪದಕ ಗೆದ್ದು ತರಬೇಕೆಂಬ ನನ್ನ ಭರವಸೆಯನ್ನು ನಾನು ಪೂರ್ತಿ ಮಾಡಿ ಕೊಟ್ಟಿದ್ದೇನೆ. ನಿಮ್ಮ ಭರವಸೆ ಯಾವಾಗ ಈಡೇರಿಸುತ್ತೀರಿ? ಹೀಗೆಂದು ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹರ್ಯಾಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.


 
ಕಾರಣ, ಒಲಿಂಪಿಕ್ಸ್ ಪದಕ ಗೆದ್ದಾಗ ತಾನು ತನ್ನ ನಾಡಿನ ಹೆಮ್ಮೆಯ ಪುತ್ರಿಗೆ ದೊಡ್ಡ ಮೊತ್ತದ ಬಹುಮಾನ ಹಣ ಕೊಡುತ್ತೇವೆ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಈಗ ಅದನ್ನು ಮರೆತು ನಡೆದುಕೊಳ್ಳುತ್ತಿದೆ. ಇದು ಸಾಕ್ಷಿ ಅಸಮಾಧಾನಕ್ಕೆ ಕಾರಣವಾಗಿದೆ.
 
ಒಲಿಂಪಿಕ್ಸ್ ಕಂಚಿನ ಪದಕ ಗೆದ್ದರೆ 2.5 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿತ್ತು. ಆದರೆ ಆರು ತಿಂಗಳು ಕಳೆದರೂ ತನ್ನ ಮಾತಿನಂತೆ ನಡೆದುಕೊಂಡಿಲ್ಲ. ಬಹುಶಃ ಸರ್ಕಾರ ಜಾಣ ಮರೆವು ಪ್ರದರ್ಶಿಸಿರಬೇಕು. ಅದಕ್ಕೇ ಸಾಕ್ಷಿ ನೆನಪಿಸುವ ಕೆಲಸ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸಾಕ್ಷಿ ಮಲಿಕ್ ಒಲಿಂಪಿಕ್ಸ್ ಹರ್ಯಾಣ ಸರ್ಕಾರ ರಾಷ್ಟ್ರೀಯ ಸುದ್ದಿಗಳು ಕ್ರೀಡಾ ಸುದ್ದಿಗಳು Olympics Saskshi Mallik Haryana Govt National News Sports News

ಕ್ರಿಕೆಟ್‌

news

‘ಟೀಂ ಇಂಡಿಯಾ ಎಂಬ ಹಾವಿನ ತಲೆ ಕಟ್ ಮಾಡಿದೆ, ಬಾಲ ತಾನಾಗೇ ಬಂತು’

ಬೆಂಗಳೂರು: ಹಾವಿನ ತಲೆ ಕಟ್ ಮಾಡಿದೆ. ಬಾಲ ತಾನಾಗಿಯೇ ಮುದುಡಿಕೊಂಡು ಬಿತ್ತು. ಹೀಗಂತ ಭಾರತದ ಬ್ಯಾಟಿಂಗ್ ...

news

ಲಿಯಾನ್ ಬಲೆಯೊಳಗೆ ಬಿದ್ದ ಟೀಂ ಇಂಡಿಯಾ

ಬೆಂಗಳೂರು: ಮೊದಲ ಟೆಸ್ಟ್ ನಲ್ಲಿ ಏನೋ ತಪ್ಪುಗಳಾಯ್ತು. ಮತ್ತೊಮ್ಮೆ ಅಂತಹ ತಪ್ಪು ಮಾಡುವುದಿಲ್ಲ. ...

news

ಕೆಎಲ್ ರಾಹುಲ್ ಸೊಗಸಾದ ಬ್ಯಾಟಿಂಗ್ ಗೆ ಮನಸೋತಿತು ಚಿನ್ನಸ್ವಾಮಿ ಕ್ರೀಡಾಂಗಣ

ಬೆಂಗಳೂರು: ಪುಣೆ ಟೆಸ್ಟ್ ನ ಪ್ರದರ್ಶನ ಮತ್ತೆ ರಿಪೀಟ್ ಮಾಡಲ್ಲ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ...

news

ಇಂದಿನ ಟೀಂ ಇಂಡಿಯಾ ಟೆಸ್ಟ್ ಪಂದ್ಯಕ್ಕೆ ಇವರೇ ವಿಶೇಷ ಅತಿಥಿಗಳು!

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ...

Widgets Magazine
Widgets Magazine