ನಾಟಿ ಮಾಡಲು ಬರುವ ಸಿಎಂ ಎಚ್ ಡಿಕೆಗೆ ಏನೆಲ್ಲಾ ಸ್ಪೆಷಲ್ ಐಟಂ ಮಾಡವ್ರೇ ಮಂಡ್ಯ ಮಂದಿ ಗೊತ್ತಾ?!

ಮಂಡ್ಯ, ಶನಿವಾರ, 11 ಆಗಸ್ಟ್ 2018 (09:17 IST)

ಮಂಡ್ಯ: ಸಿಎಂ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಪೈರು ನಾಟಿ ಮಾಡುವ ಕಾರ್ಯದಲ್ಲಿ ರೈತರೊಂದಿಗೆ ತೊಡಗಿಸಿಕೊಳ‍್ಳಲಿದ್ದಾರೆ.

ರೈತರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ತಾವೇ ಗದ್ದೆಗೆ ಇಳಿದು ನಾಟಿ ಹಾಕಲು ನಿರ್ಧರಿಸಿರುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಇಂದು ಇಲ್ಲಿ ರೈತರಂತೇ ಗದ್ದೆಗೆ ಇಳಿದು ನಾಟಿ ಮಾಡುವುದಲ್ಲದೆ, ಅಲ್ಲಿಯೇ ರೈತರೊಂದಿಗೆ ಊಟ ಮಾಡಲಿದ್ದಾರೆ.

ಈಗಾಗಲೇ ಸೀತಾಪುರದ ಜಮೀನಿನಲ್ಲಿ ಸಿಎಂ ಸ್ವಾಗತಕ್ಕೆ ಸಕಲ ರೀತಿಯ ತಯಾರಿ ನಡೆದಿದೆ. ಸಿಎಂ ಜತೆ ಪೈರು ನಾಟಿ ಮಾಡಲು ಮಹಿಳೆಯರು, ಪುರುಷರು ಸಿದ್ಧರಾಗಿದ್ದಾರೆ. ಕುಮಾರಸ್ವಾಮಿಗಾಗಿ ಮುದ್ದೆ, ಸಾರು ತಯಾರು ಮಾಡುವುದಾಗಿ ರೈತ ಮಹಿಳೆಯರು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧರು

ವೃದ್ಧಾಶ್ರಮ ಎಂದರೆ ವೃದ್ಧರು ಆರಾಮಾಗಿ ತಿಂದುಂಡು ತಮ್ಮ ಕೊನೆ ದಿನಗಳನ್ನು ಕಳೆಯುತ್ತಾರೆ ಎಂದೇ ಎಲ್ಲರೂ ...

news

ಹುಚ್ಚು ಮಂಗಗಳ ದಾಳಿ: ಜನ ತತ್ತರ

ಆ ಊರಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಹುಚ್ಚು ಮಂಗಗಳಂತೂ ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿವೆ. ಹೀಗಾಗಿ ...

news

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ

ರಾಜ್ಯದಲ್ಲಿ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಪ್ರವಾಹ ಭೀತಿ ತಲೆದೋರಿದೆ.

news

ಕೇರಳಕ್ಕೆ 10 ಕೋಟಿ ನೆರವು: ಹೆಚ್ಡಿಕೆ

ರಾಜ್ಯ ಸರಕಾರವು ಪ್ರವಾಹ ಪೀಡಿತವಾಗಿರುವ ಕೇರಳಕ್ಕೆ 10 ಕೋಟಿ ನೆರವು ನೀಡಲು ಮುಂದಾಗಿದೆ.

Widgets Magazine