ಬಿಗ್ ಬಾಸ್: ನಂಬಿದವರಿಗೆ ಜಾಡಿಸಿ ಒದೀತಾರಂತೆ ದಿವಾಕರ್!

ಬೆಂಗಳೂರು, ಸೋಮವಾರ, 20 ನವೆಂಬರ್ 2017 (10:12 IST)

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶೋನಲ್ಲಿ ಸಾಮಾನ್ಯ ಜನರ ಕೆಟಗರಿಯಲ್ಲಿ ಮನೆ ಒಳಗೆ ಪ್ರವೇಶಿಸಿದ ದಿವಾಕರ್ ಬಗ್ಗೆ ‘ಸ್ನೇಹಿತ’ ರಿಯಾಜ್ ಹೊಸದೊಂದು ಆರೋಪ ಮಾಡಿದ್ದಾರೆ.
 

ದಿವಾಕರ್ ಮತ್ತು ರಿಯಾಜ್ ಭಾರೀ ಚೆಡ್ಡಿ ದೋಸ್ತುಗಳಾಗಿದ್ದವರು. ದಿವಾಕರ್ ಗೆ ಸೆಲೆಬ್ರಿಟಿಗಳು ದಬಾಯಿಸಿದಾಗಲೆಲ್ಲಾ ಬೆನ್ನಿಗೆ ನಿಲ್ಲುತ್ತಿದ್ದ ರಿಯಾಜ್ ಬಾಯಿಯಿಂದಲೇ ಈಗ ದಿವಾಕರ್ ಮೇಲೆ ಆರೊಪ ಬಂದಿದೆ.
 
ಶನಿವಾರ ಚಂದನ್ ಶೆಟ್ಟಿ ಜತೆ ಕೂತುಕೊಂಡು ಮಾತನಾಡುತ್ತಿದ್ದ ರಿಯಾಜ್, ದಿವಾಕರ್ ನನ್ನು ನಂಬುವ ಹಾಗಿಲ್ಲ. ಅವರಿಗೆ ಓವರ್ ಕಾನ್ಫಿಡೆನ್ಸ್ ಬಂದಿದೆ. ನಾನು ಎಷ್ಟು ಸಪೋರ್ಟ್ ಮಾಡ್ತಿದ್ದೆ. ಈಗ ನನ್ನನ್ನೇ ಹೊರಗೆ ಕಳುಹಿಸಿ ನಾನು ಇಲ್ಲಿಂದ ಹೋಗೋದು ಅಂತ ಮಾತಾಡ್ತಿದ್ದಾರೆ. ಅವರೊಂಥರಾ ನಂಬಿದವರಿಗೇ ಜಾಡಿಸ್ತಾರೆ ಎಂದರು. ಈಗ ಎಲ್ಲರೂ ದಿವಾಕರಣ್ಣ ಅಂತ ಕರೀತಾರೆ. ಅವರೂ ಅವರ ಕಡೆಗೆ ಹೋಗ್ತಿದ್ದಾರೆ ಎಂದು ರಿಯಾಜ್ ಚಂದನ್ ಗೆ ಹೇಳಿದ್ದಾರೆ.
 
ಇನ್ನು, ವಾರದ ಕತೆ ಕಿಚ್ಚನ ಜತೆ ಸಂವಾದದಲ್ಲೂ ಕಿಚ್ಚ ಸುದೀಪ್, ನಿಮಗೆ ಸೇವ್ ಆಗ್ತಾ ಇರ್ತೇನೆ ಎನ್ನುವ ಓವರ್ ಕಾನ್ಫಿಡೆನ್ಸ್ ಬಂದಿದೆಯಾ ಎಂದು ಪ್ರಶ್ನಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು

ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ...

news

ಹರ್ಯಾಣದ ಚೆಲುವೆಗೆ ವಿಶ್ವಸುಂದರಿ ಕಿರೀಟ ಸಿಕ್ಕಿದ್ದು ಹೇಗೆ?

ನವದೆಹಲಿ: ಹರ್ಯಾಣದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ರ ವಿಶ್ವಸುಂದರಿ ಸ್ಪರ್ಧೆ ...

news

ಬಿಗ್ ಬಾಸ್: ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಕ್ಕೆ ಜನ ಏನಂತಾರೆ?

ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಈ ವಾರ ಕೊಡಗಿನ ಬೆಡಗಿ ಕೃಷಿ ತಾಪಂಡ ಎಲಿಮಿನೇಟ್ ಆಗಿ ...

news

‘ಅದೇನಾಗುತ್ತೋ ನೋಡೇ ಬಿಡ್ತೀನಿ’ ಬಾಲಿವುಡ್ ಬೆಡಗಿಯ ಸವಾಲ್!

ಮುಂಬೈ: ಪದ್ಮಾವತಿ ಸಿನಿಮಾ ಬಿಡುಗಡೆ ವಿವಾದ ಈಗ ತಾರಕಕ್ಕೇರಿದೆ. ಸಿನಿಮಾ ಬಿಡುಗಡೆಗೆ ವಿಚಾರದಲ್ಲಿ ದೀಪಿಕಾ ...

Widgets Magazine
Widgets Magazine