ಹಾಲು ಕದ್ದ ಕಳ್ಳಬೆಕ್ಕುಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್...

ಬೆಂಗಳೂರು, ಸೋಮವಾರ, 6 ನವೆಂಬರ್ 2017 (23:09 IST)

ಬೆಂಗಳೂರು: `ವಾರದ ಕತೆ ಕಿಚ್ಚನ ಜತೆ’ ಬಿಸಿ ಬಿಸಿ ಚರ್ಚೆಗೆ ಕಾರಣವಾಯ್ತು. ಹಾಲಿನ ವಿಷಯ ಸ್ವಲ್ಪ ಕೋಲಾಹಲವನ್ನೇ ಎಬ್ಬಿಸಿತು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆದರು.


ಸಮೀರ್ ಆಚಾರ್ಯಗೆ ಟೀ ಬದಲು ಹಾಲು ಸೇವಿಸಲು ಒಂದು ಲೋಟ ಹಾಲು ನೀಡಿರಲಿಲ್ಲ. ಎರಡು ದಿನಕ್ಕೆ ಮಾತ್ರ ಹಾಲಿದೆ ಎಂದು ಹಾಲು ನೀಡಲು ಚಂದ್ರು, ದಯಾಳ್‌ ಹಾಗೂ ಆಶಿತಾ ನಿರಾಕರಿಸಿದ್ರು. ಇದು ಇಷ್ಟಕ್ಕೆ ಮುಗಿಯದೆ ದೊಡ್ಡ ಚರ್ಚೆಗೆ ನಾಂದಿಯಾಡಿತು.

ಆದರೆ ಅಲ್ಲಿ ಹಾಲು ಕಡಿಮೆಯಾಗಲು ಕಾರಣವೇನು ಎಂದು ಸ್ವಲ್ಪಹೊತ್ತಲ್ಲೇ ತಿಳಿಯಿತು. ಬಿಗ್‌ ಬಾಸ್‌ ನೀಡಿದ್ದ ಹಾಲನ್ನು ನೀಡಿದ ದಿನವೇ ದಯಾಳ್‌, ಕೃಷಿ ಹಾಗೂ ಅನುಪಮಾ ಹಾಲಿನ ಪ್ಯಾಕೇಟ್‌ ಗಳನ್ನು ಮುಚ್ಚಿಟ್ಟಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಜಗಳವಾದ ಬಳಿಕ ಈ ವಿಷಯ ಸಿಹಿ ಕಹಿ ಚಂದ್ರುಗೆ ತಿಳಿದಿದೆ. ದಯಾಳ್‌ ತೆಗೆದುಕೊಂಡ ಕ್ರಮ ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವಿಷಯವನ್ನ ಗಂಭೀರವಾಗಿ ಚರ್ಚೆಗೆ ತೆಗೆದುಕೊಂಡ ಸುದೀಪ್, ಹಾಲು ಬಚ್ಚಿಟ್ಟವರಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಬೇರೆಯವರಿಗೆ ಕುಡಿಯಲು ಹಾಲು ಇಲ್ಲದ ವೇಳೆ ಹೀಗೆ ತೆಗೆದಿಡುವುದು ಸರಿಯಲ್ಲ ಎಂದರು. ಆದರೆ ದಯಾಳ್ ಮಾತ್ರ ತಾವು ಮಾಡಿದ್ದು ಸರಿ ಎಂದೇ ವಾದಿಸಿದರು. ಇನ್ನು ಮುಂದೆ ಹೀಗಾಗದಂತೆ ಎಚ್ಚೆತ್ತುಕೊಳ್ಳಿ ಎಂದು ಕಿಚ್ಚ ಸುದೀಪ್ ಬುದ್ಧಿವಾದ ಹೇಳಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟ್ರೋಲ್ ನಲ್ಲಿ ಟ್ರೆಂಡಿಗ್ ಏನು… ಕನ್ನಡಿಗರಿಗೆ ಸಂತಸವಾಗಿದ್ದೇಕೆ..?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅರಚಾಡಿ ಕಿರುಚಾಡಿದ್ರು ಮೂರನೇ ವಾರವೇ ದಯಾಳ್ ಪದ್ಮನಾಭನ್ ಮನೆಯಿಂದ ಔಟ್ ...

news

ಯಂಗ್ ಗರ್ಲ್ ಫ್ರೆಂಡ್ ಜತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಮಿಲಿಂದ್

ಮುಂಬೈ: ನಟ ಹಾಗೂ ಫಿಟ್ನೆಸ್‌ ಪ್ರಮೋಟರ್‌ ಮಿಲಿಂದ್‌ ಸೋಮನ್ ನ. 4 ರಂದು 52ನೇ ವಸಂತಕ್ಕೆ ಕಾಲಿಟ್ಟಿದ್ದು, ...

news

ದುರಹಂಕಾರಿಗಳು ಮನೆಯಿಂದ ಹೊರಬರಲಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ಜನ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಆಶಿತಾ ಹಾಗೂ ಜಗನ್ ಮೇಲೆ ವೀಕ್ಷಕರು ಸಖತ್ ಗರಂ ಆಗಿದ್ದಾರೆ. ಮೊದಲು ...

news

ಕಡೆಗೂ ಲವ್ ನಲ್ಲಿ ಬಿದ್ದ Rapper ಚಂದನ್ ಶೆಟ್ಟಿ… ಹುಡುಗಿ ಯಾರು ಗೊತ್ತಾ…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲವ್ ಸ್ಟೋರಿ ಶುರುವಾಗುವ ೆಲ್ಲಾ ಲಕ್ಷಣಗಳು ...

Widgets Magazine
Widgets Magazine