ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (10:50 IST)

ಬೆಂಗಳೂರು: 4 ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಂಜನಾ ಆಡಿದ್ದಕ್ಕಿಂತ ಭುವನ್ ಜತೆಗೆ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆ ನಟಿ ಇದೀಗ ವಿವಾಹವಾಗಲಿದ್ದಾರೆ. ಆದರೆ ವರ ಭುವನ್ ಅಲ್ಲ.
 

ಬಿಗ್ ಬಾಸ್ ಮನೆಯೊಳಗೆ ಜತೆ ಜತೆಯಾಗಿರುತ್ತಿದ್ದ ಇವರು ಲವ್ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಬಿಗ್ ಬಾಸ್ ಇವರಿಬ್ಬರೂ ನಾನು ಮತ್ತು ಸಂಜು ಎಂಬ ಧಾರವಾಹಿಯನ್ನೂ ಮಾಡಿದ್ದರು. ಈ ನಡುವೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಸುದ್ದಿ ಜೋರಾಗಿತ್ತು, ಕೊನೆಗೆ ಸಂಜನಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಬೇಕಾಯ್ತು.
 
ಇದೀಗ ಸಂಜನಾ ನಿಜವಾಗಿಯೂ ಮದುವೆಯಾಗುತ್ತಿರುವ ಸುದ್ದಿ ಬಂದಿದೆ. ಸಂಜನಾ ಮದುವೆಯಾಗುತ್ತಿರುವುದು ಅವರ ಸ್ನೇಹಿತ ಗೌರವ್ ಜತೆ. ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದರಂತೆ. ಇದೀಗ ಸಪ್ತಪದಿ ತುಳಿಯುವುದಕ್ಕೆ ರೆಡಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ಮತ್ತೆ ರಿಯಾಜ್ ಮೇಲೆ ಜಗನ್ ಆವಾಜ್!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ಆವೃತ್ತಿಯಲ್ಲಿ ನೀಡಿದ್ದ ಗಂಧದ ಗುಡಿ ಟಾಸ್ಕ್ ನೀಡಿದ್ದು ...

news

ಮುದ್ದಿನರಗಿಣಿ ಸುಧಾರಾಣಿಯವರ ಮಗಳು ಬೆಳ್ಳಿತೆರೆಗೆ

ಬೆಂಗಳೂರು: ತಮ್ಮ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಚಿತ್ರರಸಿಕರ ಮನಗೆದ್ದ ನಟಿ ...

news

ಇವಳು ಐಶ್ವರ್ಯಾ ರೈ ಎಂದು ತಪ್ಪು ತಿಳಿಯಬೇಡಿ ಹಾಗಾದ್ರೆ ಯಾರಿವಳು...?

ಇರಾನ್: ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಲೆ ಇರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಇರಾನಿನ ಬೆಡಗಿ ...

news

ಬಿಗ್ ಬಾಸ್: ಜಸ್ಟ್ ಎಸ್ಕೇಪ್ ಆದ ಜಗನ್, ತಗ್ಲಾಕಂಡ ಚಂದನ್!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದುವರೆಗೆ ಸದಾ ನಾಮಿನೇಟ್ ಆಗುತ್ತಿದ್ದ ಜಗನ್ ಈ ಬಾರಿ ಸೇಫ್ ಆದರೆ, ...

Widgets Magazine
Widgets Magazine