ಅಮ್ಮನಾಗಲಿದ್ದಾರಂತೆ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ!

ಹೈದರಾಬಾದ್, ಸೋಮವಾರ, 23 ಏಪ್ರಿಲ್ 2018 (20:16 IST)

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿಯಂತೆ. ಹೀಗೊಂದು ಸುಳಿವನ್ನು ದಂಪತಿ ಇದೀಗ ಟ್ವಿಟರ್ ಮೂಲಕ ನೀಡಿದ್ದು, ಲಕ್ಷಾಂತರ ಮಂದಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
 
ಇತ್ತೀಚೆಗಷ್ಟೇ ತಮ್ಮಿಬ್ಬರಿಗೆ ಹುಟ್ಟಲಿರುವ ಮಗುವಿಗೆ ಹೇಗೆ ಹೆಸರಿಡುತ್ತೇವೆ ಎಂಬುದರ ಬಗ್ಗೆ ಸಾನಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ ಸಾನಿಯಾ ಇದಕ್ಕೆ ಪೂರಕವಾಗುವ ಸಂದೇಶ ನೀಡುವ ಫೋಟೋ ಪ್ರಕಟಿಸಿದ್ದಾರೆ.
 
ಇದರಲ್ಲಿ ಮಿರ್ಜಾ, ಮಲಿಕ್ ಎಂಬ ಹೆಸರಿನ ಅಂಗಿಯ ಚಿತ್ರ ಪ್ರಕಟಿಸಿದ ಸಾನಿಯಾ ಜತೆಗೆ ಪುಟ್ಟ ಮಗುವಿನ ಉಡುಪು ಪ್ರಕಟಿಸಿದ್ದು, ಅದರ ಮೇಲೆ ಮಿರ್ಜಾ-ಮಲಿಕ್ ಎಂದು ಬರೆದ ಫೋಟೋ ಪ್ರಕಟಿಸಿದ್ದಾರೆ. ಇದನ್ನೇ ಶೊಯೇಬ್ ಕೂಡಾ ರಿ ಟ್ವೀಟ್ ಮಾಡಿದ್ದಾರೆ.
 
ಇದರೊಂದಿಗೆ ಸಾನಿಯಾ-ಶೊಯೇಬ್ ದಂಪತಿ ತಮ್ಮ ಮೊದಲ ಮಗುವಿನ ಆಗಮನದ ಸುದ್ದಿಯನ್ನು ವಿಶಿಷ್ಟವಾಗಿ ಹೇಳಿಕೊಂಡಿದ್ದಾರೆ. ಇದೀಗ ದಂಪತಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪುಣೆ ಮೈದಾನದಲ್ಲಿ ಧೋನಿಗೆ ಅಭಿಮಾನಿಗಳ ಕಾಟ

ಪುಣೆ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಬ್ಯಾಟ್ ಮೂಲಕ ...

news

ತನಿಷ್ಕಾ ಕಪೂರ್‌ಳೊಂದಿಗೆ ವಿವಾಹವಾಗುತ್ತಿಲ್ಲ: ಯಜುವೇಂದ್ರ ಚಾಹಲ್

ನವದೆಹಲಿ: ದಕ್ಷಿಣ ಭಾರತೀಯ ಸಿನೆಮಾ ನಟಿ ತನೀಶ್ಕಾ ಕಪೂರ್‌ರೊಂದಿಗೆ ಡೇಟಿಂಗ್ ನಡೆಸುತ್ತಿರುವುದು ...

news

ಐಪಿಎಲ್: ಕ್ರಿಸ್ ಗೇಲ್, ಕೆಎಲ್ ರಾಹುಲ್ ನೋಡಿ ಹೊಟ್ಟೆ ಉರಿದುಕೊಳ್ತಿದೆಯಂತೆ ಆರ್ ಸಿಬಿ!

ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಆಡುವ ಪರಿ ನೋಡಿ ಇದೀಗ ...

news

ಐಪಿಎಲ್: ವಿರಾಟ್ ಕೊಹ್ಲಿಯ ಕಾಪಾಡಿದ ಸ್ನೇಹಿತ ಎಬಿಡಿ ವಿಲಿಯರ್ಸ್

ಬೆಂಗಳೂರು: ಮತ್ತೊಂದು ಸೋಲು ಬಂದಿದ್ದರೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಗೆ ತವರಿನಲ್ಲೇ ...

Widgets Magazine