ಬಿಗ್ ಬಾಸ್: ಅನುಪಮಾ ಗೌಡರನ್ನು ಮದುವೆಯಾಗಲು ಇಷ್ಟಪಡ್ತಾರಂತೆ ಜೆಕೆ!

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (09:47 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ದಿಡೀರ್ ಆಗಿ ಕಾಲಿಟ್ಟ ನಿರೂಪಕ ಅಕುಲ್ ಬಾಲಾಜಿ ಮನೆಯೊಳಗೆ ದಿಡೀರ್ ಬೆಂಕಿ ಹಚ್ಚಿದರು. ಅಂದರೆ ರ್ಯಾಪಿಡ್ ಫಯರ್ ರೌಂಡ್ ಪ್ರಶ್ನೆ ಕೇಳಿದರು.
 

ಅದರಂತೆ ಸೂಪರ್ ಸ್ಟಾರ್ ಜೆಕೆ ಮತ್ತು ಶ್ರುತಿಯನ್ನು ಜತೆಗೆ ಕೂರಿಸಿಕೊಂಡು ಪ್ರಶ್ನೆ ಕೇಳಿದ ಅಕುಲ್ ಮೊದಲ ಪ್ರಶ್ನೆಯಲ್ಲೇ ಬೆಂಕಿ ಹಚ್ಚಿದರು.  ಮನೆಯಲ್ಲಿರುವ ಅನುಪಮಾ, ಅಶಿತಾ ಮತ್ತು ಕೃಷಿ ಪೈಕಿ ಯಾರನ್ನು ಮದುವೆಯಾಗುತ್ತೀರಾ?, ಯಾರ ಜತೆ ಡೇಟ್ ಮಾಡ್ತೀರಾ ಮತ್ತು ಯಾರನ್ನು ಕೊಲ್ಲುತ್ತೀರಾ ಎಂದು ಜೆಕೆಗೆ ಪ್ರಶ್ನೆ ಕೇಳಲಾಯಿತು.
 
ಅದಕ್ಕೆ ಉತ್ತರಿಸಿದ ಜೆಕೆ ಅನುಪಮಾ ಜತೆ ಮದುವೆ ಆಗ್ತೀನಿ, ಅಶಿತಾ ಜತೆ ಡೇಟ್ ಮಾಡ್ತೀನಿ, ಕೃಷಿಯನ್ನು ಕೊಲ್ತೀನಿ ಎಂದು ಉತ್ತರಿಸಿದರು. ಅಷ್ಟೇ ಅಲ್ಲ ಮನೆಯಲ್ಲಿರುವ ಸುಂದರ ಹುಡುಗಿ ಯಾರು ಎಂಬ ಪ್ರಶ್ನೆಗೆ ಅಶಿತಾ ಎಂದು ಉತ್ತರಿಸಿದರು. 
 
ಅದೇ ರೀತಿ ಜಗನ್ ಮತ್ತು ಅಶಿತಾರನ್ನು ಕೂರಿಸಿಕೊಂಡೂ ಇದೇ ರೀತಿ ಅಕುಲ್ ದಿಡೀರ್ ಬೆಂಕಿ ಪ್ರಶ್ನೆ ಕೇಳಿ ಕಾಲೆಳೆದರು. ಇದೇ ರೀತಿ ಅಶಿತಾಗೆ ಪ್ರಶ್ನೆ ಕೇಳಿದಾಗ ಅವರು ಜಗನ್ ಜತೆ ಮದುವೆ ಆಗ್ತೀನಿ ಎಂದರೆ, ಜೆಕೆ ಜತೆ ಓಡಿ ಹೋಗ್ತೀನಿ, ಚಂದನ್ ನ ಕೊಲ್ತೀನಿ ಎಂದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಹಾಟ್ ಸನ್ನಿ ಲಿಯೋನ್ ಗೆ ದೇವತೆಯ ಪಾತ್ರ ಕೊಡಬೇಡಿ’ ಬಿಜೆಪಿ ನಾಯಕನ ಎಚ್ಚರಿಕೆ!

ನವದೆಹಲಿ: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಳನ್ನು ಹಿಂದೂ ದೇವತೆಯ ಪಾತ್ರ ನೀಡಿ ದೇವತೆಯಂತೆ ...

news

ಬಿಗ್ ಬಾಸ್ ಮನೆಗೆ ಅಕುಲ್ ಬಾಲಾಜಿಯವರ ದಿಢೀರ್ ಎಂಟ್ರಿ

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಅಕುಲ್ ಬಾಲಾಜಿಯವರು ಆಗಮಿಸಿದ್ದನ್ನು ಕಂಡು ಸ್ಪರ್ಧಿಗಳಿಗೆ ...

news

ಮಗಳನ್ನು ಶಾಲೆಗೆ ಕಳುಹಿಸಲ್ವಾ? ಎಂದು ಪ್ರಶ್ನಿಸಿದ ಮಹಿಳೆಗೆ ಅಭಿಷೇಕ್ ಬಚ್ಚನ್ ಕೊಟ್ಟ ಉತ್ತರ!

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಬಚ್ಚನ್ ಗೆ ಈಗ 6 ...

news

ಸೊಸೆಯನ್ನೇ ಮರೆತ ನಟ ಜಗ್ಗೇಶ್ ಗೆ ನೆನಪಿಸಿದ ಅಭಿಮಾನಿಗಳು!

ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ವಿದೇಶೀ ಯುವತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ...

Widgets Magazine
Widgets Magazine