ಆರಂಭಕ್ಕೂ ಮೊದಲೇ ವಿವಾದಕ್ಕೀಡಾದ ಬಿಗ್ ಬಾಸ್

ಬೆಂಗಳೂರು, ಶುಕ್ರವಾರ, 13 ಅಕ್ಟೋಬರ್ 2017 (09:33 IST)

Widgets Magazine

ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ನಟ ಸುದೀಪ್ ಮತ್ತು ಕಲರ್ಸ್ ವಾಹಿನಿ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.


 
ಇದರೊಂದಿಗೆ ಆರಂಭಕ್ಕೂ ಮೊದಲೇ ಬಿಗ್ ಬಾಸ್ ವಿವಾದಕ್ಕೀಡಾಗಿದೆ. ಕಳೆದ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಮಾಳವಿಕಾರನ್ನು ಸೀಕ್ರೆಟ್ ರೂಂಗೆ ಬಿಡುವಾಗ ಪರಮೇಶ್ವರ್ ಗುಂಡ್ಕಲ್ ಮುತ್ತು ಕೊಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
 
ಇದೀಗ ಅಕ್ಟೋಬರ್ 15 ರಿಂದ ಬಿಗ್ ಬಾಸ್ 5 ನೇ ಆವೃತ್ತಿ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ಮಾಳವಿಕಾಗೆ ಧೈರ್ಯ ತುಂಬಿ ಪರಮೇಶ್ವರ್ ತಬ್ಬಿ, ಸ್ನೇಹಪೂರ್ವಕವಾಗಿ ಮುತ್ತಿಕ್ಕಿದ್ದಾರಷ್ಟೇ. ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.
 
ಒಂದು ವೇಳೆ ಅನೈತಿಕ ಚಟುವಟಿಕೆ ನಡೆದರೆ ನಾನು ಅಲ್ಲಿರುವುದಿಲ್ಲ. ನಮಗೂ ಸಾಮಾಜಿಕ ಜವಾಬ್ದಾರಿಯಿದೆ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್ ಕೂಡಾ ಇದೆಲ್ಲಾ ಒಳಗಿನ ಶತ್ರುಗಳದ್ದೇ ಕೆಲಸ ಎಂದಿದ್ದಾರೆ. ಅದೇನೇ ಇರಲಿ, ಆರಂಭಕ್ಕೂ ಮೊದಲೇ ಬಿಗ್ ಬಾಸ್ ವಿವಾದದ ಮೂಲಕ ಸುದ್ದಿಯಾಗಿದ್ದಂತೂ ನಿಜ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕನ್ನಡ ಕಿಚ್ಚ ಸುದೀಪ್ ಪರಮೇಶ್ವರ್ ಗುಂಡ್ಕಲ್ ಕಲರ್ಸ್ ವಾಹಿನಿ ಕನ್ನಡ ಕಿರುತೆರೆ Kiccha Sudeep Parameshwar Gundkal Colors Channel Kannada Tv Big Boss Kannada

Widgets Magazine

ಸ್ಯಾಂಡಲ್ ವುಡ್

news

ಕುಮಾರಸ್ವಾಮಿ ಭೇಟಿ ಮಾಡಿದ ಶಿವರಾಜ್ ಕುಮಾರ್

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸದ್ಯ ವಿಶ್ರಾಂತಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ...

news

ನಟಿ ಸಂಜನಾಗೆ ವಂಚಿಸಿದ ಚಿಟ್‌ಫಂಡ್ ದಂಪತಿಗಳು ಎಸ್ಕೇಪ್

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಸಂಜನಾ ಸೇರಿದಂತೆ ಹಲವರಿಗೆ ಕೋಟಿಗಟ್ಟಲೆ ವಂಚಿಸಿದ್ದ ದಂಪತಿಗಳು ಇದೀಗ ...

news

ಅಧ್ಯಕ್ಷರಾದ ಪತಿ ಅನುಪಮ್ ಖೇರ್ ಗೆ ಪತ್ನಿ ಕಿರಣ್ ಖೇರ್ ಹೇಳಿದ್ದೇನು?

ಮುಂಬೈ: ಎಫ್ ಟಿಟಿಐ ನೂತನ ಅಧ್ಯಕ್ಷರಾಗಿ ನೇಮಕವಾದ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಗೆ ಬಾಲಿವುಡ್ ನ ...

news

ಸನ್ನಿ ಮಗಳು ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಅಮೆರಿಕಾ: ಸನ್ನಿ ಲಿಯೋನ್ ಪುತ್ರಿ ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮುದ್ದು ಮಗಳ ಬರ್ತ್ ...

Widgets Magazine