ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

ಬೆಂಗಳೂರು, ಸೋಮವಾರ, 6 ನವೆಂಬರ್ 2017 (13:32 IST)

ಬೆಂಗಳೂರು: ಮೂರೇ ವಾರದಲ್ಲಿ ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.


ದಯಾಳ್‌ ಪದ್ಮನಾಭ್‌ ಬಿಗ್‌ ಬಾಸ್ ಮನೆಯಿಂದ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಬರೋಕು ಮೊದಲು ಕೆಲವರ ಜತೆ ಸಿಕ್ಕಾಪಟ್ಟೆ ಜಗಳವಾಡಿಕೊಂಡರೆ, ಇನ್ನು ಕೆಲವರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಅನುಪಮಾ ಹಾಗೂ ದಯಾಳ್‌ ನಡುವೆ ಕೊಂಚ ಹೆಚ್ಚೇ ಆತ್ಮೀಯತೆ ಬೆಳೆದುಕೊಂಡಿತ್ತು. ದಯಾಳ್‌ ಮನೆಯಿಂದ ಹೊರಹೋಗುವ ವೇಳೆ ಎಲ್ಲರೂ ಭಾವುಕರಾದ್ರೆ, ಅನುಪಮಾ ಕೊಂಚ ಹೆಚ್ಚಿಗೆ ಭಾವುಕರಾಗಿ ಕಣ್ಣೀರು ಹಾಕಿದ್ರು.

ಮನೆಯಿಂದ ಹೊರಹೋಗುವ ಮುನ್ನ ದಯಾಳ್‌ ಕೂಡ ಕಣ್ಣೀರು ಹಾಕಿದ್ರು. ಮೂರ್ನಾಲ್ಕು ಬಾರಿ ಅನುಪಮಾ ಅವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ರು. ಇವಳನ್ನು ಚೆನ್ನಾಗಿ ನೋಡ್ಕೊಳ್ಳೆ ಎಂದು ಎಲ್ಲರಿಗೂ ಹೇಳಿ ಹೋದರು. ದಯಾಳ್‌ ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಮೇಲೆಯೂ ಅನುಪಮಾ ಅಳೋದು ನಿಲ್ಲಿಸಿರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅನುಪಮಾಳ ಬಳಿ ಬಂದ ಜಗನ್‌, ಸಮಾಧಾನ ಹೇಳುವ ಪ್ರಯತ್ನ ಮಾಡಿದ್ರು. ಅವರು ಎಲ್ಲೂ ಹೋಗಿಲ್ಲ. ಹೊರಗಡೆ ಹೋದ ಮೇಲೆ ಸಿಗ್ತಾರೆ ಅಳೋದು ನಿಲ್ಲಿಸು ಎಂದು ಕೇಳಿಕೊಂಡ್ರು ಜಗನ್‌. ನೀನ್ ಹೋಗು ನಾನಿಲ್ಲೆ ಇದ್ದು ಆಮೇಲೆ ಬರ್ತೀನಿ ಎಂದ್ರು ಅನುಪಮಾ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?

ಮುಂಬೈ: ದೀಪಿಕಾ ಪಡಕೋಣೆ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಯ ...

news

ಬರ್ತ್ ಡೇ ದಿನ ಕಮಲ್ ಹಾಸನ್ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್

ಚೆನ್ನೈ: ರಾಜಕೀಯ ಎಂಟ್ರಿಗೆ ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಜನ್ಮ ದಿನದಂದು ...

news

ಮೋದಿ ಇರುವವರೆಗೂ ಬಿಜೆಪಿಯಲ್ಲಿರುತ್ತೇನೆ: ನಟ ಜಗ್ಗೇಶ್

ಬೆಂಗಳೂರು: ಸಿನಿಮಾ ಮಂದಿ ರಾಜಕೀಯದಲ್ಲಿ ಎಷ್ಟು ದಿನ ಇರ್ತಾರೆ ಅಂತ ಹೇಳಕ್ಕಾಗಲ್ಲ ಎನ್ನುವವರಿಗೆ ನಟ ...

news

ಇದು ಸತ್ಯವಂತೆ ರೀ… ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಂತೆ…!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯಂತೆ. ಹೌದು ಹೀಗಂತ ಕಂಟೆಸ್ಟೆಂಟ್ ಗಳೇ ಹೇಳಿದ್ದಾರೆ. ಜೆಕೆ ...

Widgets Magazine